AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಷತ್ ಚುನಾವಣೆ: ಕಾಂಗ್ರೆಸ್​​ನಿಂದ ಅಚ್ಚರಿ ಅಭ್ಯರ್ಥಿ ಆಯ್ಕೆ: ಯಾರು ಈ ಬಲ್ಕಿಸ್ ಭಾನು?

ವಿಧಾನ್​ ಪರಿಷತ್ ಚುನಾವಣೆ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಪೈಪೋಟಿ ಜೋರಾಗಿತ್ತು. ಇದರ ಬೆನ್ನಲ್ಲೇ ಇಂದು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮುಸ್ಲಿಂ ಕೋಟಾದಲ್ಲಿ ಶಿವಮೊಗ್ಗ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಲ್ಕಿಸ್ ಭಾನು ಅವರನ್ನು ಎಂಎಲ್​ಸಿ ಅಭ್ಯರ್ಥಿ ಆಗಿ ಪಕ್ಷ ಆಯ್ಕೆ ಮಾಡಿರುವುದು ವಿಶೇಷ. ಆ ಮೂಲಕ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ.

ಪರಿಷತ್ ಚುನಾವಣೆ: ಕಾಂಗ್ರೆಸ್​​ನಿಂದ ಅಚ್ಚರಿ ಅಭ್ಯರ್ಥಿ ಆಯ್ಕೆ: ಯಾರು ಈ ಬಲ್ಕಿಸ್ ಭಾನು?
ಪರಿಷತ್ ಚುನಾವಣೆ: ಕಾಂಗ್ರೆಸ್​​ನಿಂದ ಅಚ್ಚರಿ ಅಭ್ಯರ್ಥಿ ಆಯ್ಕೆ: ಯಾರು ಈ ಬಲ್ಕಿಸ್ ಭಾನು?
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 02, 2024 | 7:35 PM

Share

ಶಿವಮೊಗ್ಗ, ಜೂನ್​ 2: ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ (Congress) ಇಂದು ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಏಳು ಸ್ಥಾನಗಳ ಜೊತೆಗೆ ಮುಂಬರುವ ಪರಿಷತ್ ಉಪ ಚುನಾವಣೆಗೂ ಕೂಡ ಅಭ್ಯರ್ಥಿ ಘೋಷಿಸಲಾಗಿದೆ. ಆದರೆ ಅಲ್ಪಸಂಖ್ಯಾತ ಕೋಟದಡಿ ಶಿವಮೊಗ್ಗದ ಮಾಜಿ ಜಿಪಂ ಅಧ್ಯಕ್ಷೆ ಬಲ್ಕಿಸ್ ಭಾನು (Balkis Bhanu) ಅವರಿಗೆ ಕಾಂಗ್ರೆಸ್​​ ವಿಧಾನ ಪರಿಷತ್​ಗೆ ಟಿಕೆಟ್​ ನೀಡಲಾಗಿದೆ. ಆ ಮೂಲಕ ಹೊಸ ಮುಖ ಮತ್ತು ಮಹಿಳೆಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್​ ಅಚ್ಚರಿ ಅಭ್ಯರ್ಥಿಯ ಆಯ್ಕೆ ಮಾಡಿದೆ.

ಬಲ್ಕೀಸ್ ಭಾನು ಯಾರು?

ಬಲ್ಕಿಸ್ ಭಾನು ಅವರು ಜನತಾದಳದಲ್ಲಿ ಮೊದಲು ಗುರುತಿಸಿಕೊಂಡಿದ್ದರು. ಜನತಾದಳದಲ್ಲಿಯೇ ಇದ್ದಾಗಲೇ ಶಿವಮೊಗ್ಗ ಜಿಲ್ಲಾ ಪಂಚಾಯತ್​​ಗೆ 1994-95 ರಲ್ಲಿ ಜಿಲ್ಲಾ ಪಂಚಾಯತ್​ ಅಧ್ಯಕ್ಷರಾಗಿದ್ದರು. ಬಳಿಕ 2014 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಈ ಭಾರಿ ಎಂಎಲ್​​ಸಿ ಆಗಿ ಆಯ್ಕೆಯಾಗಲಿದ್ದಾರೆ. ಭದ್ರಾವತಿ ತಾಲ್ಲೂಕಿನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ್ದ ಅವರು ಶಿಕ್ಷಕಿಯಾಗಿ ತಮ್ಮ ಜೀವನವನ್ನು ಆರಂಭಿಸಿದ್ದರು. ನಂತರ ರಾಜಕೀಯವಾಗಿ ತೊಡಗಿಸಿಕೊಂಡು ಪಕ್ಷದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಇದೀಗ ಮುಸ್ಲಿಂ ಕೋಟಾದಲ್ಲಿ ಶಿವಮೊಗ್ಗ ಜಿಲ್ಲೆಯ ಮಹಿಳೆಯನ್ನು ಎಂಎಲ್​​ಸಿ ಅಭ್ಯರ್ಥಿ ಆಗಿ ಪಕ್ಷ ಆಯ್ಕೆ ಮಾಡಿರುವುದು ವಿಶೇಷ.

ಯಾರಿಗೆಲ್ಲಾ ಟಿಕೆಟ್​?

ಹೈಕಮಾಂಡ್ ಕೋಟದಡಿ ಎನ್​ಎಸ್ ಭೋಸರಾಜು, ಕಾರ್ಯಾಧ್ಯಕ್ಷ ವಸಂತ್ ಕುಮಾರ್, ಜಗದೇವ್ ಗುತ್ತೇದಾರ್​ಗೆ ಟಿಕೆಟ್​ ನೀಡಲಾಗಿದೆ. ರಾಯಚೂರು ನಾಯಕರ ವಿರೋಧದ ನಡುವೆಯೂ ಎನ್​ಎಸ್ ಭೋಸರಾಜು ಮರು ಆಯ್ಕೆ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಯತೀಂದ್ರ ಕೂಡ ಮೇಲ್ಮನೆ ಪ್ರವೇಶ ಮಾಡಲಿದ್ದಾರೆ. ಡಾ.ಕೆ ಗೋವಿಂದರಾಜು ಮೂರನೇ ಬಾರಿಗೆ ಆಯ್ಕೆ ಆಗಿದ್ದಾರೆ. ಇನ್ನು ಅಲ್ಪಸಂಖ್ಯಾತ ಕೋಟದಡಿ ಐವಾನ್ ಡಿಸೋಜ ಹಾಗೂ ಅಚ್ಚರಿ ಆಯ್ಕೆ ಎಂಬಂತೆ ಬಲ್ಕಿಸ್ ಬಾನು ಆಯ್ಕೆಯಾಗಿದೆ.

ಇದನ್ನೂ ಓದಿ: ಮತ ಎಣಿಕೆ ಮುನ್ನವೇ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮಹತ್ವದ ಬೇಡಿಕೆ ಇಟ್ಟ ಡಾ ಮಂಜುನಾಥ್

ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸ್ಥಾನಕ್ಕ ಉಪ ಚುನಾವಣೆ ನಡೆಯಲಿದ್ದು ಬಸನಗೌಡ ಬಾದರ್ಲಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ನಾಳೆ ಎಲ್ಲ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಕೆ ಮಾಡಲಿದ್ದು ಜೂನ್ 13ಕ್ಕೆ ಚುನಾವಣೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.