Covid-19 Karantaka Update: ಕರ್ನಾಟಕದಲ್ಲಿ 11042 ಜನರಿಗೆ ಸೋಂಕು, 194 ಸಾವು

ಬೆಂಗಳೂರಲ್ಲಿ ಇಂದು ಒಂದೇ ದಿನ 2191 ಜನರಿಗೆ ಸೋಂಕು ದೃಢಪಟ್ಟಿದೆ. 47 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 27,39,290ಕ್ಕೆ ಏರಿಕೆಯಾಗಿದೆ.

  • Updated On - 9:06 pm, Thu, 10 June 21 Edited By: Ghanashyam D M | ಡಿ.ಎಂ.ಘನಶ್ಯಾಮ
Covid-19 Karantaka Update: ಕರ್ನಾಟಕದಲ್ಲಿ 11042 ಜನರಿಗೆ ಸೋಂಕು, 194 ಸಾವು
ಕೊರೊನಾ ವೈರಸ್

ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ (ಜೂನ್ 10) ಒಂದೇ ದಿನ 11,042 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 194 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ 2191 ಜನರಿಗೆ ಸೋಂಕು ದೃಢಪಟ್ಟಿದೆ. 47 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 27,39,290ಕ್ಕೆ ಏರಿಕೆಯಾಗಿದೆ. 24,96,132 ಜನರು ಗುಣಮುಖರಾಗಿದ್ದಾರೆ. ಈವರೆಗೆ ಕೊರೊನಾದಿಂದ 32485 ಜನರು ಮೃತಪಟ್ಟಿದ್ದಾರೆ. 2,10,652 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 2191 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 11,91,732ಕ್ಕೆ ಏರಿಕೆಯಾಗಿದೆ. ಈ ಪೈಕಿ 10,81,093 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾದಿಂದ ಈವರೆಗೆ 15,215 ಜನರು ಸಾವನ್ನಪ್ಪಿದ್ದಾರೆ. 95,423 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 2191 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ 264, ಬಾಗಲಕೋಟೆ 72, ಬಳ್ಳಾರಿ 293, ಬೆಳಗಾವಿ 439, ಬೀದರ್ 20, ಚಾಮರಾಜನಗರ 274, ಚಿಕ್ಕಬಳ್ಳಾಪುರ 280, ಚಿಕ್ಕಮಗಳೂರು 397, ಚಿತ್ರದುರ್ಗ 349, ದಕ್ಷಿಣ ಕನ್ನಡ 580, ದಾವಣಗೆರೆ 313, ಧಾರವಾಡ 261, ಗದಗ 90, ಹಾಸನ 776, ಹಾವೇರಿ 67, ಕಲಬುರಗಿ 58, ಕೊಡಗು 279, ಕೋಲಾರ 247, ಕೊಪ್ಪಳ 161, ಮಂಡ್ಯ 448, ಮೈಸೂರು 1011, ರಾಯಚೂರು 115, ರಾಮನಗರ 59, ಶಿವಮೊಗ್ಗ 521, ತುಮಕೂರು 571, ಉಡುಪಿ 291, ಉತ್ತರ ಕನ್ನಡ 426, ವಿಜಯಪುರ 174, ಯಾದಗಿರಿ 15 ಜನರಲ್ಲಿ ಸೋಂಕು ದೃಢಪಟ್ಟಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಟ್ಟು 194 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 47 ಜನರು ಸಾವನ್ನಪ್ಪಿದ್ದಾರೆ. ಮೈಸೂರು 18, ಬೆಳಗಾವಿ 12, ಹಾಸನ, ಬೆಂಗಳೂರು ಗ್ರಾಮಾಂತರ ತಲಾ 10, ಶಿವಮೊಗ್ಗ, ದಕ್ಷಿಣ ಕನ್ನಡ, ಧಾರವಾಡದಲ್ಲಿ ತಲಾ 8, ದಾವಣಗೆರೆ, ಕೋಲಾರದಲ್ಲಿ ತಲಾ 7, ಚಿಕ್ಕಬಳ್ಳಾಪುರ, ಹಾವೇರಿ, ಕಲಬುರಗಿಯಲ್ಲಿ ತಲಾ 6, ತುಮಕೂರು 5, ಮಂಡ್ಯ 4, ಚಿಕ್ಕಮಗಳೂರು, ಗದಗ, ರಾಯಚೂರು, ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ ತಲಾ 3, ಕೊಡಗು, ಕೊಪ್ಪಳ, ಉಡುಪಿ, ಉತ್ತರ ಕನ್ನಡ ತಲಾ 2, ಬೀದರ್, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,485 ಜನರು ಸಾವನ್ನಪ್ಪಿದ್ದಾರೆ.

(Coronavirus Karnataka Numbers Covid infection death details june 10)

ಇದನ್ನೂ ಓದಿ: Karnataka Unlock: 11 ಜಿಲ್ಲೆಗಳಲ್ಲಿ ಮಾತ್ರ ಲಾಕ್​ಡೌನ್ ವಿಸ್ತರಣೆ; ಇನ್ನುಳಿದ ಜಿಲ್ಲೆಗಳು 14ರಿಂದ ಅನ್​ಲಾಕ್: ಸಿಎಂ ಯಡಿಯೂರಪ್ಪ ಘೋಷಣೆ

ಇದನ್ನೂ ಓದಿ: Karnataka Unlock: ಮೆಟ್ರೊ ರೈಲು, ಬಸ್ ಸಂಚಾರಕ್ಕೆ ಸಿಗಲಿಲ್ಲ ಅನುಮತಿ; ಓಡಾಡಬಹುದು ಆಟೊ, ಟ್ಯಾಕ್ಸಿ