ಕೇರಳದ ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಯುವತಿ: ಕ್ಷಮಿಸಿ ಎಂದ ಹಿಂದೂ ಮುಖಂಡ

ತಂದೆ-ತಾಯಿ, ಹಿಂದೂ ಸಂಘಟನೆಗಳ ಮುಖಂಡರ ಹೋರಾಟದ ನಂತರವೂ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ವಿವಾಹವಾಗಿದ್ದಾಳೆ. ಈ ಯುವಕನ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ಇದು ಆತನ ಎರಡನೇ ಮದುವೆಯಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ ಇಲ್ಲಿದೆ ಓದಿ.

ಕೇರಳದ ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದೂ ಯುವತಿ: ಕ್ಷಮಿಸಿ ಎಂದ ಹಿಂದೂ ಮುಖಂಡ
ಆಶ್ಫಕ್​​, ವಿಸ್ಮಯ್​
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ

Updated on:Aug 10, 2024 | 1:56 PM

ಮಂಗಳೂರು, ಆಗಸ್ಟ್​​ 10: ಮುಸ್ಲಿಂ (Muslim) ಯುವಕನೊಂದಿಗೆ ನಾಪತ್ತೆಯಾಗಿದ್ದ ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ ಪ್ರಕರಣ ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ಕೇರಳದ (Kerala) ಮೊಹಮ್ಮದ್ ಅಶ್ಫಾಕ್‌ ವಿಸ್ಮಯಳನ್ನು ಮದುವೆಯಾಗಿದ್ದಾನೆ. ಈ ಕುರಿತು ವಿಶ್ವ ಹಿಂದೂ ಪರಿಷತ್ (VHP) ಮುಖಂಡ ಶರಣ್ ಪಂಪವೆಲ್ (Sharan Pumpwell) ಫೇಸ್​​ಬುಕ್​ ಪೋಸ್ಟ್ ಹಾಕಿದ್ದು, ವಿಸ್ಮಯ ತಂದೆಯ ಬಳಿ ಕ್ಷಮೆಯಾಚಿಸಿದ್ದಾರೆ.

ಏನಿದು ಘಟನೆ

ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ, ಕ್ರಿಮಿನಲ್​ ಹಿನ್ನೆಲೆ ಉಳ್ಳ ಮೊಹಮ್ಮದ್ ಅಶ್ಫಾಕ್​​​ನ ಪ್ರೀತಿ ಬಲೆಗೆ ಬಿದ್ದಿದ್ದಳು. ಮೊಹಮ್ಮದ್ ಅಶ್ಫಾಕ್​​ನಿಗೆ ಈಗಾಗಲೇ ಒಂದು ಮದುವೆಯಾಗಿದೆ. ಅಲ್ಲದೆ ಮೊಹಮ್ಮದ್ ಅಶ್ಫಾಕ್​ನ ವಿರುದ್ಧ ಕಾಸರಗೋಡಿನ ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಕಾಸರಗೋಡಿನಲ್ಲೇ ವಿಸ್ಮಯ ಮತ್ತು ಆಶ್ಫಕ್​ನ ನಡುವೆ ಲವ್ವಿ ಡವ್ವಿ ನಡೆದಿತ್ತು.

ವಿಸ್ಮಯ ತಂದೆ ವಿನೋದ್​ ಅವರು ವಿಸ್ಮಯಳನ್ನು ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇರಿಸಿ ಬಿಸಿಎ ಶಿಕ್ಷಣ ಕೊಡಿಸುತ್ತಿದ್ದರು. ಇಲ್ಲಿಯೂ ಆಕೆಯನ್ನು ಬಿಡದ ಆಶ್ಫಕ್​​ ಕಳೆದ ಜೂನ್​ 6 ರಂದು ಉಳ್ಳಾಲದಿಂದ ವಿಸ್ಮಯ ಕರೆದುಕೊಂಡು ಹೋಗಿದ್ದನು. ವಿದ್ಯಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂ‌ನ್ 30ರಂದು ಆಶ್ಫಕ್​​ ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು.

ಈ ಬಗ್ಗೆ ವಿಸ್ಮಯ ತಂದೆ ವಿನೋದ್​ ಅವರು ಉಳ್ಳಾಲ ಪೊಲೀಸ್​ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿ, ಪೋಷಕರಿಗೆ ಒಪ್ಪಿಸಿದರು. ಬಳಿಕ ವಿನೋದ್​ ಮಂಗಳೂರಿನ ವಿಹೆಚ್​ಪಿ ನಾಯಕರನ್ನು ಭೇಟಿಯಾಗಿ, ಕ್ರಿಮಿನಲ್ ರೆಕಾರ್ಡ್ ಹೊಂದಿರುವ ಅಶ್ಫಾಕ್ ಎರಡು ತಿಂಗಳ ಪರಿಚಯದಲ್ಲೇ ವಿಸ್ಮಯಳನ್ನು ಮೈಂಡ್ ವಾಶ್ ಮಾಡಿದ್ದಾನೆ. ಕೇರಳದಲ್ಲಿ ವಿಸ್ಮಯಳನ್ನು ಮತಾಂತರಿಸಲು ಯತ್ನಿಸಿದ್ದಾನೆ. ನನ್ನ ಮಗಳನ್ನ ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: ನಾಪತ್ತೆಯಾಗಿದ್ದ ಹಿಂದೂ ಯುವತಿ ನಟೋರಿಯಸ್ ಮುಸ್ಲಿಂ ಯುವಕನ ಜತೆ ಪತ್ತೆ

ನಂತರ ವಿಹೆಚ್​ಪಿ ನಾಯಕರು ವಿಸ್ಮಯಳನ್ನು ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿರಿಸಿದ್ದರು. ಕೌನ್ಸಿಲಿಂಗ್ ಕೇಂದ್ರದಲ್ಲಿ ವಿಸ್ಮಯ, ಅಶ್ಫಾಕ್ ಜೊತೆಗೆ ತೆರಳುವುದಾಗಿ ಹೇಳುತ್ತಿದ್ದಳು. ಕಾನೂನು ಹೋರಾಟದ ಮೂಲಕ ಮಗಳನ್ನು ವಾಪಾಸ್ ಕರೆದುಕೊಂಡು ಬರುವುದಾಗಿ ವಿಹೆಚ್​ಪಿ ಮುಖಂಡರು ಭರವಸೆ ನೀಡಿದ್ದರು.

ಈ ನಡುವೆ ಅಶ್ಫಾಕ್ ಕೇರಳ ಹೈಕೋರ್ಟ್​​ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದಾನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದಿದೆ. ಕೊನೆಗೆ ನ್ಯಾಯಾಲಯದ ಆದೇಶ ಆಶ್ಫಕ್​ ಪರವಾಗಿ ಬಂದಿದೆ. ಇದೀಗ, ಆಶ್ಫಕ್​ ವಿಸ್ಮಯಳನ್ನು ಇಸ್ಲಾಂಗೆ ಮತಾಂತರಿಸಿ, ವಿವಾಹವಾಗಿದ್ದಾನೆ. ತಂದೆ-ತಾಯಿ, ಹಿಂದೂ ಸಂಘಟನೆಗಳ ಹೋರಾಟದ ಬಳಿಕವೂ ವಿಸ್ಮಯ, ಆಶ್ಫಕನನ್ನು ವರಸಿದ್ದಾಳೆ. ಆಶ್ಫಕ್​ಗೆ ಇದು ಎರಡನೇ ಮದುವೆಯಾಗಿದೆ.

ಕ್ಷಮೆ ಕೇಳಿದ ಶರಣ್ ಪಂಪವೆಲ್

‘ಕ್ಷಮಿಸಿ ವಿನೋದ್ ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’. ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಳನ್ನು ನಟೋರಿಯಸ್ ಕ್ರಿಮಿನಲ್ ಮೊಹಮ್ಮದ್ ಆಶ್ಫಕ್​​ ಮದುವೆಯಾಗಿದ್ದಾನೆ ಎಂದು ಫೇಸ್​ಬುಕ್​ನಲ್ಲಿ ಫೋಸ್ಟ್​ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:52 pm, Sat, 10 August 24

ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?