Crime News: ಸುತ್ತಿಗೆಯಿಂದ ಜಜ್ಜಿ ಸೊಸೆಯಿಂದಲೇ ಅತ್ತೆಯ ಹತ್ಯೆ; ಚಿತ್ರದುರ್ಗದಲ್ಲಿ ಭೀಕರ ಕೃತ್ಯ

Crime News: ಸುತ್ತಿಗೆಯಿಂದ ಜಜ್ಜಿ ಸೊಸೆಯಿಂದಲೇ ಅತ್ತೆಯ ಹತ್ಯೆ; ಚಿತ್ರದುರ್ಗದಲ್ಲಿ ಭೀಕರ ಕೃತ್ಯ
ಸೊಸೆ ಮುದ್ದಕ್ಕ, ಅತ್ತೆ ರುದ್ರಮ್ಮ

ಅತ್ತೆ ಮೇಲಿನ ದ್ವೇಷದಿಂದ ಮುದ್ದಕ್ಕ ಸ್ವತಃ ಅತ್ತೆಯನ್ನೇ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಸೊಸೆ ಮುದ್ದಕ್ಕ (38) ಪೊಲೀಸರು ವಶಕ್ಕೆ ಪಡೆದಿದ್ದಾರೆ.

TV9kannada Web Team

| Edited By: ganapathi bhat

Jan 24, 2022 | 8:41 AM

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಎಂಬಲ್ಲಿ ಸೊಸೆಯಿಂದಲೇ ಅತ್ತೆಯ ಹತ್ಯೆ ಮಾಡಿದ ಭೀಕರ ಕೃತ್ಯ ನಡೆದಿದೆ. ರಾತ್ರಿ ಮಲಗಿದ್ದ ವೇಳೆ ಸುತ್ತಿಗೆಯಿಂದ ತಲೆ‌ಗೆ ಜಜ್ಜಿ ಅತ್ತೆಯನ್ನು ಕೊಲೆ ಮಾಡಲಾಗಿದೆ. ಅತ್ತೆ ರುದ್ರಮ್ಮ (60) ಎಂಬವರು ಮೃತ ದುರ್ದೈವಿ. ವೃದ್ಧ ಅತ್ತೆಯನ್ನು ಹತ್ಯೆಗೈದ ಸೊಸೆ ಮುದ್ದಕ್ಕ (38) ಎಂಬಾಕೆಯನ್ನು ವಶಕ್ಕೆ ಪಡೆಯಲಾಗಿದೆ.

ಅತ್ತೆ- ಸೊಸೆ ಮಧ್ಯೆ ಹೊಂದಾಣಿಕೆ ಇಲ್ಲದೆ ಪ್ರತಿನಿತ್ಯ ಜಗಳ ಆಗುತ್ತಿತ್ತು ಎಂದು ತಿಳಿದುಬಂದಿದೆ. ಅತ್ತೆ ಮೇಲಿನ ದ್ವೇಷದಿಂದ ಮುದ್ದಕ್ಕ ಸ್ವತಃ ಅತ್ತೆಯನ್ನೇ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಸೊಸೆ ಮುದ್ದಕ್ಕ (38) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾಸನ: ತಲೆಯ ಮೇಲೆ ಕಲ್ಲು ಎತ್ತಿಹಾಕಿ ವೃದ್ಧೆಯ ಬರ್ಬರ ಹತ್ಯೆ

ತಲೆಯ ಮೇಲೆ ಕಲ್ಲು ಎತ್ತಿಹಾಕಿ ವೃದ್ಧೆಯ ಬರ್ಬರ ಹತ್ಯೆ ಮಾಡಿದ ದುರ್ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾರಳ್ಳಿ ಎಂಬಲ್ಲಿ ನಡೆದಿದೆ. ಹಾರಳ್ಳಿಯಲ್ಲಿ ಏಕಾಂಗಿಯಾಗಿದ್ದ ಮಲ್ಲಮ್ಮ (85) ಕೊಲೆ ಮಾಡಲಾಗಿದೆ. ವೃದ್ಧೆ ಹತ್ಯೆಗೈದು ಚಿನ್ನಾಭರಣ ದೋಚಿ ಹಂತಕರು ಎಸ್ಕೇಪ್ ಆಗಿದ್ದಾರೆ. ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ದಾರುಣ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ತಾಯಿ- ಮಗ ಮೃತಪಟ್ಟಿದ್ದಾರೆ. ಲೋ ಬಿಪಿಯಿಂದಾಗಿ 45 ವರ್ಷದ ಕುಶಾಲ್ ಮೃತಪಟ್ಟಿದ್ದರು. ಮಗನ ಸಾವಿನ ಸುದ್ದಿ ಕೇಳಿ ತಾಯಿ ಲಕ್ಷ್ಮಮ್ಮ (69) ಸಾವನ್ನಪ್ಪಿದ್ದಾರೆ. ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ವರದಕ್ಷಿಣೆ ಕಿರುಕುಳ

ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ಉಸ್ನಾ ಬೇಗಂಗೆ ಪತಿ ಸುಹೇಲ್ ಪಾಷಾನಿಂದ ಕಿರುಕುಳ ನೀಡಲಾಗುತ್ತಿದೆ. ಪ್ರತಿನಿತ್ಯ ವರದಕ್ಷಿಣೆ ತರುವಂತೆ ಜಗಳ ಮಾಡಿ ಟಾರ್ಚರ್ ಕೊಡಲಾಗುತ್ತಿದೆ ಎಂದು ಹೇಳಲಾಗಿದೆ. ಪತಿ ಕಾಟ ತಾಳಲಾರದೆ ತವರಿಗೆ ಹೋಗಿದ್ದ ಉಸ್ನಾ ಬೇಗಂಗೆ ಪತ್ನಿಯ ತವರಿಗೂ ಬಂದು ಪತಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಉಸ್ನಾ ಬೇಗಂ ಕುಟುಂಬಸ್ಥರ ಮೇಲೂ ಹಲ್ಲೆಗೈದ ಆರೋಪ ಕೇಳಿಬಂದಿದ್ದು ಬೆಂಗಳೂರಿನ ಬಾಣಸವಾಡಿ ಠಾಣೆಗೆ ಪತ್ನಿ ಕುಟುಂಬಸ್ಥರು ದೂರು ನೀಡಿದ್ದಾರೆ.

ಇದನ್ನೂ ಓದಿ: Crime News: ನೆಲಮಂಗಲದ ಎರಡು ಕಡೆ ಬೀಗ ಒಡೆದು ಕಳ್ಳತನ, ವಿಜಯಪುರ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನ

ಇದನ್ನೂ ಓದಿ: Crime Update: ಡ್ರಗ್ ಪೆಡ್ಲರ್ ಬಂಧನ, ಇಸ್ಟೀಟ್ ವ್ಯಸನಿಯ ಕೊಂದ ತಾಯಿ, ಬಸ್ ಚಾಲಕನ ಮೇಲೆ ಹಲ್ಲೆ

Follow us on

Related Stories

Most Read Stories

Click on your DTH Provider to Add TV9 Kannada