ಕೃಷಿ ಕಾರ್ಮಿಕರ ಕೊರತೆಗೆ ಉಚಿತ ಗ್ಯಾರಂಟಿಗಳ ದೂರುತ್ತಿರುವ ಕಾಫಿ ಎಸ್ಟೇಟ್ ಮಾಲೀಕರು; ಕಾರ್ಮಿಕರ ಸಂಘಟನೆಗಳು ಹೇಳೋದೇನು?

ಸ್ಥಳೀಯ ಕಾರ್ಮಿಕರು ಈಗ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಬಿಕ್ಕಟ್ಟನ್ನು ಎದುರಿಸಲು, ನಾವು ದೇಶದ ಇತರ ಭಾಗಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳಬೇಕಾಗಿದೆ. ಆದರೆ ಸಮಸ್ಯೆ ಏನೆಂದರೆ ಅವರು ಪರಿಣತರಲ್ಲ ಎಂದು ಕಾಫಿ ಬೆಳೆಗಾರರು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಚುನಾವಣಾ ಖಾತರಿಗಳು ಕಾರ್ಮಿಕ ಸಮಸ್ಯೆಗೆ ಕಾರಣವೆಂಬ ಆರೋಪ ವ್ಯಕ್ತವಾಗುತ್ತಿದೆ.

ಕೃಷಿ ಕಾರ್ಮಿಕರ ಕೊರತೆಗೆ ಉಚಿತ ಗ್ಯಾರಂಟಿಗಳ ದೂರುತ್ತಿರುವ ಕಾಫಿ ಎಸ್ಟೇಟ್ ಮಾಲೀಕರು; ಕಾರ್ಮಿಕರ ಸಂಘಟನೆಗಳು ಹೇಳೋದೇನು?
ಸಾಂದರ್ಭಿಕ ಚಿತ್ರ
Follow us
|

Updated on: Aug 28, 2023 | 8:04 AM

ಬೆಂಗಳೂರು, ಆಗಸ್ಟ್ 28: ಕರ್ನಾಟಕದಲ್ಲಿ ಕೃಷಿ ಕಾರ್ಮಿಕರ (Agriculture Labourers) ಕೊರತೆ ಎದುರಾಗಿದ್ದು, ಸದ್ಯದ ಬಿಕ್ಕಟ್ಟಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳನ್ನು (Guarantee Schemes) ದೂಷಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಮಧ್ಯೆ, ನುರಿತ ಕಾರ್ಮಿಕರ ಒಂದು ಭಾಗವು ಕನಿಷ್ಠ ವೇತನ ಹೆಚ್ಚಳ, ಹೆಚ್ಚುವರಿ ಪ್ರಯೋಜನಗಳು ಮತ್ತು ಕೆಲಸದ ಸಮಯವನ್ನು ಕಡಿಮೆಗೊಳಿಸುವಂತಹ ಹೊಸ ಬೇಡಿಕೆಗಳನ್ನು ಇಡಲಾರಂಭಿಸಿವೆ. 30 ಲಕ್ಷ ಕೃಷಿ ಕಾರ್ಮಿಕರಲ್ಲಿ 5 ಲಕ್ಷದಷ್ಟು ಕಾರ್ಮಿಕರನ್ನು ಹೊಂದಿರುವ ಕಾಫಿ ತೋಟಗಳು ಈಗಾಗಲೇ ಕೊರತೆಯನ್ನು ಎದುರಿಸುತ್ತಿವೆ. 10 ಕೆಜಿ ಉಚಿತ ಅಕ್ಕಿ, ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ 2,000 ರೂ, ಮತ್ತು 200 ಯೂನಿಟ್ ವಿದ್ಯುತ್ ಯೋಜನೆಗಳು ಕಾರ್ಮಿಕರ ಕೊರತೆಗೆ ಕಾರಣವಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.

ಕೂಲಿಕಾರರ ಹಠಾತ್ ಕೊರತೆಗೆ ಉಚಿತ ಕೊಡುಗೆ ಯೋಜನೆಗಳು ಕಾರಣವಾಗುತ್ತಿವೆ. ಇದು ಕಾಫಿ ಎಸ್ಟೇಟ್‌ಗಳ ಮೇಲೆ ಪರಿಣಾಮ ಬೀರಿದೆ. ಇದು ಹೀಗೆಯೇ ಮುಂದುವರಿದರೆ, ತೋಟದ ವ್ಯವಹಾರವನ್ನು ನಡೆಸುವುದು ಕಷ್ಟಕರವಾಗಲಿದೆ ಎಂದು ಭಾರತೀಯ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಎನ್ ದೂಷಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಕಾಫಿ ಎಸ್ಟೇಟ್​ಗಳು ಮತ್ತು ಉದ್ಯಮವು ಈಗಾಗಲೇ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ಇದೀಗ ಬಿಟ್ಟಿ ಭಾಗ್ಯಗಳ ವಿತರಣೆಯು ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ ಎಂದು ಚಿಕ್ಕಮಗಳೂರಿನ ಕಾಫಿ ಬೆಳೆಗಾರರೊಬ್ಬರು ದೂರಿದ್ದಾರೆ.

ಸ್ಥಳೀಯ ಕಾರ್ಮಿಕರು ಈಗ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಬಿಕ್ಕಟ್ಟನ್ನು ಎದುರಿಸಲು, ನಾವು ದೇಶದ ಇತರ ಭಾಗಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳಬೇಕಾಗಿದೆ. ಆದರೆ ಸಮಸ್ಯೆ ಏನೆಂದರೆ ಅವರು ಪರಿಣತರಲ್ಲ ಎಂದು ಕಾಫಿ ಬೆಳೆಗಾರರು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಚುನಾವಣಾ ಖಾತರಿಗಳು ಕಾರ್ಮಿಕ ವಲಯದಲ್ಲಿ ಆತ್ಮತೃಪ್ತಿಯ ಭಾವನೆಯನ್ನು ತುಂಬಲು ಕಾರಣವೆಂದು ಕರ್ನಾಟಕ ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಅವರು ಆರೋಪಿಸಿರುವುದಾಗಿ ಕೂಡ ವರದಿ ಉಲ್ಲೇಖಿಸಿದೆ.

ಎರಡನೇ ಹಂತದ ನಗರಗಳಲ್ಲಿ ಕೆಲಸಕ್ಕೆ ಸ್ಥಳೀಯ ಕಾರ್ಮಿಕರನ್ನು ಕರೆಸಲು ಹರಸಾಹಸ ಪಡುವಂತಾಗಿದೆ. ಸಿದ್ದರಾಮಯ್ಯ ಸರಕಾರ ಶೀಘ್ರದಲ್ಲಿಯೇ ಚುನಾವಣಾ ಗ್ಯಾರಂಟಿಗಳನ್ನು ಈಡೇರಿಸಿರುವುದರಿಂದ ಹಾಸನ ಮತ್ತು ಕಲಬುರಗಿಯಂತಹ ಭಾಗಗಳ ಕಾರ್ಮಿಕರು ಕೆಲಸದಿಂದ ದೂರ ಉಳಿದಿದ್ದಾರೆ. ಇದರಿಂದ ರೈತರಿಗೆ ಭಾರಿ ಹೊರೆಯಾಗಿದೆ ಎಂದು ಕರ್ನಾಟಕ ಮಾಲಕರ ಸಂಘದ ಅಧ್ಯಕ್ಷ ಬಿಸಿ ಪ್ರಭಾಕರ್ ಹೇಳಿರುವುದಾಗಿಯೂ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಉಲ್ಲೇಖಿಸಿದೆ.

ಬೋನಸ್ ಮತ್ತು ಪಿಎಫ್‌ನಂತಹ ಪ್ರಯೋಜನಗಳನ್ನು ನೀಡುವುದರ ಜೊತೆಗೆ ಎಂಟು ಗಂಟೆಗಳ ಕೆಲಸಕ್ಕೆ ಕನಿಷ್ಠ ದೈನಂದಿನ ಕೂಲಿಯನ್ನು ರೂ 360 ರಿಂದ ರೂ 460 ಕ್ಕೆ ಹೆಚ್ಚಿಸುವ ಬಗ್ಗೆ ಕಾರ್ಮಿಕರು ಬೇಡಿಕೆಗಳನ್ನಿಟ್ಟಿದ್ದಾರೆ ಎನ್ನಲಾಗಿದೆ.

ಗ್ಯಾರಂಟಿಗಳಷ್ಟೇ ಸಾಕಾಗುವುದಿಲ್ಲ ಎನ್ನುತ್ತಿರುವ ಕಾರ್ಮಿಕರು

ಈ ಮಧ್ಯೆ, ಕಾಂಗ್ರೆಸ್ ಸರ್ಕಾರದ ಚುನಾವಣಾ ಗ್ಯಾರಂಟಿಗಳಷ್ಟೇ ಕಾರ್ಮಿಕರ ಜೀವನ ಸುಧಾರಣೆಗೆ ಸಾಕಾಗುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಗ್ಯಾರಂಟಿಗಳು ಬಿಕ್ಕಟ್ಟನ್ನು ಸೃಷ್ಟಿಸುವ ಬದಲು ಕಾರ್ಮಿಕರ ಜೀವನೋಪಾಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಬಹುದು ಎಂದಿವೆ.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್; ತುಂಬಿ ತುಳುಕುತ್ತಿವೆ ದೇವಾಲಯಗಳು, ಭಕ್ತರ ಮತ್ತಷ್ಟು ಅನುಕೂಲಕ್ಕೆ ಮುಜರಾಯಿ ಹೊಸ ಪ್ಲಾನ್

ಅನೇಕ ಕಾರ್ಮಿಕರು ತಿಂಗಳಿಗೆ 13,000 ರೂ.ಗಳಿಂದ 14,000 ರೂ.ವರೆಗಿನ ಕನಿಷ್ಠ ವೇತನಕ್ಕಾಗಿ ಅನೌಪಚಾರಿಕ ಕೆಲಸದಲ್ಲಿ ತೊಡಗುತ್ತಾರೆ. ಕುಟುಂಬದ ಅಗತ್ಯಗಳನ್ನು ಪೂರೈಸಲು ಆ ಮೊತ್ತವು ಹೇಗೆ ಸಾಕಾಗುತ್ತದೆ? ಸರ್ಕಾರವು ಯೋಜನೆಗಳನ್ನು ನೀಡುತ್ತಿರುವಾಗ, ಮಕ್ಕಳ ಶಾಲಾ ಶುಲ್ಕದಂತಹ ಹಲವಾರು ಇತರ ವೆಚ್ಚಗಳನ್ನು ಗಮನಿಸಬೇಕಾಗಿದೆ. ಕೆಲಸವಿಲ್ಲದೆ, ಅವರು ಈ ಹಣಕಾಸಿನ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಅಸ್ಪಷ್ಟವಾಗಿದೆ. ಅವರು ಪಡೆಯುವ ಉಚಿತ ಗ್ಯಾರಂಟಿಯ ಪ್ರಯೋಜನಗಳು ಸಾಕಾಗುವುದಿಲ್ಲ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಕರ್ನಾಟಕ ಕಾರ್ಯದರ್ಶಿ ಸತ್ಯಾನಂದ ಹೇಳಿದ್ದಾರೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್