AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷಾನಿಲ ಸೋರಿಕೆಯಿಂದ ಸಾವು ಪ್ರಕರಣ: ಪ್ರಯಾಗ್​ರಾಜ್​ನಲ್ಲಿ ಎಂಆರ್​ಪಿಎಲ್ ಸಿಬ್ಬಂದಿಗೆ ದಿಗ್ಭಂಧನ

ಮಂಗಳೂರಿನ ಎಂಆರ್​ಪಿಎಲ್​​ನಲ್ಲಿ ಶನಿವಾರ ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು. ಮತ್ತೊಬ್ಬರ ಸ್ಥಿತಿ ಗಂಭೀರವಾಗಿತ್ತು. ಮೃತರಿಬ್ಬರ ಮೃತದೇಹಗಳನ್ನು ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ಗೆ ಮೃತದೇಹದ ಜೊತೆ ಹೋದ ಎಂಆರ್​ಪಿಎಲ್ ಸಿಬ್ಬಂದಿಗೆ ದಿಗ್ಭಂಧನ ಹಾಕಲಾಗಿದೆ. ಮತ್ತೊಂದೆಡೆ, ವಿಷಾನಿಲ ಸೋರಿಕೆ ಸಂಬಂಧ 6 ಜನರ ಮೇಲೆ ಎಫ್ಐಆರ್ ಮಾಡಲಾಗಿದೆ.

ವಿಷಾನಿಲ ಸೋರಿಕೆಯಿಂದ ಸಾವು ಪ್ರಕರಣ: ಪ್ರಯಾಗ್​ರಾಜ್​ನಲ್ಲಿ ಎಂಆರ್​ಪಿಎಲ್ ಸಿಬ್ಬಂದಿಗೆ ದಿಗ್ಭಂಧನ
ಎಂಆರ್​ಪಿಎಲ್ ಸಿಬ್ಬಂದಿಗೆ ದಿಗ್ಬಂಧನ ಹಾಕಿದ ಪ್ರಯಾಗ್​ರಾಜ್​ ಜನ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Jul 14, 2025 | 8:05 AM

Share

ಮಂಗಳೂರು, ಜುಲೈ 14: ಮಂಗಳೂರಿನ (Mangaluru) ಹೊರವಲಯ ಸುರತ್ಕಲ್​ನಲ್ಲಿರುವ ಎಂಆರ್​ಪಿಎಲ್​​ನಲ್ಲಿ ಶನಿವಾರ ದುರ್ಘಟನೆ ನಡೆದು ಹೋಗಿತ್ತು. ಎಂಆರ್​ಪಿಎಲ್​​ನ ಒಎಂಎಸ್ ವಿಭಾಗದ ಟ್ಯಾಂಕ್ ಎಫ್.ಬಿ.7029 ನಲ್ಲಿ ದುರಂತ ಸಂಭವಿಸಿತ್ತು. ಆಯಿಲ್ ಮೂವ್ಮೆಂಟ್ ವಿಭಾಗದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಸಿಬ್ಬಂದಿ ಪ್ರಯಾಗ್ ರಾಜ್ ಮೂಲದ 33 ವರ್ಷದ ದೀಪ್ ಚಂದ್ರ ಭಾರ್ತಿಯಾ, ಕೇರಳ ಮೂಲದ 33 ವರ್ಷದ ಬಿಜಿಲ್ ಪ್ರಸಾದ್, ಗದಗ ಮೂಲದ ವಿನಾಯಕ ಮಯಗೇರಿ ಸೇರಿದಂತೆ ಐವರು ಪರಿಶೀಲಿಸಲು ಹೋಗಿದ್ದರು. ಈ ವೇಳೆ ಹೆಚ್2ಎಸ್ ವಿಷಾನಿಲ ಸೋರಿಯಾಗಿ (MRPL Gas leak) ದೀಪ್ ಚಂದ್ರ ಮತ್ತು ಬಿಜಿಲ್ ಪ್ರಸಾದ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇವರ ರಕ್ಷಣೆಗೆ ಮುಂದಾದ ವಿನಾಯಕ್ ಸೇರಿದಂತೆ ಮೂವರ ಕೂಡ ಅಸ್ವಸ್ಥರಾಗಿದ್ದರು. ಮೃತರ ಮರಣೋತ್ತರ ಪರೀಕ್ಷೆ ಭಾನುವಾರ ನಡೆದಿತ್ತು. ನಂತರ ದೀಪ್ ಚಂದ್ರ ಭಾರ್ತಿಯಾ ಅವರ ಮೃತದೇಹವನ್ನು ವಿಮಾನದಲ್ಲಿ ಅವರ ಕುಟುಂಬದ ಜೊತೆ ಎಂಆರ್​ಪಿಎಲ್​​ನ ಐವರು ಸಿಬ್ಬಂದಿ ತೆಗೆದುಕೊಂಡು ಹೋಗಿದ್ದರು.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ತಲುಪಿದ ಐವರನ್ನು ದೀಪ್ ಚಂದ್ರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂಆರ್​ಪಿಎಲ್ ಮ್ಯಾನೇಜ್ಮೆಂಟ್ ಸರಿಯಾಗಿ ಸ್ಪಂದನೆ ಮಾಡಿಲ್ಲ. ಪರಿಹಾರದ ಬಗ್ಗೆ ಮಾತನಾಡಿಲ್ಲ. ಅವರು ತಕ್ಷಣ ಇಲ್ಲಿಗೆ ಬರಬೇಕು. ಅಲ್ಲವರೆಗೂ ನೀವು ಇಲ್ಲಿಂದ ಹೋಗುವಂತಿಲ್ಲ ಎಂದು ಹಾಕಿದ್ದಾರೆ. ಹೀಗಾಗಿ ಅಲ್ಲಿಂದ ಎಂಆರ್​ಪಿಎಲ್​ಗೆ ವಿಡಿಯೋ ಸಂದೇಶ ಕಳುಹಿಸಿರುವ ಐವರು, ಕೂಡಲೇ ಇಲ್ಲಿಗೆ ಬಂದು ನಮ್ಮ ರಕ್ಷಣೆ ಮಾಡಿ ಎಂದು ಮೊರೆ ಇಟ್ಟಿದ್ದಾರೆ.

ಎಂಆರ್​​ಪಿಎಲ್ ಸಿಬ್ಬಂದಿ ಪ್ರಸಾದ್, ಬಲ್ಬೀರ್, ಸುರೇಂದ್, ಬಾಲನಾರಾಯಣ್, ಪಂಕಜ್​ಗೆ ದಿಗ್ಭಂಧನ ಹಾಕಲಾಗಿದ್ದು, ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ. ಸುರತ್ಕತ್ ಪೊಲೀಸ್ ಠಾಣೆಯಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಸೇರಿದಂತೆ 6 ಜನರ ವಿರುದ್ಧ ಎಫ್ಐಆಪ್ ದಾಖಲಾಗಿದೆ. ಆದರೆ ಈವರೆಗೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ಮೃತರ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾನೂನು ಕ್ರಮ ಆಗಬೇಕು. ಅಲ್ಲದೆ ಎಂಆರ್​ಪಿಎಲ್ ಆಡಳಿತ ಮಂಡಳಿಯವರು ಬಂದು ಪರಿಹಾರ ನೀಡಿ ನಂತರ ಈ ಐವರನ್ನು ಬಿಡಿಸಿಕೊಂಡು ಹೋಗಬೇಕು ಎಂದು ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ
Image
ಡ್ರಗ್ಸ್ ಸಾಗಾಟ ಆರೋಪ: ಕಲಬುರಗಿ ಕಾಂಗ್ರೆಸ್ ಮುಖಂಡ ಮಹಾರಾಷ್ಟ್ರದಲ್ಲಿ ಬಂಧನ
Image
ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 1006 ಆಟೋಗಳ ವಿರುದ್ದ ಕೇಸ್, 233 ಸೀಜ್
Image
ಉಗ್ರ ನಾಸಿರ್​ನನ್ನು ಎಸ್ಕೆಫ್ ಮಾಡಿಸಲು ಫಾತಿಮಾ ತಡರಾತ್ರಿ ಪ್ಲಾನ್​
Image
ಮಂಗಳೂರು MRPLನಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರ ಸಾವು

ಇದನ್ನೂ ಓದಿ: ಮಂಗಳೂರು MRPLನಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರ ಸಾವು

ಈ ಬಗ್ಗೆ ಎಂಆರ್​ಪಿಎಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಐವರು ಸಿಬ್ಬಂದಿಯನ್ನು ಎಂಆರ್​ಪಿಎಲ್ ಅಧಿಕೃತವಾಗಿ ಕಳುಹಿಸಿಲ್ಲ ಎಂಬುದು ಆಡಳಿತ ಮಂಡಳಿಯ ವಾದ. ಸದ್ಯ ಮೃತದೇಹವಂತೂ ಅಲ್ಲಿಗೆ ತಲುಪಿಯಾಗಿದೆ ಎಂದು ಎಂಆರ್​ಪಿಎಲ್ ಕೈತೊಳೆದುಕೊಂಡು ಕುಳಿತಿದೆ. ಸಿಬ್ಬಂದಿ ಮನೆಯವರ ಜೊತೆಗೂ ಮಾತುಕತೆ ಕೂಡ ನಡೆಸಿಲ್ಲ. ಈ ಮದ್ಯೆ ಅಲ್ಲಿಗೆ ಹೋಗಿ ಸಿಕ್ಕಿಹಾಕಿಕೊಂಡವರ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ