AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಗಿಲೆತ್ತರದ ಅಡಿಕೆ ಮರ ಹತ್ತಲು ಅರೇಕಾ ಬೈಕ್​ ಕಂಡುಹಿಡಿದ ಮಂಗಳೂರಿನ ರೈತ

ಅಡಿಕೆ ಮರವನ್ನು ಹತ್ತಲು ಭಂಟ್ವಾಳದ ರೈತ ಕೋಮಲೆ ಗಣಪತಿ ಭಟ್ (51)​ ಅಡಿಕೆ ಬೈಕ್​​ನ್ನು ತಯಾರಿಸಿದ್ದಾರೆ. ಈ ಮೂಲಕ ಅಡಿಕೆ ಮರ ಹತ್ತಲು ಸುಲಭ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಮುಗಿಲೆತ್ತರದ ಅಡಿಕೆ ಮರ ಹತ್ತಲು ಅರೇಕಾ ಬೈಕ್​ ಕಂಡುಹಿಡಿದ ಮಂಗಳೂರಿನ ರೈತ
ಅರೇಕಾ ಬೈಕ್​ ಕಂಡುಹಿಡಿದ ರೈತImage Credit source: Times of India
Follow us
ವಿವೇಕ ಬಿರಾದಾರ
|

Updated on:Feb 27, 2023 | 12:25 PM

ಮಂಗಳೂರು: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಅಡಿಕೆ ಬೆಳೆಗಾರೊಬ್ಬರ (Areca Farmer) ಹೊಸ ಸಂಶೋಧನೆ ಸಾಕಷ್ಟು ವೈರಲ್​ ಆಗುತ್ತಿದೆ. ಅಡಿಕೆ ಮರವನ್ನು (Areca Tree) ಹತ್ತಲು ಬಂಟ್ವಾಳದ (Bantwal) ರೈತ ಕೋಮಲೆ ಗಣಪತಿ ಭಟ್ (51)​ ಅಡಿಕೆ ಬೈಕ್​​ನ್ನು (Areca bike) ತಯಾರಿಸಿದ್ದಾರೆ. ಈ ಮೂಲಕ ಅಡಿಕೆ ಮರ ಹತ್ತಲು ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ಇವರ ಹೊಸ ಅವಿಷ್ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಹಾಗೇ ಮಹಿಂದ್ರಾ ಕಂಪನಿಯ ಮಾಲಿಕ ಆನಂದ್ ಮಹೀಂದ್ರಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಅಡಿಕೆ ಬೈಕ್​ ಮೂಲಕ ರೈತರು ಸುರಕ್ಷಿತವಾಗಿ ಮರ ಹತ್ತಬಹುದಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಈ ಕುರಿತು ಗಣಪತಿ ಭಟ್​ ಮಾತನಾಡಿ “ನಾನು ಇದನ್ನು ಅರೆಕಾ ಟ್ರೀ ಕ್ಲೈಂಬರ್ ಅನ್ನು 2019 ರಲ್ಲಿ ತಯಾರಿಸಿದೆ. ಆಗ ಇದನ್ನು ಕಂಡ ಜನರು ಈ ಯಂತ್ರದ ಮೂಲಕ ಬೇರೆ ಮರಗಳನ್ನು ಕೂಡ ಹತ್ತಬಹುದೇ ಎಂದು ಕೇಳುತ್ತಿದ್ದರು. ಅದಕ್ಕೆ ನಾನು ಶಿವಮೊಗ್ಗದ ಮಾಬೆನ್ಸ್ ಎಂಜಿನಿಯರಿಂಗ್ ಸೊಲ್ಯೂಷನ್ಸ್‌ನ ಶೆರ್ವಿನ್ ಮಾಬೆನ್ ಅವರ ಬೆಂಬಲದೊಂದಿಗೆ ನವೀಕರಿಸಿದ್ದೇನೆ. ಈಗ ಈ ಯಂತ್ರದ ಮೂಲಕ ತೆಂಗು, ಮಾವು ಮತ್ತು ಹಲಸಿನ ಮರಗಳನ್ನು ಹತ್ತಲು ಮತ್ತು ಇಳಿಯಲು ಬಳಸಬಹುದು” ಎಂದು ಹೇಳಿದ್ದಾರೆ.

ರೈತರು ಸುರಕ್ಷಿತವಾಗಿ ಮರ ಹತ್ತಲು ಈ ಯಂತ್ರವು ಉಪಯೋಗಕಾರಿಯಾಗಿದೆ. ಇದು 360 ಡಿಗ್ರಿಯಲ್ಲಿ ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ. ಕೂಡಲು ಉತ್ತಮವಾಗಿದ್ದು, 1 ಲೀಟರ್​​ ಪೆಟ್ರೋಲ್​ನಲ್ಲಿ 70-80 ತೆಂಗಿನ ಮರಗಳನ್ನು ಹತ್ತಬಹುದು. ಇದರ ಭಾರ 45 ಕೇಜಿ ಇದ್ದು, ಟ್ರಾಲಿ ಇದೆ, ಸುಲಭವಾಗಿ ಸಾಗಿಸಬಹುದಾಗಿದೆ. ಇದನ್ನು ಒಂದೇ ಕೈಯಲ್ಲಿ ಮರಕ್ಕೆ ಜೋಡಿಸಬಹುದು. ಈ ಯಂತ್ರವನ್ನು ಮಹಿಳೆಯರು ಮತ್ತು ಮಕ್ಕಳು ಕೂಡ ನಿಯಂತ್ರಣ ಮಾಡಬಹುದಾಗಿದೆ ಎಂದು ಹೇಳಿದರು.

ಯಂತ್ರವನ್ನು ಮರಕ್ಕೆ ಅಳವಡಿಸಲು 1 ನಿಮೀಷ ಬೇಕು, ಮತ್ತೊಂದು ನಿಮೀಷ ಮರ ಹತ್ತಲು ಬೇಕಾಗುತ್ತದೆ. ಇದರ ಬೆಲೆ 1.55 ಲಕ್ಷ ರೂ. ಇದೆ. ಆದರೆ 40,000 ಸಬ್ಸಿಡಿ ನೀಡಿ 1.12 ಲಕ್ಷ ರೂ.ಗೆ ಮಾರಲಾಗುತ್ತದೆ. “ನಾನು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯನ್ನು ಮಾತ್ರ ಮಾಡುತ್ತೇನೆ ಮಾತ್ರ ಮಾರ್ಕೆಟಿಂಗ್ ಅನ್ನು ಮಾಬೆನ್ ಮಾಡುತ್ತಿದೆ” ಎಂದು ತಿಳಿಸಿದರು.

ಅರೇಕಾ ಬೈಕ್​ ಎರಡು ಸ್ಟ್ರೋಕ್​ ಇಂಜೀನ್​ ಹೊಂದಿದೆ. ಆದ್ದರಿಂದ ಪ್ರತಿ ಲೀಟರ್ ಪೆಟ್ರೋಲ್‌ಗೆ 40 ಮಿಲಿ 2ಟಿ ಆಯಿಲ್​ ಅನ್ನು ಸೇರಿಸಬೇಕು. ಈ ಯಂತ್ರವನ್ನು ಬಹಳ ಸರಳವಾಗಿದ್ದು, ಇಲ್ಲಿಯವರೆಗು ಯಂತ್ರದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ರಾಜ್ಯ ಮತ್ತು ಅಂತರಾಜ್ಯದ 1000 ರೈತರು ಈ ಅರೇಕಾ ಮರ ಬೈಕ್​​ನ್ನು ಖರೀದಿಸಿದ್ದು, ಜೊತೆ ನಾನು ಕೂಡ ಉಪಯೋಗಿಸುತ್ತಿದ್ದೇನೆ ಎಂದರು.

ಯಂತ್ರ ತಯಾರಿಕೆಯಲ್ಲಿ ಬಳಸಲಾಗುವ ಎಲ್ಲ ಉತ್ಪನ್ನಗಳು ಸ್ಥಳೀಯವಾಗಿ ಲಭ್ಯವಿವೆ. ಕೀಟನಾಶಕಗಳನ್ನು ಸಿಂಪಡಿಸಲು ಮತ್ತು ಎತ್ತರದ ಮರಗಳಿಂದ ಹಣ್ಣುಗಳನ್ನು ಕೀಳಲು ಈಗ ಡ್ರೋನ್‌ಗಳನ್ನು ಬಳಸಲಾಗುತ್ತಿದ್ದರೂ, ಕೃಷಿಯಲ್ಲಿ ಮಾನವ ಸ್ಪರ್ಶ ಮತ್ತು ತಂತ್ರಜ್ಞಾನದ ಮಿಶ್ರಣವು ನಿರ್ಣಾಯಕವಾಗಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ತೆಂಗು ಬೆಳೆಯುವ ರೈತರಿಂದ ಮರದ ಬೈಕ್‌ಗೆ ಭಾರಿ ಬೇಡಿಕೆಯಿದೆ. ಕಾರ್ಮಿಕರ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಸಾಧನವು ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ,’’ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:22 pm, Mon, 27 February 23

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ