Covid 19 Karnataka Update: ಕರ್ನಾಟಕದಲ್ಲಿ 3382 ಮಂದಿಗೆ ಕೊರೊನಾ ಸೋಂಕು, 111 ಮಂದಿ ಸಾವು
ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 28,43,810ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ 35,040 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ 3382 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಂದೇ ದಿನ 111 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಂದೇ ದಿನ 813 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 11 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 28,43,810ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ 35,040 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 27,32,242 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 76,505 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12,13,559ಕ್ಕೆ ಏರಿಕೆಯಾಗಿದೆ. ಈ ಪೈಕಿ 11,54,234 ಜನರು ಗುಣಮುಖರಾಗಿದ್ದಾರೆ. 43,698 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆಯು 15,626ಕ್ಕೆ ಏರಿಕೆಯಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ರಾಜ್ಯದಲ್ಲಿ ಹೊಸದಾಗಿ 3382 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 813 ಮಂದಿಯಲ್ಲಿ ಸೋಂಕು ಕಾಣಿಸಿದೆ. ಉಳಿದಂತೆ ಬಾಗಲಕೋಟೆ 23, ಬಳ್ಳಾರಿ 23, ಬೆಳಗಾವಿ 116, ಬೆಂಗಳೂರು ಗ್ರಾಮಾಂತರ 72, ಬೀದರ್ 8, ಚಾಮರಾಜನಗರ 64, ಚಿಕ್ಕಬಳ್ಳಾಪುರ 34, ಚಿಕ್ಕಮಗಳೂರು 109, ಚಿತ್ರದುರ್ಗ 37, ದಕ್ಷಿಣ ಕನ್ನಡ 339, ದಾವಣಗೆರೆ 73, ಧಾರವಾಡ 35, ಗದಗ 18, ಹಾಸನ 265, ಹಾವೇರಿ 10, ಕಲಬುರಗಿ 17, ಕೊಡಗು 209, ಕೋಲಾರ 84, ಕೊಪ್ಪಳ 23, ಮಂಡ್ಯ 110, ಮೈಸೂರು 367, ರಾಯಚೂರು 7, ರಾಮನಗರ 18, ಶಿವಮೊಗ್ಗ 150, ತುಮಕೂರು 141, ಉಡುಪಿ 150, ಉತ್ತರ ಕನ್ನಡ 57, ವಿಜಯಪುರ 8, ಯಾದಗಿರಿ 2 ಪ್ರಕರಣಗಳು ಪತ್ತೆಯಾಗಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 111 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅತಿಹೆಚ್ಚು ಅಂದರೆ, 15 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಬೆಂಗಳೂರು ನಗರ 11, ಮೈಸೂರು 14, ದಾವಣಗೆರೆ 12, ಬಳ್ಳಾರಿ 9, ಧಾರವಾಡ, ಶಿವಮೊಗ್ಗ ತಲಾ 6, ಹಾವೇರಿ ಐವರು, ಹಾಸನ ನಾಲ್ವರು, ಕೋಲಾರ, ಉತ್ತರ ಕನ್ನಡ, ಮಂಡ್ಯ ತಲಾ ಮೂವರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಾಮರಾಜನಗರ, ಗದಗ, ಕಲಬುರಗಿ, ಕೊಪ್ಪಳ, ತುಮಕೂರು ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ವಿಜಯಪುರ, ರಾಯಚೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇಂದಿನ 30/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/GdPosQDMBV
@CMofKarnataka @drashwathcn@GovindKarjol @LaxmanSavadi @mla_sudhakar @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/D76XZXxhiq
— K’taka Health Dept (@DHFWKA) June 30, 2021
(Coronavirus Karnataka Numbers 3382 Infected 111 Deaths Due to Covid on June 30)
ಇದನ್ನೂ ಓದಿ: ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ; ಕೊರೊನಾ ಮೂರನೇ ಅಲೆ ತಡೆಯಲು ಸರ್ಕಾರದಿಂದ ವಿವಿಧ ಕ್ರಮ: ಆರ್ ಅಶೋಕ್
ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘನೆ: ಮುಂದಿನ ಸೋಮವಾರದವರೆಗೆ ಪೂರ್ವ ದೆಹಲಿಯ ಮಾರುಕಟ್ಟೆ ಬಂದ್
Published On - 7:18 pm, Wed, 30 June 21