ಸ್ಥಿರ, ಚರಾಸ್ತಿಯ ಮೌಲ್ಯದ 75% ದಷ್ಟು ಸಾಲಗಾರ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 03, 2024 | 6:53 PM

ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಅವರು ಇಂದು (ಏಪ್ರಿಲ್ 03) ನಾಮಪತ್ರ ಸಲ್ಲಿಸಿದರು. ಇನ್ನು ನಾಮಪತ್ರದ ಅಫಿಡೆವಿಟ್​ನಲ್ಲಿ ತಮ್ಮ ಹೆಸರಿನಲ್ಲಿರುವ ಆಸ್ತಿಯನ್ನು ಘೋಷಣೆ ಮಾಡಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಸ್ಥಿರ-ಚರಾಸ್ತಿ ಹೊಂದಿದ್ದಾರೆ. ಆದ್ರೆ, ಈ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯ ಅರ್ಧಕ್ಕಿಂತ ಹೆಚ್ಚು ಸಾಲ ಇದೆ.

ಸ್ಥಿರ, ಚರಾಸ್ತಿಯ ಮೌಲ್ಯದ 75% ದಷ್ಟು ಸಾಲಗಾರ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ
ಪದ್ಮರಾಜ್ ರಾಮಯ್ಯ
Follow us on

ಮಂಗಳೂರು, ಮಾರ್ಚ್​​ 03: ಅಖಾಡ ರಂಗೇರಿದೆ. ಲೋಕಸಭೆ ಚುನಾವಣೆ (Lok Sabha Elections) ಗೆಲ್ಲೋಕೆ ನಾನಾ ತಂತ್ರಗಾರಿಕೆಯೇ ನಡೆಯುತ್ತಿದೆ. ಚುನಾವಣೆಗೆ ಕೆಲವೇ ದಿನಗಳಿರುವಾಗಲೇ ನಾಮಪತ್ರ ಸಲ್ಲಿಕೆಯ ಹಬ್ಬ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳು ತಮ್ಮದೇ ಆದ ಶಕ್ತಿಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಇದೇ ರೀತಿಯಾಗಿ ಇಂದು ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ (Padmaraj Ramaiah) ನಾಮಪತ್ರ ಸಲ್ಲಿಸಿದ್ದಾರೆ. ಸ್ಥಿರ ಮತ್ತು ಚರಾಸ್ತಿಯ ಮೌಲ್ಯದ 75% ದಷ್ಟು ಸಾಲವನ್ನು ಹೊಂದಿರುವುದಾಗಿ ಪದ್ಮರಾಜ್ ರಾಮಯ್ಯ ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

1,26,50,000 ಕೋಟಿ ರೂ. ಸಾಲ

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ 1,26,50,000 ಕೋಟಿ ರೂ. ಸಾಲ ಹೊಂದಿದ್ದಾರೆ. 30 ಲಕ್ಷ ರೂ. ಮೌಲ್ಯದ ಕಾರು ಲೋನ್ ಸೇರಿ ಇತರೆ ಸಾಲಗಳ ಮೌಲ್ಯ ಕೋಟಿ ರೂ. ಇದೆ. ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 1,48,01,445 ಕೋಟಿ ರೂ. ಆದರೆ ಅವರ ಆಸ್ತಿ ಮೌಲ್ಯದ ಅರ್ಧದಷ್ಟು ಅಂದರೆ 1,26,50,000 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ.

ಇದನ್ನೂ ಓದಿ: ಉಡುಪಿ ಬಿಟ್ಟು ಬೆಂಗಳೂರಿಗೆ ಬಂದ ಶೋಭಾ ಕರಂದ್ಲಾಜೆ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ?

  • ಸ್ಥಿರ ಆಸ್ತಿಯ ಒಟ್ಟು ಮೊತ್ತ 83,10,000 ಲಕ್ಷ ರೂ.
  • ಚರಾಸ್ತಿಯ ಒಟ್ಟು ಮೊತ್ತ 64,91,045 ಲಕ್ಷ ರೂ.
  • ಪದ್ಮರಾಜ್ ರಾಮಯ್ಯ ಪತ್ನಿಯ ಚರಾಸ್ತಿಯ ಒಟ್ಟು ಮೊತ್ತ 35,36,141 ಲಕ್ಷ ರೂ.
  • ಪದ್ಮರಾಜ್ ರಾಮಯ್ಯ ಹಾಗೂ ಪತ್ನಿಯ ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 1,83,37,586 ಕೋಟಿ ರೂ.
    ಮಂಗಳೂರಿನ ಎಸ್​​​ಡಿಎಂ ಕಾಲೇಜಿನಲ್ಲಿ ಬಿಎ.ಎಲ್​​ಎಲ್​ಬಿ ಪದವಿ ಶಿಕ್ಷಣವನ್ನು ಪದ್ಮರಾಜ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ, ವಜ್ರ.. ಅಬ್ಬಬ್ಬಾ ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ಎಷ್ಟಿದೆ ಗೊತ್ತಾ?

ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಆಪ್ತರಾಗಿರುವ ಪದ್ಮರಾಜ್ ರಾಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಆ ಮೂಲಕ ಕಾಂಗ್ರೆಸ್, ಜಿಲ್ಲೆಯ ಅತಿ ದೊಡ್ಡ ಸಮುದಾಯವಾದ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.