AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಕಾಂಗ್ರೆಸ್ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ -ಬಿ.ವೈ.ವಿಜಯೇಂದ್ರ

ಬಂಟ್ವಾಳದಲ್ಲಿ ಹರ್ಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ‘ಕೈ’ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ -ಬಿ.ವೈ.ವಿಜಯೇಂದ್ರ
ಬಿ.ವೈ ವಿಜಯೇಂದ್ರ
TV9 Web
| Edited By: |

Updated on: Oct 15, 2024 | 3:21 PM

Share

ಮಂಗಳೂರು, ಅ.15: ಹರಿಯಾಣದಲ್ಲಿ ಹಗಲುಗನಸು ಕಾಣುತ್ತಿದ್ದ ಕಾಂಗ್ರೆಸ್​​ (Congress) ಸೋಲು ಕಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿ.ವೈ.ವಿಜಯೇಂದ್ರ (BY Vijayendra) ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ ನಮಗೆಲ್ಲಾ ತಿಳಿದಿದೆ. ಹರಿಯಾಣದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಶ್ಮೀರದಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿ ನಿಂತಿದೆ. ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್​​ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದರು.

ಬಂಟ್ವಾಳದಲ್ಲಿ ಹರ್ಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ‘ಕೈ’ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನದಲ್ಲೇ ಒಪ್ಪಿದ್ದಾರೆ. ಮುಡಾ ನಿವೇಶನವನ್ನು ಸಿಎಂ ಸಿದ್ದರಾಮಯ್ಯ ವಾಪಸ್​ ನೀಡಿದ್ದಾರೆ. ಸೈಟ್​ ಹಿಂಪಡೆದು ಸಿಎಂ ಸಿದ್ದರಾಮಯ್ಯ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಪಕ್ಷ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು ಅಭಿವೃದ್ಧಿಗೆ ಹಣ ನೀಡ್ತಿಲ್ಲ. ಪರಿಷತ್​ ಉಪಚುನಾವಣೆ ಕ್ಷೇತ್ರವನ್ನು ಹಾಲಿ ಸಂಸದ ಕೋಟಾ ಶ್ರೀನಿವಾಸ್​​ ಪೂಜಾರಿ ಪ್ರತಿನಿಧಿಸುತ್ತಿದ್ದರು. ಹಿಂದುತ್ವದ ಕಟ್ಟಾಳು ಕಿಶೋರ್​ ಕುಮಾರ್​ ಅವರನ್ನು ಕಣಕ್ಕಿಳಿಸಿದ್ದೇವೆ. ಹಾಗಾಗಿ ಈ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಮತ್ತೊಮೆ ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ: ಸಿಎಂ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ 43 ಪ್ರಕರಣಗಳು ದಾಖಲಾಗಿವೆ: ಕಾಂಗ್ರೆಸ್​ ಮುಖಂಡ

ಮತ್ತೊಂದೆಡೆ ಮಂಗಳೂರಿನಲ್ಲಿ ನಡೆದ ಜನಪ್ರತಿನಿಧಿಗಳ ಸಮಾವೇಶದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನವರಿಗೆ ಈ ಸಭೆ ಸಮಾರಂಭಗಳಲ್ಲಿ ನಂಬಿಕೆಯಿಲ್ಲ. ಕಾಂಗ್ರೆಸ್ ನವರಿಗೆ ದುಡ್ಡು ಹೊಡಿಯೋದು ದುಡ್ಡು ಮಾಡೋದು ಅಷ್ಟೇ ನಂಬಿಕೆ. ಕಾಂಗ್ರೆಸ್ ನವರು ನಮ್ಮ ದುಡ್ಡನ್ನು ನಮಗೆ ಉಚಿತ ಅಂತಾ ಕೊಡ್ತಿದ್ದಾರೆ. ಈ ಉಚಿತ ಕೊಡ್ತಿರೋದು ಏನು ಅವರ ಅಪ್ಪನ ಮನೆಯಿಂದ ಕೊಡೋದಾ? ಸರ್ಕಾರ ಒಂದು ರೀತಿ ಪಾಪರ್ ಆಗಿ ಹೋಗಿದೆ. ಅನುದಾನ ಎಂಬುದು ಇವತ್ತು ಮರೀಚಿಕೆ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇರುವವರೆಗೆ ಯಾವ ಅನುದಾನವು ಬರಲ್ಲ.

ಈ ಸರ್ಕಾರ ತೊಲಗಿದ್ರೆ ಮಾತ್ರ ಅನುದಾನ ಬರೋದು. ಸಿದ್ದರಾಮಯ್ಯ 14 ಸೈಟ್ ಮಾತ್ರ ನುಂಗಿರೋದಲ್ಲ. ಸಾವಿರ ಸೈಟ್ ನ್ನು ಸಿದ್ದರಾಮಯ್ಯ ನುಂಗಿದ್ದಾರೆ. ಅವರ ಬೆಂಬಲಿಗರೂ ನುಂಗಿದ್ದಾರೆ. ಮುಂದೆ 100% ಸಿದ್ದರಾಮಯ್ಯ ನವರು ಇರಲ್ಲ. ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಈಗ ಸಿದ್ದರಾಮಯ್ಯನವರು ಕುಂಕುಮ ಹಾಕ್ತಿದ್ದಾರೆ. ಈಗ ಹೆಂಡ್ತಿ ಹೆಸರಲ್ಲಿ ಅರ್ಚನೆ ಮಾಡುವ ಪರಿಸ್ಥಿತಿ ಬಂದಿದೆ. ಅರ್ಚಕ ಕುಂಕು‌ಮ ಕೊಡದಿದ್ರು ಇವರೇ ತಗೋತಾರೆ. ಈ ಸರ್ಕಾರಕ್ಕೆ ಗ್ಯಾರಂಟಿ ಇಲ್ಲ. ಯಾವುದೇ ಕ್ಷಣದಲ್ಲೂ ಬಿದ್ದು ಹೋಗಬಹುದು ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ