ಬೆಂಗಳೂರು, ಅಕ್ಟೋಬರ್ 03: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಇಡಿ ಸಮನ್ಸ್ ನೀಡಿತ್ತು. ದೂರಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲು ಇಡಿ ಸೂಚಿಸಿತ್ತು. ಈ ಹಿನ್ನಲ್ಲೆ ಇಂದು ಬೆಂಗಳೂರಿನ ಶಾಂತಿನಗರದ ಇಡಿ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದರು. ಸದ್ಯ ವಿಚಾರಣೆ ಮುಗಿಸಿ ಹೊರಬಂದ ಸ್ನೇಹಮಯಿ ಕೃಷ್ಣ 500ಕ್ಕೂ ಹೆಚ್ಚು ದಾಖಲೆಗಳನ್ನು ಕೊಟ್ಟಿರುವುದಾಗಿ ಹೇಳಿದ್ದಾರೆ.
ವಿಚಾರಣೆ ಮುಗಿಸಿ ಹೊರಬಂದ ದೂರುದಾರ ಸ್ನೇಹಮಯಿ ಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗ್ಗೆಯಿಂದ ಸಂಜೆವರೆಗೂ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಯಾವ ಕ್ಲಾರಿಫಿಕೇಷನ್ ಬೇಕೋ ಅದೆಲ್ಲಾ ಕೊಟ್ಟಿದ್ದೀನಿ. ದಾಖಲೆ, ಸಾಕ್ಷಿಗಳ ಬಗ್ಗೆ ಮಾಹಿತಿ ಕೇಳಿದ್ರು, ಅದೆಲ್ಲವನ್ನೂ ಕೊಟ್ಟಿದ್ದೇನೆ. ಇಡಿ ಅಧಿಕಾರಿಗಳು ಮತ್ತೆ ಕರೆದರೆ ವಿಚಾರಣೆಗೆ ಬರುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಡಾ ಕೇಸ್ನಲ್ಲಿ ವಿಚಾರಣೆಗಿಳಿದ ಲೋಕಾಯುಕ್ತ: ಸ್ನೇಹಮಹಿ ಕೃಷ್ಣಗೆ ಮೊದಲ ನೋಟಿಸ್
ಮುಡಾ ಹಗರಣ ಸಂಬಂಧ 500ಕ್ಕೂ ಹೆಚ್ಚು ದಾಖಲೆಗಳನ್ನು ಕೊಟ್ಟಿದ್ದೆ. ನಾನು ನೀಡಿದ್ದ ದಾಖಲೆ ಸಂಬಂಧ ಇಡಿ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದರು. ಮುಡಾದಲ್ಲಿ ಸುಮಾರು 5 ಸಾವಿರ ಕೋಟಿಗೂ ಹೆಚ್ಚು ಹಗರಣ ನಡೆದಿದೆ. ಕನ್ನಡದಲ್ಲಿರುವ ದಾಖಲೆಗಳ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಮುಡಾಗೆ ಸೈಟ್ ವಾಪಸ್ ನೀಡಿದರೆ ಅದು ಸಾಕ್ಷಿ ನಾಶ ಬರಲ್ಲ. ವಾಪಸ್ ಕೊಟ್ಟಿರೋದೇ ಸಾಕ್ಷಿ ಆಗುತ್ತೆ. ಮುಡಾದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಹೀಗಾಗಿ ಇದಕ್ಕೆ ಮನಿ ಲ್ಯಾಂಡರಿಂಗ್ ಆ್ಯಕ್ಟ್ ಅನ್ವಯವಾಗುತ್ತೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮುಡಾಗೆ 14 ಸೈಟ್ ವಾಪಸ್ ಪ್ರಕ್ರಿಯೆ ಪೂರ್ಣ: ಯಾರ ಹೆಸರಿಗೆ ವರ್ಗಾವಣೆಯಾಯ್ತು ವಿವಾದಿತ 14 ಸೈಟ್?
ಈ ನಡುವೆ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮುಡಾ ಕಚೇರಿಗೆ ಆಗಮಿಸಿದ ಎಸ್ಪಿ ಉದೇಶ್ ನೇತೃತ್ವದ ತಂಡ ಇಂದು ಕೆಲ ಕಡತಗಳನ್ನ ಪರಿಶೀಲಿಸಿತು. ಮೊನ್ನೆ ಕೆಸರೆ ಗ್ರಾಮದಲ್ಲಿ ಮಹಜರು ನಡೆಸಿದ್ದ ತಂಡ ಮುಂದೆ ಸಿಎಂ ಪತ್ನಿ ಪಾರ್ವತಿಗೆ ಮಂಜೂರಾಗಿದ್ದ ವಿಜಯನಗರದ ನಿವೇಶನಗಳನ್ನೂ ಪರಿಶೀಲಿಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:39 pm, Thu, 3 October 24