AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಕೇಸ್ನಲ್ಲಿ ವಿಚಾರಣೆಗಿಳಿದ ಲೋಕಾಯುಕ್ತ: ಸ್ನೇಹಮಹಿ ಕೃಷ್ಣಗೆ ಮೊದಲ ನೋಟಿಸ್

ಮುಡಾ ಪ್ರಕರಣದಲ್ಲಿ ಲೋಕಾಯುಕ್ತದಲ್ಲಿ ಸಿಎಂ‌ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್​ ದಾಖಲಾಗುತ್ತಿದ್ದಂತೆ ವಿಚಾರಣೆಗಿಳಿದಿರುವ ಲೋಕಾಯುಕ್ತ ಅಧಿಕಾರಿಗಳಿಂದ‌ ಮೊದಲ ನೋಟಿಸ್ ಜಾರಿ ಮಾಡಲಾಗಿದೆ. ನಾಳೆ ಬೆಳಗ್ಗೆ 7.30ಕ್ಕೆ ಕಚೇರಿಗೆ ಹಾಜರಾಗುವಂತೆ ದೂರುದಾರ ಸ್ನೇಹಮಹಿ ಕೃಷ್ಣಗೆ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲಾಗಿದೆ.

ಮುಡಾ ಕೇಸ್ನಲ್ಲಿ ವಿಚಾರಣೆಗಿಳಿದ ಲೋಕಾಯುಕ್ತ: ಸ್ನೇಹಮಹಿ ಕೃಷ್ಣಗೆ ಮೊದಲ ನೋಟಿಸ್
ಮುಡಾ ಕೇಸ್ನಲ್ಲಿ ವಿಚಾರಣೆಗಿಳಿದ ಲೋಕಾಯುಕ್ತ: ಸ್ನೇಹಮಹಿ ಕೃಷ್ಣಗೆ ಮೊದಲ ನೋಟಿಸ್
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 30, 2024 | 9:17 PM

Share

ಮೈಸೂರು, ಸೆಪ್ಟೆಂಬರ್​ 30: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಎಫ್ಐಆರ್ ದಾಖಲಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚಿಸಿದೆ. ಹೀಗಾಗಿ ಅತ್ಯಂತ ಕಟ್ಟು ನಿಟ್ಟಾಗಿ ತನಿಖೆ ಮಾಡಬೇಕಾದ ಅನಿವಾರ್ಯತೆ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದಿದ್ದು, ಈ ನಿಟ್ಟಿನಲ್ಲಿ ನಾಳೆ ವಿಚಾರಣೆಗೆ ಹಾಜರಾಗುವಂತೆ ದೂರುದಾರ ಸ್ನೇಹಮಹಿ ಕೃಷ್ಣಗೆ ಎಸ್ ಪಿ ಟಿ.ಜೆ ಉದೇಶ್ ಅವರಿಂದ ನೋಟಿಸ್ ಜಾರಿ ಮಾಡಲಾಗಿದೆ.

ಲೋಕಾಯುಕ್ತದಲ್ಲಿ ಸಿಎಂ‌ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್​ ದಾಖಲಾಗುತ್ತಿದ್ದಂತೆ ವಿಚಾರಣೆಗಿಳಿದ ಲೋಕಾಯುಕ್ತ ಅಧಿಕಾರಿಗಳಿಂದ‌ ಮೊದಲ ನೋಟಿಸ್ ಜಾರಿ ಮಾಡಲಾಗಿದೆ. ನಾಳೆ ಬೆಳಗ್ಗೆ 7.30ಕ್ಕೆ ಕಚೇರಿಗೆ ಹಾಜರಾಗುವಂತೆ ದೂರುದಾರ ಸ್ನೇಹಮಹಿ ಕೃಷ್ಣಗೆ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ECIR ದಾಖಲು, ಏನಿದು ECIR? ಇಡಿ ಏನೇನು ಮಾಡಬಹುದು?

ಮುಡಾ ಹಗರಣ ಪ್ರಕರಣ ಆರೋಪಕ್ಕೆ ಸಂಬಂಧಿದಂತೆ ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಇತ್ತೀಚೆಗೆ ಎಫ್‌ಆರ್‌ಆರ್‌ ದಾಖಲು ಮಾಡಲಾಗಿತ್ತು. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಆದೇಶದಂತೆ ಲೋಕಾಯುಕ್ತ ಎಸ್‌ಪಿ ಉದೇಶ್ ಸಿಆರ್‌ಪಿಸಿ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದರು.

ಎಫ್ಐಆರ್ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲಿದ್ದಾರೆ. ಅಗತ್ಯವಿದ್ದಾಗ ವಿಚಾರಣೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೂ ನೋಟಿಸ್ ನೀಡಬಹುದು. ಅಷ್ಟೇ ಅಲ್ಲದೆ ಲೋಕಾಯುಕ್ತ ಬಂಧಿಸುವ ಅಧಿಕಾರವನ್ನೂ ಸಹ ಹೊಂದಿದ್ದು, ಅಗತ್ಯ ಬಿದ್ದರೆ ಸಿದ್ದರಾಮಯ್ಯರನ್ನು ವಶಕ್ಕೆ ಪಡೆಯಲೂಬಹುದಾಗಿದೆ.

ಇದನ್ನೂ ಓದಿ: ಮುಡಾ ಹಗರಣ ಕೇಸ್: ಸಿದ್ದರಾಮಯ್ಯ ವಿರುದ್ಧ ECIR ದಾಖಲು, ಸಿಎಂಗೆ ಶುರುವಾಯ್ತು ಇಡಿ ಸಂಕಷ್ಟ!

ಇದೆಲ್ಲದರ ಮಧ್ಯೆ ಮುಡಾ ಹಗರಣದ ತನಿಖೆ ಆರಂಭ ಆಗುವ ಮುನ್ನವೇ ದೂರುದಾರ ಸ್ನೇಹಮಹಿ ಕೃಷ್ಣ, ಇಡಿಗೂ ಮೇಲ್‌ ಮೂಲಕ ದೂರು ಸಲ್ಲಿಸಿದ್ದರು. ಮುಡಾ ಪ್ರಕರಣದಲ್ಲಿ ಖುದ್ದು ಸಿಎಂ 62 ಕೋಟಿ ಹಣದ ಬಗ್ಗೆ ಹೇಳಿದ್ದಾರೆ. ಜೊತೆಗೆ ಮುಡಾದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ ತನಿಖೆಯ ಅವಶ್ಯಕತೆ ಇದೆ ಅಂತಾ ಟಿವಿ9ಗೆ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದರು. ಮೊನ್ನೆ ಮೇಲ್‌ ಮೂಲಕ ದೂರು ಸಲ್ಲಿಸಿದ್ದ ಕೃಷ್ಣ, ಇಂದು ನೇರ ಬೆಂಗಳೂರಿನ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:15 pm, Mon, 30 September 24