AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡಿನಲ್ಲಿ ಹೆಚ್ಚಾದ ನಿಧಿಗಳ್ಳರು; ಕ್ರಮಕ್ಕೆ ಚಿತ್ರದುರ್ಗ ಜನರ ಆಗ್ರಹ

ಭಕ್ತರು ವಿಶೇಷವಾಗಿ ಜಾತ್ರೆಯನ್ನು ಆಚರಿಸುತ್ತಾರೆ. ಆದರೆ ಇಂತಹ ಅಪರೂಪದ ಪುಣ್ಯಸ್ಥಳದ ಮೇಲೆ ನಿಧಿಗಳ್ಳರ ಕೆಂಗಣ್ಣು ಬಿದ್ದಿದೆ. ಗಾದ್ರಿ ಪಾಲನಾಯಕ ಹುಲಿ ಜೊತೆ ಕಾದಾಡುವ ವೇಳೆ ಕೊಡಲಿ ಇದೇ ಪ್ರದೇಶದಲ್ಲಿ ಉಳಿದಿದೆ ಎಂಬ ಪ್ರತೀತಿ ಇದೆ.

ಕೋಟೆನಾಡಿನಲ್ಲಿ ಹೆಚ್ಚಾದ ನಿಧಿಗಳ್ಳರು; ಕ್ರಮಕ್ಕೆ ಚಿತ್ರದುರ್ಗ ಜನರ ಆಗ್ರಹ
ಗಾದ್ರಿ ಪಾಲನಾಯಕನ ಸಮಾಧಿ
Follow us
sandhya thejappa
|

Updated on: Mar 17, 2021 | 12:46 PM

ಚಿತ್ರದುರ್ಗ: ಕೋಟೆನಾಡಿನಲ್ಲಿ ಅನೇಕ ಐತಿಹಾಸಕ ಸ್ಮಾರಕಗಳಿವೆ. ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ನಾಯಕರ ಸಮಾಧಿ ಸ್ಮಾರಕಗಳಿವೆ. ಆದರೆ ಪುಣ್ಯಸ್ಥಳಗಳೂ ಕೂಡಾ ನಿಧಿಗಳ್ಳರ ಹಾವಳಿಯಿಂದಾಗಿ ವಿರೂಪಗೊಳ್ಳುತ್ತಿದ್ದು, ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ. ವಾಲ್ಮೀಕಿ ನಾಯಕ ಸಮುದಾಯದ ಸಾಂಸ್ಕೃತಿಕ ನಾಯಕ ಗಾದ್ರಿ ಪಾಲನಾಯಕ ಆಂಧ್ರದಿಂದ ಚಿತ್ರದುರ್ಗದ ಮಿಂಚೇರಿಯತ್ತ ಸಾಗಿ ಬಂದಿದ್ದನು. ಆಗ ಕಾಡಿನಲ್ಲಿ ಗಾದ್ರಿ ಪಾಲನಾಯಕ ಹುಲಿ ಜೊತೆ ಕಾದಾಡುತ್ತಾನೆಂಬ ಕಥೆಯಿದೆ. ಅಂತೆಯೇ ಗಾದ್ರಿ ಪಾಲನಾಯಕನ ಸಮಾಧಿ, ಗಾದ್ರಿ ಪಾಲನಾಯಕ ಸಾಕಿದ್ದ ಹಸುವಿನ ಸಮಾಧಿ ಹಾಗೂ ಹುಲಿಯ ಸಮಾಧಿ ಡಿ.ಮೆದಕೇರಿಪುರ ಗ್ರಾಮದ ಬಳಿಯ ಮಿಂಚೇರಿ ಗುಡ್ಡಗಾಡು ಪ್ರದೇಶದಲ್ಲಿದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ವರ್ಷಕ್ಕೊಮ್ಮೆ ನಾಯಕ ಸಮುದಾಯದ ಸಾವಿರಾರು ಜನ ಈ ಗಾದ್ರಿ ಪಾಲನಾಯಕನ ಸಮಾಧಿಗೆ ಭೇಟಿ ನೀಡಿ ಭಕ್ತಿ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಭಕ್ತರು ವಿಶೇಷವಾಗಿ ಜಾತ್ರೆಯನ್ನು ಆಚರಿಸುತ್ತಾರೆ. ಆದರೆ ಇಂತಹ ಅಪರೂಪದ ಪುಣ್ಯಸ್ಥಳದ ಮೇಲೆ ನಿಧಿಗಳ್ಳರ ಕೆಂಗಣ್ಣು ಬಿದ್ದಿದೆ. ಗಾದ್ರಿ ಪಾಲನಾಯಕ ಹುಲಿ ಜೊತೆ ಕಾದಾಡುವ ವೇಳೆ ಕೊಡಲಿ ಇದೇ ಪ್ರದೇಶದಲ್ಲಿ ಉಳಿದಿದೆ ಎಂಬ ಪ್ರತೀತಿ ಇದೆ. ಹೀಗಾಗಿ, ನಿಧಿಗಳ್ಳರು ಪದೇಪದೇ ಗಾದ್ರಿ ಪಾಲನಾಯಕನ ಸಮಾಧಿ ಅಗೆದು ವಿರೂಪಗೊಳಿಸುತ್ತಿದ್ದಾರೆ. ಆ ಮೂಲಕ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಆಗಿದೆಯಾಗಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಾದ್ರಿ ಪಾಲನಾಯಕನ ಸಮಾಧಿಗೆ ನಮಸ್ಕರಿಸುತ್ತಿರುವ ಭಕ್ತರು

ಗಾದ್ರಿ ಪಾಲನಾಯಕನ ಸಮಾಧಿ, ಗಾದ್ರಿ ಪಾಲನಾಯಕ ಸಾಕಿದ್ದ ಹಸುವಿನ ಸಮಾಧಿ ಹಾಗೂ ಹುಲಿಯ ಸಮಾಧಿ ಡಿ.ಮೆದಕೇರಿಪುರ ಗ್ರಾಮದ ಬಳಿಯ ಮಿಂಚೇರಿ ಗುಡ್ಡಗಾಡು ಪ್ರದೇಶದಲ್ಲಿದೆ ಎಂಬ ನಂಬಿಕೆ ಜನರಲ್ಲಿದೆ

ಭಕ್ತರ ಆಗ್ರಹ ಗಾದ್ರಿ ಪಾಲನಾಯಕ, ಹುಲಿ ಸಮಾಧಿ ಹಾಗೂ ಮಿಂಚೇರಿ ಗಂಗಾಜಲ ದೊರಕುವ ಪುಣ್ಯಸ್ಥಳವೂ ಇದೆ. ಅಂತೆಯೇ ಈ ಪುಣ್ಯಭೂಮಿಗೆ ಬಂದರೆ ಕಷ್ಟ ಕಾರ್ಪಣ್ಯಗಳು ದೂರಾಗುತ್ತದೆ ಎಂಬ ನಂಬಿಕ ಜನರಲ್ಲಿದೆ. ಇಂತಹ ಅಪರೂಪದ ಪ್ರದೇಶಕ್ಕೆ ನಿಧಿಗಳ್ಳರ ಕಾಟ ಶುರುವಾಗಿದೆ. ಈಗಾಗಲೇ ನಾಲ್ಕಾರು ಸಲ ಸಮಾಧಿ ಅಗೆದು ನಿಧಿಗಳ್ಳರು ವಿರೂಪಗೊಳಿಸಿ ಭಕ್ತರ ಮನಸ್ಸಿಗೆ ಘಾಸಿ ಮಾಡಿದ್ದಾರೆ. ಇದರಿಂದ ಜಿಲ್ಲಾಡಳಿತ ಈ ಐತಿಹಾಸಿಕ ಸ್ಥಳದ ಬಗ್ಗೆ ಗಮನಹರಿಸಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂಬುದು ಭಕ್ತರು ಆಗ್ರಹಿಸುತ್ತಿದ್ದಾರೆ.

ಈ ಪುಣ್ಯಭೂಮಿಗೆ ಬಂದರೆ ಕಷ್ಟ ಕಾರ್ಪಣ್ಯಗಳು ದೂರಾಗುತ್ತದೆ ಎಂಬ ನಂಬಿಕ ಜನರಲ್ಲಿದೆ

ಇದನ್ನೂ ಓದಿ

ಗನ್ ಹಿಡಿದು ಹೋರಾಡಿದ ವೀರಯೋಧ, ಈಗ ಸಂಗೀತ ಸಾಧನಗಳ ಹಿಡಿದಿದ್ದಾರೆ

PhonePe Primary Account: ಫೋನ್​ಪೇ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಾವಣೆ 6 ಹಂತಗಳಲ್ಲಿ ಮಾಡುವುದು ಹೇಗೆ ತಿಳಿಯಿರಿ