ಕಾಫಿತೋಟದಲ್ಲಿ ನಾಪತ್ತೆಯಾಗಿದ್ದ 1.5 ವರ್ಷದ ಮಗು 12 ಗಂಟೆ ಬಳಿಕ ಸುರಕ್ಷಿತವಾಗಿ ಪತ್ತೆ: ಹೇಗಿತ್ತು ಗೊತ್ತಾ ಖಾಕಿ ಕಾರ್ಯಾಚರಣೆ?
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ಆಟವಾಡುವಾಗ ಕಾಫಿ ತೋಟದಲ್ಲಿ ಕಾಣೆಯಾಗಿದ್ದ 1.5 ವರ್ಷದ ಮಗುವನ್ನು ಪೊಲೀಸರು 12 ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಮಧ್ಯಪ್ರದೇಶ ಮೂಲದ ದಂಪತಿಯ ಮಗುವನ್ನು ಸುರಕ್ಷಿತವಾಗಿ ಪತ್ತೆ ಹಚ್ಚಿ ಪೋಷಕರಿಗೆ ಹಸ್ತಾಂತರಿಸುವಲ್ಲಿ ಬಾಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

ಚಿಕ್ಕಮಗಳೂರು, ಮೇ 08: ಆಟವಾಡುವ ವೇಳೆ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗುವನ್ನು 12 ಗಂಟೆ ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದಿದೆ. ಟೀ ಎಸ್ಟೇಟ್ನಲ್ಲಿ ಕೆಲಸಕ್ಕೆ ಬಂದಿದ್ದ ಮಧ್ಯಪ್ರದೇಶ ಮೂಲದ ಗೋನು, ಸೋನು ದಂಪತಿಯ 1.5 ವರ್ಷದ ಗಂಡು ಮಗು ನಿನ್ನೆ ಸಂಜೆ ಕಳೆದುಹೋಗಿತ್ತು. ಮೂಡಿಗೆರೆ ಸಿಪಿಐ, ಬಾಳೂರು ಪಿಎಸ್ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಗುವನ್ನು ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ.
- ಆಟವಾಡುವ ವೇಳೆ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗು ಪತ್ತೆ
- 12 ಗಂಟೆ ಕಾರ್ಯಾಚರಣೆ ನಡೆಸಿ 1.5 ವರ್ಷದ ಗಂಡು ಮಗುವಿನ ರಕ್ಷಣೆ
- ಚಿಕ್ಕಮಗಳೂರಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಘೋರ ದುರಂತ; ಒಂದೇ ಕುಟುಂಬದ ನಾಲ್ಕು ಮಕ್ಕಳು ಜಲಸಮಾಧಿ
ಮೂವರು ಮಕ್ಕಳ ಜೊತೆ ಆಡವಾಡುತ್ತಾ ಕಾಫಿ ತೋಟಕ್ಕೆ ಬಂದಿದ್ದ ಮಗು ನಾಪತ್ತೆಯಾಗಿತ್ತು. ತೀವ್ರ ಹುಡುಕಾಟದ ನಂತರ ಮಗು ಸುರಕ್ಷಿತವಾಗಿ ಪತ್ತೆಯಾಗಿದ್ದು, ಶೋಧ ನಡೆಸುವವರ ಕಣ್ಣಿಗೆ ಮಗು ಬೀಳುವಾಗ ಅದು ಮಲಗಿತ್ತು ಎಂಬುದು ಗೊತ್ತಾಗಿದೆ. ನಿನ್ನೆ ಸಂಜೆ ಕಳೆದುಹೋಗಿದ್ದ ಮಗುವನ್ನು ಸತತ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಂದು ಬೆಳಗ್ಗೆ ತೋಟದಲ್ಲಿ ಪತ್ತೆಮಾಡಿ, ಹೆತ್ತವರ ಮಡಿಲಿಗೆ ಮರಳಿ ಸೇರಿಸಿದ್ದಾರೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಟ್ ಆ್ಯಂಡ್ ರನ್‌ಗೆ ವ್ಯಕ್ತಿ ಬಲಿ
ಬೆಂಗಳೂರು ನಗರದ ಕಬ್ಬನ್‌ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಟ್ ಌಂಡ್ ರನ್‌ಗೆ ವ್ಯಕ್ತಿಯೋರ್ವರು ಬಲಿಯಾಗಿರುವ ಘಟನೆ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಿಂದ ಪಾದಚಾರಿ ಶ್ರೀನಿವಾಸ್(55) ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಬ್ಬನ್‌ಪಾರ್ಕ್ ಸಂಚಾರಿ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಅಪಘಾತದ ತೀವ್ರತೆಗೆ ಶ್ರೀನಿವಾಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಂದು (ಮೇ 8) ಬೆಳಿಗ್ಗೆ ಘಟನೆ ನಡೆದಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:26 pm, Fri, 8 May 26





