ಮಂಗಳೂರು MRPLನಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರ ಸಾವು
ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿರುವ MRPL ಘಟಕದಲ್ಲಿ ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಒಎಂಎಸ್ ವಿಭಾಗದಲ್ಲಿನ ದೋಷದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತ ಕಾರ್ಮಿಕರನ್ನು ರಕ್ಷಿಸಲು ಯತ್ನಿಸಿದ ಇನ್ನೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಎಂಆರ್‌ಪಿಎಲ್ ಈ ಘಟನೆಗೆ ಸಂಬಂಧಿಸಿದಂತೆ ತನಿಖಾ ಸಮಿತಿ ರಚಿಸಿದೆ.

ಮಂಗಳೂರು, ಜುಲೈ 12: ಮಂಗಳೂರು (Mangaluru) ಹೊರವಲಯದ ಸುರತ್ಕಲ್‌ನಲ್ಲಿರುವ ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ (MRPL) ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಪ್ರಯಾಗ್ರಾಜ್ ಮೂಲದ ದೀಪ ಚಂದ್ರ ಭಾರ್ತಿಯಾ (33), ಕೇರಳದ ಬಿಜಿಲ್ ಪ್ರಸಾದ್ (33) ಮೃತಪಟ್ಟ ಕಾರ್ಮಿಕರು. ಇವರನ್ನು ರಕ್ಷಿಸಲು ಯತ್ನಿಸಿದ ಗದಗ ಮೂಲದ ವಿನಾಯಕ ಅಸ್ವಸ್ಥಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. MRPLನ ಒಎಂಎಸ್(ಆಯಿಲ್ ಮೂವ್ಮೆಂಟ್ ಸರ್ವಿಸ್)ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಮಿಕರು ಪರಿಶೀಲನೆಗೆ ತೆರಳಿದ್ದರು. ಎಂಎಂಎಸ್ ವಿಭಾಗದ ಟ್ಯಾಂಕ್ ಮೇಲ್ಚಾವಣಿಗೆ ತೆರಳಿದಾಗ ವಿಷಾನಿಲ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥಗೊಂಡ ದೀಪಚಂದ್ರ ಮತ್ತು ಬಿಜಿಲ್ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗದಗ ಮೂಲದ ವಿನಾಯಕ ಮಯಗೇರಿಗೆ ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಎಂಆರ್‌ಪಿಎಲ್ ಆಡಳಿತ ಮಂಡಳಿ ಗ್ರೂಪ್ ಜನರಲ್ ಮ್ಯಾನೇಜರ್ ಒಳಗೊಂಡ ಉನ್ನತಮಟ್ಟದ ತನಿಖೆಗೆ ಸಮಿತಿ ರಚಿಸಿದೆ.
ಇದನ್ನೂ ಓದಿ: ಪುತ್ತೂರು: ಬಿಜೆಪಿ ಮುಖಂಡನ ಪುತ್ರ ಯುವತಿಯ ಗರ್ಭಿಣಿ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಭೂಗತ ಪಾತಕಿ ಎಂಟ್ರಿ!
ವಿಷಾನಿಲ ಸೇವಿಸಿ ಒಟ್ಟು ಐವರು ಬೆಳಗ್ಗೆ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಇಬ್ಬರು ಮೃತಪಟ್ಟರು. ಓರ್ವನ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಚೇತರಿಸಿಕೊಂಡಿದ್ದಾರೆ.
ಹೃದಯಾಘಾತದಿಂದ ವೈದ್ಯ ಸಾವು
ಬೆಂಗಳೂರು ದಕ್ಷಿಣ: ಕನಕಪುರ ನಗರದಲ್ಲಿ ಹೃದಯಾಘಾತದಿಂದ ವೈದ್ಯ ಮಂಜುನಾಥ್ (64) ಮೃತಪಟ್ಟಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಮಂಜುನಾಥ್ಗೆ ಎದೆನೋವು ಕಾಣಿಸಿಕೊಂಡಿತ್ತು. ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಡಾ.ಮಂಜುನಾಥ್ ಮೃತಪಟ್ಟಿದ್ದಾರೆ. ಮೃತ ಮಂಜುನಾಥ್ ಕನಕಪುರದಲ್ಲಿ ಖಾಸಗಿ ನರ್ಸಿಂಗ್ ಹೋಮ್ ನಡೆಸುತ್ತಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Sat, 12 July 25







