AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ: ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್​​ನೋಟ್​​ನಲ್ಲಿ ಸ್ಫೋಟಕ ಮಾಹಿತಿ

ಚಿತ್ರದುರ್ಗದಲ್ಲಿ BAMS ವಿದ್ಯಾರ್ಥಿನಿ ನಿಖಿತಾ ಆತ್ಮಹತ್ಯೆ ಪ್ರಕರಣದ ಡೆತ್ ನೋಟ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಪ್ರಾಧ್ಯಾಪಕ ರಾಜು ಜತೆ ಸುಳ್ಳು ಸಂಬಂಧ ಕಲ್ಪಿಸಿ, ಅಪಪ್ರಚಾರ ಮಾಡಿದ್ದರಿಂದ ಆಕೆ ತೀವ್ರವಾಗಿ ನೊಂದಿದ್ದಳು. ಪ್ರಾಧ್ಯಾಪಕರು ತಂದೆ ಸಮಾನ ಎಂದಿದ್ದ ನಿಖಿತಾ, ಅವರ ಪತ್ನಿ ಹಾಗೂ ಸಹಪಾಠಿಗಳೇ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾಳೆ. ಮಾನಸಿಕ ಹಿಂಸೆಯಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾಳೆ.

ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ: ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್​​ನೋಟ್​​ನಲ್ಲಿ ಸ್ಫೋಟಕ ಮಾಹಿತಿ
ಮೃತ ವಿದ್ಯಾರ್ಥಿನಿImage Credit source: Tv9 Kannada
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Apr 02, 2026 | 3:17 PM

Share

ಚಿತ್ರದುರ್ಗ, ಏಪ್ರಿಲ್​​ 02: ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಆರೋಪ ಸಂಬಂಧ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ BAMS ವಿದ್ಯಾರ್ಥಿನಿ‌ ನಿಖಿತಾ(23) ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ವಿಚಾರಗಳು ಬಯಲಾಗಿವೆ. ರಾಜು, ಪತ್ನಿ ನಿಶಾ, ಕೆಲ ವಿದ್ಯಾರ್ಥಿನಿಯರ ಹೆಸರನ್ನು ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವರ ವಿರುದ್ಧ ಕೇಸ್​​ ಕೂಡ ಆಗಿದೆ. ಈ ನಡುವೆ ಸಾವಿಗೂ ಮುನ್ನ ನಿಖಿತಾ ಬರೆದ ಡೆತ್​​ನೋಟ್​​ ಲಭ್ಯವಾಗಿದ್ದು, ಆಕೆ ಮಾನಸಿಕವಾಗಿ ತೀವ್ರ ನೊಂದಿದ್ದಳು ಎಂಬುದು ಇದರಿಂದ ಬಹಿರಂಗಗೊಂಡಿದೆ.

ನಿಖಿತಾ ಡೆತ್​​ನೋಟ್​​ನಲ್ಲಿ ಏನಿದೆ?

ಉಪನ್ಯಾಸಕ ರಾಜು ಪತ್ನಿ ನಿಶಾ ಹಾಗೂ ನನ್ನ ಸಹಪಾಠಿಗಳಿಂದ ಅವಮಾನ ಆಗಿದ್ದು, ನನಗೂ ರಾಜು ಸರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ನನಗೆ ಪೋಷಕರ ಸಮಾನ. ಹೀಗಿದ್ದರೂ ನನ್ನ ಕೆಟ್ಟ ಸ್ನೇಹಿತರಿಂದ ನನ್ನ ಚಾರಿತ್ರ್ಯಕ್ಕೆ ಧಕ್ಕೆ ಆಗಿದೆ. ಸಹಪಾಠಿಗಳಾದ ಅನುಷಾ, ರಕ್ಷಾ, ಚಿನ್ಮಯಿ, ಗ್ರೀಷ್ಮಾ, ಸಾಗರ್​​ ಅವಮಾನ ಮಾಡಿದ್ದು, ನನ್ನ ಜೀವನದಲ್ಲಿಯೇ ಇಂತಹ ಸಹಪಾಠಿಗಳನ್ನ ನಾನು ನೋಡಿಲ್ಲ. ಡಾ‌.ರಾಜು ಸರ್ ಬಳಿ ಪರೀಕ್ಷೆ ಹಾಗೂ ಇನ್ನಿತರ ವಿಷಯದ ಮಾರ್ಗದರ್ಶನ ಪಡೆಯುತ್ತಿದ್ದೆ. ನಾನು ಯಾವತ್ತೂ ತಪ್ಪು ಮಾಡಿಲ್ಲ. ಆದರೆ ನನ್ನ ಸಹಪಾಠಿಗಳೇ ನನ್ನ ವಿರುದ್ದ ತಪ್ಪಾಗಿ ಬಿಂಬಿಸಿದ್ದಾರೆ. ನಾನು ದೇವರಲ್ಲಿ ಪ್ರಮಾಣ ಮಾಡಿ ಹೇಳ್ತೀನಿ, ಸರ್ ನನಗೆ ಅಣ್ಣನ ಸಮಾನರು ಎಂದು ನಿಖಿತಾ ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣ;  ಪ್ರಾಧ್ಯಾಪಕರ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ, ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ!

ಡಾ.ರಾಜು ಸರ್ ತಮ್ಮ ಪತ್ನಿಯ ಜೊತೆ ಜಗಳ ಆಡುತ್ತಿದ್ದರು ಎಂದು ಕೇಳಿದ್ದೆ. ಆದರೆ ಡಾ.ರಾಜು ಪತ್ನಿ ನಿಶಾ ನನ್ನ ಮೇಲೆಯೇ ಈಗ ಅನುಮಾನ ಪಡ್ತಿದ್ದಾರೆ. ನನಗೆ ಬೇರೆ ಯಾರ ಜೊತೆಯೂ ಸಂಬಂಧ ಇದೆ ಎಂದಿದ್ರೆ ಇಷ್ಟು ನೋವಾಗ್ತಿರಲಿಲ್ಲ. ಮದುವೆಯದಾವರ ಜೊತೆ ಸಂಬಂಧ ಕಲ್ಪಿಸ್ತಿರೋದು ತೀವ್ರ ನೋವು ಉಂಟುಮಾಡಿದೆ. ಈ ಅವಮಾನವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಡಾ.ರಾಜು ಅವರ ಪತ್ನಿ ನಿಶಾ ಹಾಗೂ ನನ್ನ ಸಹಪಾಠಿಗಳು. ನನ್ನನ್ನು ನಾನು ಸಾಬೀತು ಪಡಿಸಿಕೊಳ್ಳಲು ಈ ನಿರ್ಧಾರ ಕೈಗೊಳುತ್ತಿದ್ದೇನೆ ಎಂದು ನಿಖಿತಾ ತಿಳಿಸಿದ್ದಾಳೆ. ಅಲ್ಲದೆ ಹೆತ್ತವರ ಕ್ಷಮೆ ಕೇಳಿರುವ ಈಕೆ, ನಿನ್ನ ಜೀವನ ಚೆನ್ನಾಗಿ ನೋಡಿಕೊಳ್ಳಬೇಕು. ಯಾರನ್ನೂ ನಂಬಬೇಡ ಎಂದು ತಂಗಿ ನಿಧಿಗೂ ಕಿವಿಮಾತು ಹೇಳಿದ್ದಾಳೆ. ರಾಜು ಸರ್ ನಿಜಕ್ಕೂ ಒಳ್ಳೆಯವರು, ಅವರ ಮೇಲೆ ಯಾರೂ ಆರೋಪ ಮಾಡಬೇಡಿ. ನನ್ನ ಸಹಪಾಠಿಗಳಂತಹವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ನಿಖಿತಾ ಡೆತ್​​ನೋಟ್​​ನಲ್ಲಿ ಬರೆದಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More