AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಗಮ ಮಂಡಳಿ ನೇಮಕ: ಬಸವರಾಜ ರಾಯರೆಡ್ಡಿಗೆ ಕಾಂಗ್ರೆಸ್ ಹೈಕಮಾಂಡ್ ಹಠಾತ್ ಬುಲಾವ್

ರಾಯರೆಡ್ಡಿ ಅವರು ತಮ್ಮ ಸರ್ಕಾರದ ವಿರುದ್ಧವೇ ಪದೇಪದೆ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ. ಅಲ್ಲದೇ, ರಾಯರೆಡ್ಡಿ ಜೊತೆ ಒಂದಷ್ಟು ಸಮಾನ ಮನಸ್ಕ ಶಾಸಕರ ಗುಂಪಿದೆ. ಸರ್ಕಾರದ ವಿರುದ್ಧದ ಅವರ ಅಪಸ್ವರಗಳಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುವ ಆತಂಕ ಎದುರಾಗಿದೆ. ಹೀಗಾಗಿ ಸಿಎಂ, ಡಿಸಿಎಂ, ಸುರ್ಜೇವಾಲ ಅವರು ರಾಯರೆಡ್ಡಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

ನಿಗಮ ಮಂಡಳಿ ನೇಮಕ: ಬಸವರಾಜ ರಾಯರೆಡ್ಡಿಗೆ ಕಾಂಗ್ರೆಸ್ ಹೈಕಮಾಂಡ್ ಹಠಾತ್ ಬುಲಾವ್
ಬಸವರಾಜ ರಾಯರೆಡ್ಡಿ
ಪ್ರಸನ್ನ ಗಾಂವ್ಕರ್​
| Edited By: |

Updated on: Nov 21, 2023 | 9:08 PM

Share

ಬೆಂಗಳೂರು, ನವೆಂಬರ್ 21: ಕಾಂಗ್ರೆಸ್ ಸರ್ಕಾರಕ್ಕೆ ನಿಗಮ ಮಂಡಳಿಗಳ ಅಧ್ಯಕ್ಷಸ್ಥಾನ ನೇಮಕ (Corporation Board Appointment) ವಿಚಾರ ಕಗ್ಗಂಟಾಗಿಯೇ ಉಳಿದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆದಿದ್ದು, ಇನ್ನೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈ ಮಧ್ಯೆ, ಸುರ್ಜೇವಾಲ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜತೆಗಿನ ಸಭೆಗೆ ಬರುವಂತೆ ಬಸವರಾಜ ರಾಯರೆಡ್ಡಿ (Basvaraj Rayareddi) ಅವರನ್ನು ಕರೆಸಿಕೊಂಡಿದ್ದಾರೆ.

ಬಸವರಾಜ ರಾಯರೆಡ್ಡಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಯರೆಡ್ಡಿ ಅವರು ತಮ್ಮ ಸರ್ಕಾರದ ವಿರುದ್ಧವೇ ಪದೇಪದೆ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ. ಅಲ್ಲದೇ, ರಾಯರೆಡ್ಡಿ ಜೊತೆ ಒಂದಷ್ಟು ಸಮಾನ ಮನಸ್ಕ ಶಾಸಕರ ಗುಂಪಿದೆ. ಸರ್ಕಾರದ ವಿರುದ್ಧದ ಅವರ ಅಪಸ್ವರಗಳಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುವ ಆತಂಕ ಎದುರಾಗಿದೆ. ಹೀಗಾಗಿ ಸಿಎಂ, ಡಿಸಿಎಂ, ಸುರ್ಜೇವಾಲ ಅವರು ರಾಯರೆಡ್ಡಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ, ಬಸವರಾಜ ರಾಯರೆಡ್ಡಿ ಜೊತೆಗೆ ಸಿಎಂ, ಡಿಸಿಎಂ, ಸುರ್ಜೇವಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ನಿಗಮ ಮಂಡಳಿಗೆ ನೇಮಕ ಮಾಡುತ್ತೇವೆ ಎಂದು ರಾಯರೆಡ್ಡಿಗೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಹಿಂದೆ ಸಚಿವರಾಗಿದ್ದ ರಾಯರೆಡ್ಡಿ ನಿಗಮ ಮಂಡಳಿಗೆ ಒಪ್ಪುತ್ತಾರಾ ಎಂಬ ಪ್ರಶ್ನೆಯೂ ಎದುರಾಗಿದೆ.

ಇದನ್ನೂ ಓದಿ: ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ: ಸಿದ್ದರಾಮಯ್ಯ

ಬಗೆಹರಿಯದ ಬಿಕ್ಕಟ್ಟು: ಬೆಂಗಳೂರಲ್ಲೇ ಉಳಿದ ಸುರ್ಜೇವಾಲ

ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆ ಬಗೆಹರಿಯದ ಕಾರಣ ರಣದೀಪ್ ಸುರ್ಜೇವಾಲ ಇಂದು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ನಿಗದಿಯಂತೆ ಸಂಜೆ 6.30ಕ್ಕೆ ಬೆಂಗಳೂರಿನಿಂದ ಅವರು ವಾಪಸಾಗಬೇಕಿತ್ತು. ಆದರೆ ಇದುವರೆಗೆ ಮೊದಲ ಸುತ್ತಿನ ಸಮಾಲೋಚನೆಯೇ ಬಗೆಹರಿದಿಲ್ಲ ಎನ್ನಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ