AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual Guidelines: ಮಧ್ಯಾಹ್ನ ಪೂಜೆ ಮಾಡುವುದು ಶುಭವೇ? ಧರ್ಮಗ್ರಂಥಗಳು ಹೇಳುವುದೇನು?

ಧರ್ಮಗ್ರಂಥಗಳ ಪ್ರಕಾರ ಮಧ್ಯಾಹ್ನ 12 ರಿಂದ 4 ರವರೆಗೆ ದೇವತೆಗಳ ವಿಶ್ರಾಂತಿ ಸಮಯ. ಈ ವೇಳೆ ಹೊಸ ಪೂಜೆ ನಿಷಿದ್ಧ. ಆದರೂ, ಬೆಳಿಗ್ಗೆ ಪ್ರಾರಂಭವಾದ ಪೂಜೆ ಮುಂದುವರಿಸಬಹುದು ಅಥವಾ ಅಭಿಜಿತ್ ಮುಹೂರ್ತ, ರಾಹುಕಾಲದಂತಹ ವಿಶೇಷ ಸಂದರ್ಭಗಳಲ್ಲಿ ಪೂಜೆ ಮಾಡಬಹುದು. ವಿಗ್ರಹ ಸ್ಪರ್ಶಿಸದೆ ಮಾನಸಿಕ ಪ್ರಾರ್ಥನೆ ಹೆಚ್ಚು ಶುಭಕರ.

Spiritual Guidelines: ಮಧ್ಯಾಹ್ನ ಪೂಜೆ ಮಾಡುವುದು ಶುಭವೇ? ಧರ್ಮಗ್ರಂಥಗಳು ಹೇಳುವುದೇನು?
ಮಧ್ಯಾಹ್ನ ಪೂಜೆ ಮಾಡುವುದು ಶುಭವೇ? Image Credit source: Getty Images
ಅಕ್ಷತಾ ವರ್ಕಾಡಿ
|

Updated on: Aug 05, 2026 | 4:27 PM

Share

ಇಂದಿನ ಕಾರ್ಯನಿರತ ಜೀವನಶೈಲಿಯಿಂದಾಗಿ ಅನೇಕರಿಗೆ ಬೆಳಿಗ್ಗೆ ಬೇಗನೆ ಪೂಜೆ-ಪುರಸ್ಕಾರಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕೆಲವರು ಮಧ್ಯಾಹ್ನ ಸ್ನಾನ ಮಾಡಿ ಪೂಜೆ ಸಲ್ಲಿಸುವುದನ್ನು ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಮನೆಯಲ್ಲಿ ನೆರವೇರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಅಥವಾ ಹೋಮ-ಹವನಗಳು ಮಧ್ಯಾಹ್ನದವರೆಗೂ ಮುಂದುವರಿಯುತ್ತವೆ. ಆದರೆ, ಧರ್ಮಗ್ರಂಥಗಳು ಮತ್ತು ಶಾಸ್ತ್ರಗಳ ಪ್ರಕಾರ ಮಧ್ಯಾಹ್ನದ ವೇಳೆಯಲ್ಲಿ ಹೊಸದಾಗಿ ಪೂಜೆ ಪ್ರಾರಂಭಿಸುವುದು ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ.

ಮಧ್ಯಾಹ್ನದ ವೇಳೆಯಲ್ಲಿ ಪೂಜೆ ಮಾಡಬಾರದು ಏಕೆ?

ಸಾಮಾನ್ಯ ನಿಯಮದಂತೆ, ಮಧ್ಯಾಹ್ನದ ಸಮಯದಲ್ಲಿ ಹೊಸದಾಗಿ ದಿನನಿತ್ಯದ ಪೂಜೆಯನ್ನು ಪ್ರಾರಂಭಿಸುವುದನ್ನು ಶಾಸ್ತ್ರಗಳಲ್ಲಿ ನಿಷಿದ್ಧವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಧ್ಯಾಹ್ನ 12:00 ರಿಂದ ಸಂಜೆ 4:00 ರವರೆಗಿನ ಅವಧಿಯು ದೇವತೆಗಳ ವಿಶ್ರಾಂತಿಯ ಸಮಯವಾಗಿರುತ್ತದೆ. ದೇವರ ವಿಶ್ರಾಂತಿಗೆ ಭಂಗ ಬರಬಾರದು ಎಂಬ ಕಾರಣಕ್ಕಾಗಿಯೇ ದೇವಾಲಯಗಳಲ್ಲಿಯೂ ಈ ಸಮಯದಲ್ಲಿ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆದ್ದರಿಂದ, ಮನೆಯಲ್ಲೂ ಸಹ ಈ ವೇಳೆಯಲ್ಲಿ ದಿನನಿತ್ಯದ ನೈವೇದ್ಯ ಅಥವಾ ಪ್ರಾರ್ಥನೆಗಳನ್ನು ಹೊಸದಾಗಿ ಪ್ರಾರಂಭಿಸುವುದನ್ನು ತಪ್ಪಿಸುವುದು ಶ್ರೇಯಸ್ಕರ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಮಧ್ಯಾಹ್ನ ಪೂಜೆ ಮಾಡಲು ಇರುವ ವಿಶೇಷ ಮಿನಾಯಿತಿಗಳು:

ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಮಧ್ಯಾಹ್ನದ ಪೂಜೆಯನ್ನು ದೋಷಪೂರಿತವೆಂದು ಪರಿಗಣಿಸುವುದಿಲ್ಲ. ಬೆಳಿಗ್ಗೆಯೇ ಪ್ರಾರಂಭವಾದ ಸುದೀರ್ಘ ಪೂಜೆಗಳು ಮಧ್ಯಾಹ್ನದವರೆಗೆ ಮುಂದುವರಿದರೆ ಅದರಲ್ಲಿ ಯಾವುದೇ ದೋಷವಿರುವುದಿಲ್ಲ. ಅಲ್ಲದೆ, ನವರಾತ್ರಿಯ ಸಂದರ್ಭದಲ್ಲಿ ಕಲಶ ಸ್ಥಾಪನೆಗೆ ಬೆಳಗಿನ ಶುಭ ಸಮಯ ತಪ್ಪಿಹೋದರೆ, ಮಧ್ಯಾಹ್ನದ ‘ಅಭಿಜಿತ್ ಮುಹೂರ್ತ’ದಲ್ಲಿ ಪೂಜೆ ಸಲ್ಲಿಸಬಹುದು. ಇದರ ಜೊತೆಗೆ, ಕಾಳಸರ್ಪ ದೋಷ ನಿವಾರಣೆಯಂತಹ ವಿಶೇಷ ಪರಿಹಾರ ಪೂಜೆಗಳನ್ನು ರಾಹುಕಾಲದಲ್ಲೇ ನೆರವೇರಿಸಬೇಕಿರುವುದರಿಂದ, ರಾಹುಕಾಲವು ಮಧ್ಯಾಹ್ನದ ವೇಳೆ ಬಂದಾಗ ಆ ಸಮಯದಲ್ಲಿ ಆಚರಣೆ ನಡೆಸಲು ಶಾಸ್ತ್ರೀಯ ಸಮ್ಮತಿಯಿದೆ.

ಮಧ್ಯಾಹ್ನದ ವೇಳೆ ಮಾನಸಿಕ ಪ್ರಾರ್ಥನೆ ಮತ್ತು ನಾಮಸ್ಮರಣೆ:

ಒಂದು ವೇಳೆ ಮಧ್ಯಾಹ್ನದ ಸಮಯದಲ್ಲಿ ದೇವರಿಗೆ ಗೌರವ ಸಲ್ಲಿಸಬೇಕೆನಿಸಿದರೆ ಅಥವಾ ಪ್ರಾರ್ಥಿಸಬೇಕಾದರೆ ವಿಗ್ರಹಗಳನ್ನು ಸ್ಪರ್ಶಿಸದೆ ‘ಮಾನಸಿಕ ಪೂಜೆ’ ಮಾಡುವುದು ಸೂಕ್ತ. ಅಂದರೆ, ದೇವರಿಗೆ ತೊಂದರೆಯಾಗದಂತೆ ದೂರದಿಂದಲೇ ನಿಮ್ಮ ಇಷ್ಟದೈವದ ನಾಮಸ್ಮರಣೆ ಮಾಡುವುದು ಮತ್ತು ಮನಸ್ಸಿನಲ್ಲೇ ಧನ್ಯವಾದಗಳನ್ನು ಅರ್ಪಿಸುವುದು ಅತ್ಯಂತ ಶುಭಫಲ ನೀಡುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us