ವಿಷಾನಿಲ ಸೋರಿಕೆ ಕೇಸ್​: ದಿಗ್ಬಂಧನದಲ್ಲಿದ್ದ ಐವರು ಸಿಬ್ಬಂದಿ ರಕ್ಷಣೆ, ಮಂಗಳೂರಿನತ್ತ ಪಯಣ

ಮಂಗಳೂರಿನ ಹೊರವಲಯದ ಸುರತ್ಕಲ್​ನಲ್ಲಿರುವ MRPL ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪ್ರಯಾಗ್ ರಾಜ್​ನಲ್ಲಿ ದಿಗ್ಬಂಧನದಲ್ಲಿದ್ದ ಐವರು ಸಿಬ್ಬಂದಿಯನ್ನು ಸ್ಥಳೀಯ ಪೊಲೀಸರು ಇದೀಗ ರಕ್ಷಿಸಿದ್ದಾರೆ. ಸದ್ಯ ವಿಮಾನದಲ್ಲಿ ಮಂಗಳೂರಿನ ಕಡೆಗೆ ಐವರು ಸಿಬ್ಬಂದಿ ಹೊರಟ್ಟಿದ್ದಾರೆ.

ವಿಷಾನಿಲ ಸೋರಿಕೆ ಕೇಸ್​: ದಿಗ್ಬಂಧನದಲ್ಲಿದ್ದ ಐವರು ಸಿಬ್ಬಂದಿ ರಕ್ಷಣೆ, ಮಂಗಳೂರಿನತ್ತ ಪಯಣ
ದಿಗ್ಬಂಧನದಲ್ಲಿದ್ದ ಸಿಬ್ಬಂದಿ
Edited By:

Updated on: Jul 14, 2025 | 1:02 PM

ಮಂಗಳೂರು, ಜುಲೈ 14: ಮಂಗಳೂರಿನ (Mangaluru) ಹೊರವಲಯದ ಎಂಆರ್​ಪಿಎಲ್​​ನಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಇಬ್ಬರು ಸಿಬ್ಬಂದಿ ದುರ್ಮರಣ (death) ಹೊಂದಿದ್ದರು. ಮೃತಪಟ್ಟ ಸಿಬ್ಬಂದಿಗಳ ವಿಚಾರವಾಗಿ ಸ್ಪಂದನೆ ನೀಡದ ಆರೋಪ ಹಿನ್ನಲೆ ಎಂಆರ್​​ಪಿಎಲ್​ ಗೇಟ್ ಬಳಿ ಕಾರ್ಮಿಕರಿಂದ ಪ್ರತಿಭಟನೆ ಮಾಡಲಾಗಿದೆ. ಈ ಮಧ್ಯೆ ಉತ್ತರ ಪ್ರದೇಶದ ಪ್ರಯಾಗ್ ರಾಜ್​ನಲ್ಲಿ ದಿಗ್ಬಂಧನದಲ್ಲಿದ್ದ ಐವರನ್ನು ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದು, ವಿಮಾನದ ಮೂಲಕ ಮಂಗಳೂರಿನ ಕಡೆ ಹೊರಟಿದ್ದಾರೆ.

ಪ್ರಕರಣದಲ್ಲಿ ಮೃತಪಟ್ಟಿದ್ದ ದೀಪ್ ಚಂದ್ರ ಭಾರ್ತಿಯಾ ಅವರ ಮೃತದೇಹವನ್ನು ವಿಮಾನದಲ್ಲಿ ಅವರ ಕುಟುಂಬದ ಜೊತೆ ಎಂಆರ್​ಪಿಎಲ್​​ನ ಐವರು ಸಿಬ್ಬಂದಿಗಳಾ ಪ್ರಸಾದ್, ಬಲ್ಬೀರ್, ಸುರೇಂದ್, ಬಾಲನಾರಾಯಣ್ ಮತ್ತು ಪಂಕಜ್​ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಅವರನ್ನು ದಿಗ್ಬಂಧಿಸಿದ್ದರು.

ಇದನ್ನೂ ಓದಿ: ವಿಷಾನಿಲ ಸೋರಿಕೆಯಿಂದ ಸಾವು ಪ್ರಕರಣ: ಪ್ರಯಾಗ್​ರಾಜ್​ನಲ್ಲಿ ಎಂಆರ್​ಪಿಎಲ್ ಸಿಬ್ಬಂದಿಗೆ ದಿಗ್ಭಂಧನ

ಇದನ್ನೂ ಓದಿ
ಪ್ರಯಾಗ್​ರಾಜ್​ನಲ್ಲಿ ಸಿಕ್ಕಿಹಾಕಿಕೊಂಡ ಎಂಆರ್​ಪಿಎಲ್ ಸಿಬ್ಬಂದಿ!
ಗಾಳಿ ಆಂಜನೇಯಸ್ವಾಮಿ ದೇಗುಲ ವಾಪಸ್: ಕಂಡಿಷನ್ಸ್ ಅಪ್ಲೈ ಎಂದ ಸಚಿವ
ಪ್ರತ್ಯೇಕ ಘಟನೆ: ಮಂಡ್ಯ, ಮಂಗಳೂರಿನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ
ಮಂಗಳೂರು MRPLನಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರ ಸಾವು

ಎಂಆರ್​ಪಿಎಲ್​​ನ ಮ್ಯಾನೇಜ್ಮೆಂಟ್ ಬರುವವರೆಗೂ ಮಂಗಳೂರಿಗೆ ಕಳಿಸಲ್ಲ ಅಂತಾ ದೀಪ್ ಚಂದ್ರ ಭಾರ್ತಿಯಾ ಕುಟುಂಬ ಪಟ್ಟು ಹಿಡಿದಿದ್ದರು. ಎಂಆರ್​ಪಿಎಲ್​​ನ ಫ್ಯಾಕ್ಟರಿ ಮ್ಯಾನೇಜರ್ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆದರೂ ಕ್ರಮ ಆಗಿಲ್ಲ, ಎಂಆರ್​ಪಿಎಲ್​​ ತಮ್ಮ ನಿಲುವು ತಾಳಿಲ್ಲ ಅಂತಾ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ಮಂಗಳೂರಿನ ಕಡೆಗೆ ಪ್ರಯಾಣ

ಇತ್ತ ಎಂಆರ್​ಪಿಎಲ್​​ನ ಸಿಬ್ಬಂದಿ ನಮ್ಮನ್ನು ದಿಗ್ಬಂಧನ ಮಾಡಿದ್ದಾರೆ. ತಮ್ಮನ್ನು ಕಾಪಾಡುವಂತೆ ಐವರು ಸಿಬ್ಬಂದಿ ವಿಡಿಯೋ ಮೂಲಕ ಎಂಆರ್​ಪಿಎಲ್​ಗೆ ಮನವಿ ಮಾಡಿದ್ದರು. ಇದೀಗ ಸ್ಥಳೀಯ ಪೊಲೀಸರು ಅರನ್ನು ರಕ್ಷಣೆ ಮಾಡಿದ್ದು, ಐವರು ಸಿಬ್ಬಂದಿ ಮಂಗಳೂರಿನ ಕಡೆಗೆ ಹೊರಟಿದ್ದಾರೆ.

ಕಾರ್ಮಿಕರ ಪ್ರತಿಭಟನೆ

ಇನ್ನು ಎಂಆರ್​ಪಿಎಲ್​ನಲ್ಲಿ ಮೃತಪಟ್ಟ ಸಿಬ್ಬಂದಿಗೆ ಸ್ಪಂದನೆ ನೀಡದ ಆರೋಪ ಹಿನ್ನಲೆ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಕೆಲ ಸಿಬ್ಬಂದಿ ಪ್ರತಿಭಟನೆ ಮಾಡಿದ್ದಾರೆ. ಘಟನೆ ಬಗ್ಗೆ ಸರಿಯಾದ ಕ್ರಮ ಆಗಿಲ್ಲ. ಮೃತಪಟ್ಟವರಿಗೆ ಪರಿಹಾರ ಮತ್ತು ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು MRPLನಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರ ಸಾವು

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದೆ. ಇಬ್ಬರ ಶವಗಳನ್ನು ಸಂಬಂಧಿಕರು ತಮ್ಮ ರಾಜ್ಯಗಳಿಗೆ ಕೊಂಡೊಯ್ದಿದ್ದಾರೆ. ದೂರದ ಊರಿಂದ ಬಂದು ಇಲ್ಲಿ ಬದುಕು ಕಟ್ಟುಕೊಳ್ಳುತ್ತಿದ್ದರು. ಅಷ್ಟರಲ್ಲಿ ವಿಷಾನಿಲ ದುರಂತ ಇಬ್ಬರ ಜೀವವನ್ನೇ ಕಸಿದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us