ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ಎಡವಟ್ಟಿಗೆ ನೋವಿನಿಂದ ನರಳಾಡುತ್ತಿರುವ ಯುವಕ

ಎಳನೀರು ಕಡಿಯುವ ವೇಳೆ ಪೆಟ್ಟು ತಿಂದ ಯುವಕ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದು, ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷದಿಂದ ಇಂಜೆಕ್ಷನ್ ನೀಡಿದ ಕಾರಣ ಸೊಂಟದ ಭಾಗದಲ್ಲಿ ಊತ ಬಂದು ನೋವಿನಿಂದ ನರಳಾಡುವಂತಾಗಿದೆ.

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ಎಡವಟ್ಟಿಗೆ ನೋವಿನಿಂದ ನರಳಾಡುತ್ತಿರುವ ಯುವಕ
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಎಡವಟ್ಟು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 14, 2023 | 6:54 PM

ಚಿತ್ರದುರ್ಗ: ಎಳನೀರು ಕಡಿಯುವ ವೇಳೆ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಕಿರಣ್​ಗೆ ಡ್ಯೂಟಿಯಲ್ಲಿದ್ದ ವೈದ್ಯರು ತಪಾಸಣೆ ನಡೆಸಿ ಇಂಜೆಕ್ಷನ್ ಬರೆದು ಕೊಟ್ಟಿದ್ದಾರೆ. ಆದರೆ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷದಿಂದ ಮಾಡಿದ ಇಂಜೆಕ್ಷನ್ ಕಾರಣ ಇನ್ಫೆಕ್ಷನ್ ಆಗಿದೆ. ಜೊತೆಗೆ ಸೊಂಟದ ಭಾಗದಲ್ಲಿ ಊತ ಬಂದು ನೋವಿನಿಂದ ನರಳಾಡುವಂತಾಗಿದೆ. ತಾಲೂಕಿನ ಮಲ್ಲಾಪುರ ಗ್ರಾಮದ ನಿವಾಸಿ ಕಿರಣ್ ಎಂಬಾತ ಫೆ.8 ರಂದು ಎಳನೀರು ಕಡಿಯುವ ವೇಳೆ ಕೈಗೆ ಪೆಟ್ಟು ತಿಂದು ಜಿಲ್ಲಾಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ಡ್ಯೂಟಿಯಲ್ಲಿದ್ದ ವೈದ್ಯರು ತಪಾಸಣೆ ನಡೆಸಿ ಇಂಜಕ್ಷನ್ ಬರೆದು ಕೊಟ್ಟಿದ್ದಾರೆ. ಆದ್ರೆ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷದಿಂದ ಇಂಜೆಕ್ಷನ್ ಮಾಡಿದ ಪರಿಣಾಮ ಮರುದಿನದಿಂದ ಕಿರಣ್​ಗೆ ಇಂಜೆಕ್ಷನ್ ಮಾಡಿದ ಸ್ಥಳದಲ್ಲಿ ಊತ ಕಾಣಿಸಿಕೊಂಡಿದೆ. ಅಲ್ಲದೆ ನೋವು ಕೂಡ ಶುರುವಾಗಿದೆ. ಹೀಗಾಗಿ, ಮತ್ತೆ ಜಿಲ್ಲಾಸ್ಪತ್ರೆಗೆ ಬಂದು ಕೇಳಿದ್ರೆ ವೈದ್ಯಕೀಯ ಸಿಬ್ಬಂದಿ ಮತ್ತದೆ ನಿರ್ಲಕ್ಷದ ಉತ್ತರ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಕಿರಣ್ ಸಂಬಂಧಿಗಳು, ಸ್ನೇಹಿತರು ಆಸ್ಪತ್ರೆಗೆ ಆಗಮಿಸಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಕ್ಯಾರೆ ಅನ್ನದಿದ್ದಾಗ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಇಂಜೆಕ್ಷನ್ ಮಾಡುವ ಬದಲು ವಿದ್ಯಾರ್ಥಿಗಳಿಂದ ಇಂಜಕ್ಷನ್ ಮಾಡಿಸಿದ್ದು ಯಡವಟ್ಟಿಗೆ ಕಾರಣ ಆಗಿದೆ. ಇಂಜೆಕ್ಷನ್ ಮಾಡಿದ ಜಾಗದಲ್ಲಿ ಊತ ಬಂದಿದ್ದು, ಕಿವು ತುಂಬಿಕೊಂಡಂತೆ ಕಾಣುತ್ತಿದೆ. ಇಂಜೆಕ್ಷನ್ ದುಷ್ಪರಿಣಾಮದಿಂದಾಗಿ ಕಿರಣ್ ಮತ್ತು ಕುಟುಂಬ ಆತಂಕಕ್ಕೀಡಾಗಿದೆ. ಈ ಬಗ್ಗೆ ಕೇಳಲು ಬಂದರೆ ವೈದ್ಯಕೀಯ ಸಿಬ್ಬಂದಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು ಕಿರಣ್ ಮತ್ತು ಸಂಬಂಧಿಕರಿಗೆ ಉಡಾಫೆ ಉತ್ತರ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗ: ಪ್ರೀತಿಸುತ್ತಿದ್ದ ಯುವತಿಯ ಸಂಬಂಧಿಯಿಂದ ಟಾರ್ಚರ್​; ಮನನೊಂದ ಯುವಕ ನೇಣಿಗೆ ಶರಣು

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ಯಡವಟ್ಟಿನಿಂದಾಗಿ ಕಿರಣ್ ತೊಂದರೆಗೆ ಈಡಾಗಿದ್ದಾರೆ. ಹೀಗಾಗಿ, ಕಿರಣ್ ಸಂಬಂಧಿಕರು ಮತ್ತು ಸ್ನೇಹಿತರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಠಾಣೆಗೆ ಈ ಬಗ್ಗೆ ಕಿರಣ್ ದೂರು ನೀಡಿದ್ದು ಪೊಲೀಸ್ರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.

ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ