ಭಜನಾ ಸತ್ಸಂಗ ಯಾತ್ರೆ: ಶಿವನಾಮ ಸ್ಮರಿಸುತ್ತಾ ತಾಳ-ಮದ್ದಳೆ ಸದ್ದಿಗೆ ತಕ್ಕಂತೆ ಹೆಜ್ಜೆ
ದಕ್ಷಿಣ ಕನ್ನಡ: ಆಹಾ.. ಎಂಥಾ ಹಿತವೆನಿಸುವ ಹಾಡು. ತಾಳ-ಮದ್ದಳೆ ಸದ್ದ, ತಂದನಾನಾ ತಂದನಾನಾ ಸಾಂಗ್ಗೆ ತಾಳಕ್ಕೆ ತಕ್ಕಂತೆ ಹೆಜ್ಜೆ. ಹೆಣ್ಣು ಮಕ್ಕಳಿಂದ ಹನುಮನ ಜಪ.. ಭಜನೆ ಸದ್ದು. ಕಳಸ ಹಿಡಿದು ಮಹಿಳೆಯರ ಹೆಜ್ಜೆ. ಎಲ್ಲೆಲ್ಲೂ ಮಂತ್ರ ಪಠಣ, ರಾರಾಜಿಸಿದ ಭಕ್ತಿ-ಭಾವ. ಸಾಮೂಹಿಕ ಭಜನೆಗೆ ಸಾಕ್ಷಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆ ಮೈದಾನ. ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್, ಭಜನಾ ಸತ್ಸಂಗ ಸಮಿತಿ ವತಿಯಿಂದ ಸಾಮೂಹಿಕ ಭಜನಾ ಸತ್ಸಂಗ ಕಾರ್ಯಕ್ರಮ […]
ದಕ್ಷಿಣ ಕನ್ನಡ: ಆಹಾ.. ಎಂಥಾ ಹಿತವೆನಿಸುವ ಹಾಡು. ತಾಳ-ಮದ್ದಳೆ ಸದ್ದ, ತಂದನಾನಾ ತಂದನಾನಾ ಸಾಂಗ್ಗೆ ತಾಳಕ್ಕೆ ತಕ್ಕಂತೆ ಹೆಜ್ಜೆ. ಹೆಣ್ಣು ಮಕ್ಕಳಿಂದ ಹನುಮನ ಜಪ.. ಭಜನೆ ಸದ್ದು. ಕಳಸ ಹಿಡಿದು ಮಹಿಳೆಯರ ಹೆಜ್ಜೆ. ಎಲ್ಲೆಲ್ಲೂ ಮಂತ್ರ ಪಠಣ, ರಾರಾಜಿಸಿದ ಭಕ್ತಿ-ಭಾವ.
ಸಾಮೂಹಿಕ ಭಜನೆಗೆ ಸಾಕ್ಷಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆ ಮೈದಾನ. ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್, ಭಜನಾ ಸತ್ಸಂಗ ಸಮಿತಿ ವತಿಯಿಂದ ಸಾಮೂಹಿಕ ಭಜನಾ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ರು.
ಭಜನಾ ಸಂಕೀರ್ತನಾ ಯಾತ್ರೆ ಸಂಪನ್ನ: ರಸ್ತೆಯುದ್ದಕ್ಕೂ ಭಜನಾ ಸಂಕೀರ್ತನಾ ಯಾತ್ರೆ ಸಂಪನ್ನಗೊಂಡಿತ್ತು. ಭಜನೆ ಗೀತೆಗಳನ್ನ ಹಾಡುತ್ತಾ, ಶಿವನಾಮ ಸ್ಮರಿಸುತ್ತಾ ಜನರು ಹೆಜ್ಜೆ ಹಾಕಿದ್ರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಳಾದ ಡಾ.ವೀರೇಂದ್ರ ಹೆಗ್ಗಡೆಯವರು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಈ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ರು.
ಇನ್ನು ಭಜನಾ ಸತ್ಸಂಗ ಕಾರ್ಯಕ್ರಮದಲ್ಲಿ ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ನಡೀತು. ಈ ಭಜನಾ ಕಾರ್ಯಕ್ರಮಕ್ಕೆ ಬೆಳ್ತಂಗಡಿ, ಕಾರ್ಕಳ, ಸುಳ್ಯ, ಕಾಸರಗೋಡು, ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸಿದ್ರು. ಕೇರಳದ ಭಜನಾ ತಂಡಗಳು ನೆರೆದಿದ್ದವರನ್ನ ರಂಜಿಸ್ತು. ಮಕ್ಕಳ ನೃತ್ಯ.. ಹೆಣ್ಣು ಮಕ್ಕಳು ವೇದಿಕೆ ಮೇಲೆ ಹೆಜ್ಜೆ ಹಾಕ್ತಿದ್ದನ್ನ ಕಂಡು ಜನರು ಖುಷ್ ಆದ್ರು.
ಒಟ್ನಲ್ಲಿ ಸದಾ ಒಂದಿಲ್ಲೊಂದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಜ್ಜೆ ಇಡ್ತಿದೆ. ಇಷ್ಟು ದಿನ ಜಮೀನು ಕೆಲ್ಸ.. ಆಫೀಸು ಅಂಥಾ ಬ್ಯುಸಿಯಾಗಿದ್ದ ಕರಾವಳಿ ಜನರು ಭಜನೆ, ಸಂಕೀರ್ತನೆ ಕೇಳಿ ಸಂತಸಗೊಂಡ್ರು.