ಮಂಗಳೂರು ಮೂಲದ PFI ನಾಯಕ ಮಹಮದ್ ಅಶ್ರಫ್​​ ದೆಹಲಿಯಲ್ಲಿ ಬಂಧನ‌‌

ಅಶ್ರಫ್​ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಂಧಿತ ನಾಯಕ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಜೆಕಾರು ನಿವಾಸಿಯಾಗಿದ್ದು, ಮಂಗಳೂರುನಗರದ ಕಂಕಣವಾಗಿಯಲ್ಲಿ ಆಶ್ರಫ್ ವಾಸವಿದ್ದ.

ಮಂಗಳೂರು ಮೂಲದ PFI ನಾಯಕ ಮಹಮದ್ ಅಶ್ರಫ್​​ ದೆಹಲಿಯಲ್ಲಿ ಬಂಧನ‌‌
PFI (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Sep 26, 2022 | 4:40 PM

ಮಂಗಳೂರು: ಮಂಗಳೂರು ಮೂಲದ PFI ನಾಯಕನನ್ನು ದೆಹಲಿಯಲ್ಲಿ ಬಂಧನ ಮಾಡಲಾಗಿದೆ. ಅಶ್ರಫ್​ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಂಧಿತ ನಾಯಕ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಜೆಕಾರು ನಿವಾಸಿಯಾಗಿದ್ದು, ಮಂಗಳೂರುನಗರದ ಕಂಕಣವಾಗಿಯಲ್ಲಿ ಅಶ್ರಫ್ ವಾಸವಿದ್ದ. ಸ್ಥಳೀಯ ಮಟ್ಟದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ. ಆದರೆ ದೆಹಲಿ ಮಟ್ಟದಲ್ಲಿ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿದ್ದ. ಜಾರ್ಖಂಡ್, ಒರಿಸ್ಸಾ ಸೇರಿ ಮೂರು ರಾಜ್ಯಗಳಿಗೆ  ಮಹಮ್ಮದ್ ಅಶ್ರಫ್ ಸಂಚಾಲಕನಾಗಿದ್ದ. ಮೂರು ರಾಜ್ಯಗಳಲ್ಲಿ ಪ್ರತಿಯೊಂದು ಚಟುವಟಿಕೆಯು ಅಶ್ರಫ್ ನಿರ್ದೇಶನದಂತೆ ನಡೆಯುತ್ತಿರೋದು ಪತ್ತೆಯಾಗಿದೆ. ಇಂಟರ್ ಸ್ಟೇಟ್ ಕೋಆರ್ಡಿನೇಟ್ಸ್ ಬಗ್ಗೆ ಅಶ್ರಫ್​ಗೆ ಸಾಕಷ್ಟು ಮಾಹಿತಿ ಇರುವ ಸಾಧ್ಯತೆಯಿದೆ. ಹೀಗಾಗಿಯೇ ಅಶ್ರಫ್ ವಿಚಾರಣೆಗೆ ಸಿಸಿಬಿ ಹಾಗೂ ಕೆಜಿ ಹಳ್ಳಿ ಪೊಲೀಸರು ಕಾಯುತ್ತಿದ್ದಾರೆ. ಅಶ್ರಪ್ ವಿಚಾರಣೆ ಬಳಿಕ ಸಾಕಷ್ಟು ಮಹತ್ತ್ವದ ವಿಚಾರಗಳು ಹೊರಬೀಳೋ‌ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೀಗಾಗಿ ಬಂಧಿತರು‌ ಕೊಟ್ಟ ಮಾಹಿತಿ ಮೇರೆ ಇಂದು ಕಸ್ಟಡಿಗೆ ಪಡೆಯಲು ಸಿದ್ದತೆ ನಡೆಸಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ಪೊಲೀಸರು ಕಸ್ಟಡಿಗೆ ಪಡೆದರು. ಅದೇ ರೀತಿಯಾಗಿ ತಮಿಳುನಾಡಿನಲ್ಲಿ 14 ಪಿಎಫ್​ಐ ಕಾರ್ಯಕರ್ತರ ಬಂಧನ ಮಾಡಿದ್ದು, ಪೆಟ್ರೋಲ್​ ಬಾಂಬ್​ ದಾಳಿ ನಡೆಸಿದ್ದ ಕೇಸ್​ನಲ್ಲಿ ಅರೆಸ್ಟ್ ಮಾಡಲಾಗಿದೆ. ಇತ್ತೀಚೆಗೆ PFI ಕಾರ್ಯಕರ್ತರು ಪೆಟ್ರೋಲ್ ಬಾಂಬ್​ ನಡೆಸಿದ್ದರು.

PFI, SDPI ಬ್ಯಾನ್ ಮಾಡುವ ಶಕ್ತಿ ಇದೆ: ನಳಿನ್ ಕುಮಾರ್ ಕಟೀಲು

ರಾಜ್ಯದಲ್ಲಿ PFI, SDPI ನಿಷೇಧಿಸಲು ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಬಾಗಲಕೋಟೆ ಜಿಲ್ಲೆ ಇಳಕಲ್​​ನಲ್ಲಿ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದರು. ಒಂದು ರಾಜ್ಯದಲ್ಲಿ ನಿಷೇಧಿಸಿದರೆ ತಕ್ಷಣ ಕೋರ್ಟ್​ಗೆ ಹೋಗುತ್ತಾರೆ. ಹಾಗಾಗಿ PFI, SDPI ನಿಷೇಧಿಸಲು ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಭಯೋತ್ಪಾದನಾ ಚಟುವಟಿಕೆ ವಿಚಾರ ಇಟ್ಟುಕೊಂಡು ನಿಷೇಧಿಸಬೇಕಿದೆ ಎಂದು ಹೇಳಿದರು.

ಪಿಎಫ್ಐ ಸಂಘಟನೆ ಹುಟ್ಟಿದ್ದೇ ದೇಶದ್ರೋಹ ಕೆಲಸ ಮಾಡಲು: ಸಿ.ಟಿ.ರವಿ

ಪಿಎಫ್​ಐ ಮುಖಂಡರ ಮನೆ ಮೇಲೆ ಎನ್​ಐಎ ದಾಳಿ ಪ್ರಕರಣ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕ್ರಮ ಕೈಗೊಂಡಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದರು. ಆಗಲೂ ಪಿಎಫ್​ಐ ಕಾರ್ಯಕರ್ತರ ಹೆಸರು ಕೇಳಿಬಂದಿತ್ತು. ಕೆಲವು ಹಿಂದೂ ಕಾರ್ಯಕರ್ತರ ಹತ್ಯೆ ಹಿಂದೆ ಇದ್ದಿದ್ದು PFI. ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಹಿಂದೆಯೂ PFI ಇದೆ. ಭಾರತವನ್ನು‌ ಮೊಘಲಸ್ಥಾನ ಮಾಡುವ ಪಿತೂರಿ‌ ಮಾಡುತ್ತಿದ್ದಾರೆ. ಕಠಿಣ ಕ್ರಮ ತೆಗೆದುಕೊಂಡು ಬೇರುಸಮೇತ ಕಿತ್ತೊಗೆಯಬೇಕು. ಪಿಎಫ್ಐ ಸಂಘಟನೆ ಹುಟ್ಟಿದ್ದೇ ದೇಶದ್ರೋಹ ಕೆಲಸ ಮಾಡಲು. ಭಯೋತ್ಪಾದನೆ ಮಾಡುವವರಿಗೆ ಈ ನೆಲದಲ್ಲಿ ಜಾಗ ಇಲ್ಲ. ಅಂಥವರನ್ನು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನಕ್ಕೆ ಕಳಿಸೋಣ. ಅಲ್ಲೇ ಅವರಿಗೆ ಜನ್ನತ್ ಸಿಗಲಿ ಎಂದು ಸಿ.ಟಿ.ರವಿ ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:24 pm, Mon, 26 September 22

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ