ಮಂಗಳೂರು: ಇಬ್ಬರು ಮಕ್ಕಳನ್ನು ಮಹಿಳೆ ಬಾವಿಗೆ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಪೆರ್ನೆಯಲ್ಲಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಗೂ ಮುನ್ನ ಆರೋಪಿ ನೂರುನ್ನಿಸಾ ವಿಚಿತ್ರವಾಗಿ ವರ್ತಿಸುತ್ತಿದ್ದು, ಭಯ, ಆತಂಕ ಹಾಗೂ ಒಂಟಿತನದ ಬಗ್ಗೆ ಪತಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಆದಾಗ್ಯೂ, ಆಕೆ ಕುಟುಂಬದವರ ಜತೆ ಚೆನ್ನಾಗಿಯೇ ಇದ್ದುದು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪ್ರಕರಣದಲ್ಲಿ ಆಕೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಂಗಳೂರು: ಇಬ್ಬರು ಮಕ್ಕಳನ್ನು ಮಹಿಳೆ ಬಾವಿಗೆ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಉಪ್ಪಿನಂಗಡಿ ಪೊಲೀಸ್ ಠಾಣೆ (ಸಾಂದರ್ಭಿಕ ಚಿತ್ರ)
Image Credit source: tv9
Edited By:

Updated on: Sep 22, 2026 | 10:33 AM

ಮಂಗಳೂರು, ಸೆಪ್ಟೆಂಬರ್ 22: ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಮಹಿಳೆಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ತನ್ನ ಹಾಗೂ ನಾದಿನಿಯ ಮಗುವನ್ನು ಬಾವಿಗೆ ಎಸೆದಿದ್ದ ನೂರುನ್ನಿಸಾಳ ವರ್ತನೆ ಇಡೀ ಕುಟುಂಬ ಹಾಗೂ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ನೂರುನ್ನಿಸಾಗೆ ಮಾನಸಿಕ ಖಿನ್ನತೆ ಕಾಡಿತ್ತಾ ಎಂಬ ಅನುಮಾನವೂ ವ್ಯಕ್ತವಾಗಿದೆ. ನೂರುನ್ನಿಸಾ ತನ್ನ ಇಬ್ಬರು ಮಕ್ಕಳು ಹಾಗೂ ನಾದಿನಿಯ ಮೂವರು ಮಕ್ಕಳೊಂದಿಗೆ ಚೆನ್ನಾಗಿಯೇ ಇದ್ದರು. ಆದರೆ ಘಟನೆಗೂ ಒಂದು ವಾರದ ಹಿಂದೆ ಆಕೆ ಮನೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು.

ಹೆದರಿಕೆ, ಭಯ, ಆತಂಕ ಹಾಗೂ ಒಂಟಿತನದ ಬಗ್ಗೆ ಪತಿ ಸಿನಾನ್ ಬಳಿ ನೂರುನ್ನಿಸಾ ಹೇಳಿಕೊಂಡಿದ್ದರು. ಮನೆಯವರೊಂದಿಗೆ ಮಾತ್ರ ಎಂದಿನಂತೆ ಖುಷಿಯಾಗಿ ಹಾಗೂ ಆಪ್ತವಾಗಿಯೇ ವರ್ತಿಸುತ್ತಿದ್ದರು ಎನ್ನಲಾಗಿದೆ.

ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು ಮೂರನೇ ಮಗುವನ್ನು ಎಸೆಯಲು ಸಿದ್ಧವಾಗಿದ್ದ ನೂರುನ್ನಿಸಾ

ಸೆಪ್ಟೆಂಬರ್ 19 ರ ಶನಿವಾರ ಮಧ್ಯಾಹ್ನ ನಾದಿನಿ ನಮಾಜ್‌ಗೆ ತೆರಳಿದ್ದ ವೇಳೆ ನೂರುನ್ನಿಸಾ ನಾದಿನಿಯ ಮೂರು ವರ್ಷದ ಮಗುವನ್ನು ಬಾವಿಗೆ ಎಸೆದಿದ್ದರು. ಬಳಿಕ ತನ್ನ ಮೂರು ವರ್ಷದ ಮಗುವನ್ನೂ ಬಾವಿಗೆ ಎಸೆದಿದ್ದಳು. ಮೂರನೇ ಮಗುವನ್ನು ಬಾವಿಗೆ ಎಸೆಯಲು ಮುಂದಾದಾಗ ನಾದಿನಿ ತಡೆದಿದ್ದರು.

ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಬಳಿಕ ಪತಿ ಸಿನಾನ್ ಹಾಗೂ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ನೂರುನ್ನಿಸಾ, ತಾನು ಮಾಡಿದ್ದ ಕೃತ್ಯದ ಬಗ್ಗೆ ಪೊಲೀಸರ ಎದುರೂ ಒಪ್ಪಿಕೊಂಡಿದ್ದಾಳೆ. ಆದರೆ ಮಕ್ಕಳನ್ನು ಬಾವಿಗೆ ಎಸೆದ ಕಾರಣ ಏನು ಎಂಬುದನ್ನು ಮಾತ್ರ ನೂರುನ್ನಿಸಾ ಪೊಲೀಸರಿಗೆ ತಿಳಿಸಿಲ್ಲ. ಘಟನೆಯ ಬಳಿಕವೂ ಆಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು.

ಐದು ವರ್ಷಗಳ ಹಿಂದೆ ಸಿನಾನ್ ಅವರನ್ನು ವಿವಾಹವಾಗಿ ಬಂದಿದ್ದ ನೂರುನ್ನಿಸಾ, ಪತಿಯೊಂದಿಗೆ ಅನ್ಯೋನ್ಯವಾಗಿದ್ದು, ಸುಖ ಸಂಸಾರ ನಡೆಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಮೂರೂವರೆ ವರ್ಷದ ಗಂಡು ಮಗುವಿನ ಜೊತೆಗೆ ಎರಡು ತಿಂಗಳ ಮತ್ತೊಂದು ಮಗು ಕೂಡ ಇತ್ತು. ಇಂತಹ ಸಂದರ್ಭದಲ್ಲಿ ಏಕಾಏಕಿ ನೂರುನ್ನಿಸಾ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದ್ದು ಕುಟುಂಬಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಸದ್ಯ ನೂರುನ್ನಿಸಾಳನ್ನು ಪೊಲೀಸರು ಬಂಧಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು? ಏನೆಂದು ಬಿಂಬಿತವಾಗಿತ್ತು?

ಪೆರ್ನೆಯಲ್ಲಿ ನಡೆದಿದ್ದ ಘಟನೆಯಲ್ಲಿ ನೂರುನ್ನಿಸಾ ಹಾಗೂ ಪತಿ ಸಿನಾನ್ ನಡುವೆ ಫೋನ್‌ನಲ್ಲಿ ಜಗಳ ನಡೆದಿತ್ತು. ವೈವಾಹಿಕ ಕಲಹದ ಬಳಿಕ ಕೋಪಗೊಂಡ ನೂರುನ್ನಿಸಾ ತನ್ನ ಮೂರೂವರೆ ವರ್ಷದ ಮಗು ಆಲಿಯಾ ಹಾಗೂ ನಾದಿನಿಯ ಮೂರು ವರ್ಷದ ಮಗು ರಭಿಹನನ್ನು ಬಾವಿಗೆ ಎಸೆದಿದ್ದರು ಎಂದು ಈ ಹಿಂದೆ ಆರೋಪಿಸಲಾಗಿತ್ತು. ಘಟನೆಯಲ್ಲಿ ರಭಿಹ ಮೃತಪಟ್ಟಿದ್ದು, ಆಲಿಯಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ಈ ಹಿನ್ನೆಲೆ ಉಪ್ಪಿನಂಗಡಿ ಪೊಲೀಸರು ನೂರುನ್ನಿಸಾಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಇದೀಗ ಪ್ರಕರಣಕ್ಕೆ ತಿರುವು ದೊರೆತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗರ್ಭಿಣಿಯ ಅವಳಿ ಮಕ್ಕಳ ಸಾವು, ಮಂಗಳೂರಿನಲ್ಲಿ ಬಾವಿಗೆ ಬಿದ್ದ ಪುಟ್ಟ ಕಂದಮ್ಮ!

ಆದರೆ ಇದೀಗ ನೂರುನ್ನಿಸಾಳ ಹಿಂದಿನ ವರ್ತನೆ, ಆಕೆ ಪತಿಗೆ ಹೇಳಿಕೊಂಡಿದ್ದ ಭಯ-ಆತಂಕ ಹಾಗೂ ಘಟನೆ ನಡೆದ ಸಂದರ್ಭದ ವರ್ತನೆ ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಮಕ್ಕಳನ್ನು ಬಾವಿಗೆ ಎಸೆದಿರುವುದಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us