AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿನ ಜೋಳಿಗೆಗೆ ಕೊರಳೊಡ್ಡಿದ ಮಹಿಳೆ: ತಾಯಿ ಕಾಲಡಿಯಲ್ಲಿ ಮಲಗಿದ್ದ ಕಂದ

ಒಂದು ವರ್ಷದ ತನ್ನ ಮಗುವಿನ ಎದುರೇ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಚಿಕ್ಕಬಳ್ಳಾಪುರ ನಗರದ ಸಿಎಂಸಿ ಬಡಾವಣೆಯಲ್ಲಿ ನಡೆದಿದೆ. ಪತಿ ಮನೆಗೆ ಊಟಕ್ಕೆ ಬಂದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇನ್ನು ಒಂದು ವರ್ಷದ ಪುಟ್ಟ ಕಂದ ಮೃತಪಟ್ಟಿದ್ದ ತಾಯಿಯ ಕಾಲುಗಳ ಬಳಿ ಮಲಗಿತ್ತಂತೆ.

ಮಗುವಿನ ಜೋಳಿಗೆಗೆ ಕೊರಳೊಡ್ಡಿದ ಮಹಿಳೆ: ತಾಯಿ ಕಾಲಡಿಯಲ್ಲಿ ಮಲಗಿದ್ದ ಕಂದ
Jhansi
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ರಮೇಶ್ ಬಿ. ಜವಳಗೇರಾ|

Updated on:May 01, 2025 | 3:40 PM

Share

ಚಿಕ್ಕಬಳ್ಳಾಪುರ, (ಮೇ 01): ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura)  ನಗರದ ಸಿಎಂಸಿ ಬಡಾವಣೆಯಲ್ಲಿ ನಡೆದಿದೆ. ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 23 ವರ್ಷ ಎಸ್. ಝಾನ್ಸಿ ಮೃತ ಗೃಹಿಣಿ. ಗಂಡ ಈಶ್ವರ್ ಮನೆಗೆ ಊಟಕ್ಕೆ ಬಂದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಗಂಡ ಕ್ರೇನ್ ವಾಹನದ ಅಪರೇಟರ್ ಹಾಗೂ ಮಾಲೀಕನಾಗಿದ್ದು ಮನೆಗೆ ಬಂದಾಗ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆದ್ರೆ ದುರಂತ ಅಂದ್ರೆ ಮಹಿಳೆಗೆ 1 ವರ್ಷ 2 ತಿಂಗಳ ಹೆಣ್ಣು ಮಗುವಿದ್ದು ಮಗುವಿನ ಮುಂದೆಯೇ ತಾಯಿ ಸಾವಿನ ಮನೆ ಸೇರಿದ್ದಾಳೆ.

ತಾಯಿಯ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ರೆ ಮಗು ತಾಯಿಯ ಕಾಲುಗಳ ಬಳಿ ಮಲಗಿತ್ತಂತೆ.. ಮಗು ಬಿಟ್ಟು ತಾಯಿ ಅದ್ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುವುದೇ ನಿಗೂಢವಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮನೆಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು. ಗಂಡ ಹೆಂಡತಿ ಇಬ್ಬರು ಚೆನ್ನಾಗಿ ಇದ್ದರು. ಇಬ್ಬರ ನಡುವೆ ಯಾವುದೇ ಸಂಸಾರ ಕಲಹಗಳು ಇರಲಿಲ್ಲವೆಂದು ಮೃತಳ ಸಂಬಂಧಿಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಫ್ರಿಕಾದ 32 ವರ್ಷದ ಮಹಿಳೆಯ ಮೃತದೇಹ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇನ್ನೂ ಮದುವೆಯಾಗಿ ಎರಡು ವರ್ಷದೊಳಗೆ ಗೃಹಿಣಿ ಮೃತ ಪಟ್ಟ ಹಿನ್ನಲೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಎಂ,. ರವರ ಸಮ್ಮೂಖದಲ್ಲೇ ಮರಣೋತ್ತರ ಶವ ಪರೀಕ್ಷೆ ಮಾಡಲಾಯಿತು. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ
Image
ಬೆಂಗಳೂರಿನಲ್ಲಿ ಆಫ್ರಿಕಾದ 32 ವರ್ಷದ ಮಹಿಳೆಯ ಮೃತದೇಹ ಪತ್ತೆ...!
Image
ಮುಸ್ಲಿಂ ವ್ಯಕ್ತಿ ಹತ್ಯೆಯ ಕಾರಣ ನಿಗೂಢ: ಬೂದಿಮುಚ್ಚಿದ ಕೆಂಡವಾದ ಕರಾವಳಿ..!
Image
ಬೇರೆ ಜಾತಿ ಹುಡುಗನ ಪ್ರೀತಿಸಿದ್ದಕ್ಕೆ ಮಗಳ ಕೊಲೆ ಮಾಡಿ ನದಿಗೆ ಎಸೆದ ತಂದೆ
Image
ಇನ್ಸ್ಟಾಗ್ರಾಮ್​ನಲ್ಲಿ ರಾಯಚೂರು-ಚಾಮರಾಜನಗರ ನಂಟು: ಯುವತಿ ಕೊರಳಿಗೆ 3 ಗಂಟು!

ನವದಂಪತಿ ಆತ್ಮಹತ್ಯೆ

ಗದಗ, (ಮೇ 01): ಮದುವೆಯಾದ ಕೇವಲ ಐದೇ ತಿಂಗಳಲ್ಲಿ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. ಪತಿ ವಿಕ್ರಮ ಶಿರಹಟ್ಟಿ(30), ಪತ್ನಿ ಶಿಲ್ಪಾ(28) ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾದ ದಂಪತಿ. ವಿಕ್ರಮ ಹಾಗೂ ಶಿಲ್ಪಾ 2024ರ ಡಿಸೆಂಬರ್ 2ರಂದು ಮದುವೆಯಾಗಿದ್ದರು. ಆದ್ರೆ, ಮೃತ ಶಿಲ್ಪಾ ಶಿರಹಟ್ಟಿ ಬಲಗಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಇತ್ತ ಪತಿ ವಿಕ್ರಮ ಶಿರಹಟ್ಟಿಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ರೆ, ಏಪ್ರಿಲ್ 29ರಂದು ಇಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:00 pm, Thu, 1 May 25