Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೋಟಕ್ಕೆ ಬಂದಿದ್ದ ಬಾಲಕಿಯನ್ನ ಗುಡ್ಡಕ್ಕೆ ಕರೆದ ಮಾಲೀಕ: ಪೋಕ್ಸೋ ಕೇಸ್ ದಾಖಲು

ಕರ್ನಾಟಕದಲ್ಲಿ ಮಕ್ಕಳ ಮೇಲಿನ ಅಪರಾಧ ಕೃತ್ಯಗಳು ಗಣನೀಯವಾಗಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿದೆ. 2025 ರ ಮೊದಲ ಎರಡು ತಿಂಗಳಲ್ಲಿ ಪ್ರತಿದಿನ ಸರಾಸರಿ 10 ಪೋಕ್ಸೊ (POSCO) ಪ್ರಕರಣಗಳು (ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಒದಗಿಸುವ ಕಾಯ್ದೆ) ದಾಖಲಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆಯಲ್ಲಿ ಶೇ 38.89 ರಷ್ಟು ಏರಿಕೆಯಾಗಿದೆ. ಇದರ ಮಧ್ಯ ಮಂಗಳೂರಿನಲ್ಲಿ ತೋಟದ ಮಾಲೀಕನೋರ್ವ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ತೋಟಕ್ಕೆ ಬಂದಿದ್ದ ಬಾಲಕಿಯನ್ನ ಗುಡ್ಡಕ್ಕೆ ಕರೆದ ಮಾಲೀಕ: ಪೋಕ್ಸೋ ಕೇಸ್ ದಾಖಲು
ಕ್ರೈಂ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on: Mar 26, 2025 | 10:30 PM

ಮಂಗಳೂರು, (ಮಾರ್ಚ್​​ 26): ‘ನೀನು ಚನ್ನಾಗಿದ್ದೀಯಾ. ಗುಡ್ಡೆಗೆ (ಗುಡ್ಡ-ಬೆಟ್ಟ) ಬರುತ್ತೀಯ’ ಎಂದು ಅಪ್ರಾಪ್ತೆ ವಯಸ್ಸಿನ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದವನ ವಿರುದ್ಧ ಪೋಕ್ಸೋ ಪ್ರಕರಣ(Posco Act) ದಾಖಲಾಗಿದೆ. 15 ವರ್ಷದ ಬಾಲಕಿ ಜೊತೆ ಅನುಚಿತ ವರ್ತಿಸಿದ ಮಹೇಶ್ ಭಟ್ ಎನ್ನುವಾತನ ವಿರುದ್ಧ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ದೂರು ದಾಖಲಾಗಿದೆ. ಜನವರಿ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ.

ಜನವರಿ 12ರಂದು ತಂದೆ ಕೆಲಸ ಮಾಡುವ ತೋಟಕ್ಕೆ ಹೋಗಿದ್ದ ಬಾಲಕಿ ಸಹ ಹೋಗಿದ್ದಳು. ಆ ವೇಳೆ ತೋಟದ ಮಾಲೀಕ ಮಹೇಶ್ ಭಟ್ ‘ನೀನು ಚನ್ನಾಗಿದ್ದಿಯಾ. ನಾನು ಇಷ್ಟ ಇದ್ದೀನಾ. ಗುಡ್ಡೆಗೆ ಬರ್ತೀಯಾ’ ಎಂದು ಬಾಲಕಿಗೆ ಕೇಳಿದ್ದಾನೆ. ಆದ್ರೆ, ಬಾಲಕಿ ಇದಕ್ಕೆ ನಿರಾಕರಿಸಿ ಮನೆಗೆ ಹೋಗಿದ್ದಾಳೆ. ಬಳಿಕ ತೋಟದ ಮಾಲೀಕ ಮಹೇಶ್ ಭಟ್​​ನ ಅನುಚಿತ ವರ್ತನೆ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಪೋಷಕರು ಪೊಲೀಸ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ದಿನಕ್ಕೆ 10 ಪೋಕ್ಸೋ ಕೇಸ್ ದಾಖಲು: ಮಕ್ಕಳ ಮೇಲಿನ ಅಪರಾಧ ಕೃತ್ಯಗಳಲ್ಲಿ ಭಾರಿ ಹೆಚ್ಚಳ

ಇದೀಗ ಈ ಸಂಬಂಧ ತೋಟದ ಮಾಲೀಕ ಮಹೇಶ್ ಭಟ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದಲ್ಲಿ ಮಕ್ಕಳ ಮೇಲಿನ ಅಪರಾಧ ಕೃತ್ಯಗಳು (Crime Against Children) ಗಣನೀಯವಾಗಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿದೆ. 2025 ರ ಮೊದಲ ಎರಡು ತಿಂಗಳಲ್ಲಿ ಪ್ರತಿದಿನ ಸರಾಸರಿ 10 ಪೋಕ್ಸೊ (POSCO) ಪ್ರಕರಣಗಳು (ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಒದಗಿಸುವ ಕಾಯ್ದೆ) ದಾಖಲಾಗಿವೆ. 2024 ರಲ್ಲಿ, ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು 8,233 ದಾಖಲಾಗಿದ್ದವು ಎಂದು ಪೊಲೀಸ್ ಇಲಾಖೆ (Karnataka Police) ಅಂಕಿಅಂಶಗಳಿಂದ ತಿಳಿದುಬಂದಿದೆ. ಇದು 2023ರಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. 2023 ರಲ್ಲಿ 7,854 ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆಯಲ್ಲಿ ಶೇ 38.89 ರಷ್ಟು ಏರಿಕೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ