AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಕ ವಸ್ತು ಮಾರಾಟ ಹಾಗೂ ಸೇವನೆಯಲ್ಲಿ ತೊಡಗಿದ್ದವರಿಗೆ ಪೊಲೀಸರಿಂದ ಪಾಠ

ಸ್ವೀಟ್​ನಲ್ಲಿ ಡ್ರಗ್ಸ್ ಕೊಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಟ್ಲಾವಾ ಸ್ವೀಟ್​ನಲ್ಲಿ ಡ್ರಗ್ ಕೊಡುತ್ತಿದ್ದ ಬೇಕರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಗಳನ್ನು ನಾಲ್ಕು ಸುತ್ತು ಓಡಿಸಿ ಬೆಂಡೆತ್ತಿದ್ದಾರೆ. ಈ ಹಿಂದೆ, ಸ್ವೀಟ್​ನಲ್ಲಿ ಡ್ರಗ್ಸ್ ಕೊಡುತ್ತಿದ್ದ ವ್ಯಕ್ತಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದರು. ಬೇಕರಿಯವರು ಬಕ್ಲಾವಾ ಸ್ವೀಟ್​ನಲ್ಲಿ ಡ್ರಗ್ ಕೊಡುತ್ತಿದ್ದರು. ಬೇಕರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಇಂದು ಅಂಥಾ ಮಾದಕ ವಸ್ತು ದಂಧೆಕೋರರನ್ನು ನಾಲ್ಕು ಸುತ್ತು ಓಡಿಸಿ ಪಾಠ ಮಾಡಿದ್ದಾರೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬೇಕರಿಯನ್ನು ಪರಿಶೀಲಿಸಲು ಆಹಾರ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಮಾದಕ ವಸ್ತು ಮಾರಾಟ ಹಾಗೂ ಸೇವನೆಯಲ್ಲಿ ತೊಡಗಿದ್ದವರಿಗೆ ಪೊಲೀಸರಿಂದ ಪಾಠ
ಮಂಗಳೂರು ಮಾದಕ ವಸ್ತು ವ್ಯವಹಾರದಲ್ಲಿ ತೊಡಗಿದ್ದವರಿಗೆ ಪೊಲೀಸರಿಂದ ಪಾಠ
TV9 Web
| Edited By: |

Updated on:Oct 16, 2026 | 6:41 PM

Share

ಮಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಲವು ಆರೋಪಿಗಳನ್ನು ಸೇರಿಸಿ, ಪೊಲೀಸರು ಇಂದು ಪಾಠ ಮಾಡಿದ್ದಾರೆ. ಮಾದಕ ವಸ್ತು ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ನಾಲ್ಕು ಸುತ್ತು ಓಡಿಸಿ, ಸರಿಯಾಗಿ ಬುದ್ಧಿವಾದ ಹೇಳಿದ್ದಾರೆ. ಡ್ರಗ್ ದಂಧೆಕೋರರು ಹಾಗೂ ಮಾದಕ ವಸ್ತು ವ್ಯಸನಿಗಳಾಗಿದ್ದವರ ಪರೇಡ್ ನಡೆಸಿದ್ದಾರೆ.

ನಗರದ ಸಿ.ಎ.ಆರ್. ಮೈದಾನದಲ್ಲಿ ನಡೆದ ಎನ್.ಡಿ.ಪಿ.ಎಸ್. ಪೆರೇಡ್​ನಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್​, ಡ್ರಗ್ ಪೆಡ್ಲರ್​ಗಳು ಮತ್ತು ಬಳಕೆದಾರರಿಗೆ ಸರಿಯಾದ ತಿಳುವಳಿಕೆ ನೀಡಿದ್ದಾರೆ. ಗಾಂಜಾ ಎಲ್ಲಿಂದ ತರ್ತಾ ಇದ್ದೆ. ಯಾರಿಗೆ ಕೊಡ್ತಾ ಇದ್ದೆ ಅಂತಾ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗಳಿಗೆ ಡ್ರಗ್ ಮಾರಾಟಗಾರ ಇಂಗ್ಲಿಷ್​ನಲ್ಲಿ ಉತ್ತರಿಸಿದ್ದಾನೆ. ಆ ಬಗ್ಗೆ ಗರಂ ಆದ ಪೊಲೀಸರು, ನೀನು ಇಂಗ್ಲಿಷ್​ನಲ್ಲಿ ಮಾತಾಡಿದ್ರು ನೀನು ಡ್ರಗ್ ದಂಧೆಯವನೇ ಎಂದು ಖಡಕ್ ಮಾತು ಹೇಳಿದ್ದಾರೆ. ಕನ್ನಡ ಬರೋದಿಲ್ವಾ ನಿನಗೆ? ಕನ್ನಡದಲ್ಲಿ ಮಾತಾಡು ಎಂದು ಪಾಠ ಮಾಡಿದ್ದಾರೆ. ಮಾದಕ ವಸ್ತುಗಳ ವಹಿವಾಟಿನಲ್ಲಿ

ಈ ಹಿಂದೆ, ಸ್ವೀಟ್​ನಲ್ಲಿ ಡ್ರಗ್ಸ್ ಕೊಡುತ್ತಿದ್ದ ವ್ಯಕ್ತಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದರು. ಬೇಕರಿಯವರು ಬಕ್ಲಾವಾ ಸ್ವೀಟ್​ನಲ್ಲಿ ಡ್ರಗ್ ಕೊಡುತ್ತಿದ್ದರು. ಬೇಕರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಇಂದು ಅಂಥಾ ಮಾದಕ ವಸ್ತು ದಂಧೆಕೋರರನ್ನು ನಾಲ್ಕು ಸುತ್ತು ಓಡಿಸಿ ಪಾಠ ಮಾಡಿದ್ದಾರೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬೇಕರಿಯನ್ನು ಪರಿಶೀಲಿಸಲು ಆಹಾರ ಇಲಾಖೆಗೆ ಮಾಹಿತಿ ನೀಡಲಾಗಿದೆ.

Published On - 8:29 pm, Wed, 6 January 21

Follow Us
TV9 Web
TV9 Web

TV9 Kannada

Read More