AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಲಿಮ್ ಆ್ಯಂಡ್​ ಫಿಟ್​​ ಆಗಿ ಕಾಣುವಾಸೆ ನಿಮಗಿದೆಯಾ? ಎಚ್ಚರ, ಬೆಂಗಳೂರಲ್ಲಿ ನಕಲಿ ವೈದ್ಯರ ಜಾಲ ಸಕ್ರಿಯ

ಬೆಂಗಳೂರಿನಲ್ಲಿ ನಕಲಿ ವೈದ್ಯರು ತೂಕ ಇಳಿಸುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿ, ಇಂಜೆಕ್ಷನ್ ಚಿಕಿತ್ಸೆ ಮೂಲಕ ಹಣ ಪೀಕುತ್ತಿದ್ದಾರೆ. ಅರ್ಹತೆ ಇಲ್ಲದವರು ವೈದ್ಯರ ಸೋಗಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದು, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಸ್ಲಿಮ್ ಆ್ಯಂಡ್​ ಫಿಟ್​​ ಆಗಿ ಕಾಣುವಾಸೆ ನಿಮಗಿದೆಯಾ? ಎಚ್ಚರ, ಬೆಂಗಳೂರಲ್ಲಿ ನಕಲಿ ವೈದ್ಯರ ಜಾಲ ಸಕ್ರಿಯ
ಪ್ರಾತಿನಿಧಿಕ ಚಿತ್ರImage Credit source: Getty images
ವಿನಯ್​ ಕಾಶಪ್ಪನವರ್​
| Edited By: |

Updated on: Nov 06, 2026 | 9:57 PM

Share

ಮುಖ್ಯಾಂಶಗಳು

  • ಸ್ಲಿಮ್ ಮಾಡ್ತೀವಿ, ದಪ್ಪ ಮಾಡ್ತೀವಿ ಅಂತ ವಂಚನೆ!
  • ಸ್ಟಾರ್ ಹೋಟೆಲ್‌ಗಳಲ್ಲೇ ನಕಲಿ ವೈದ್ಯರ ದಂಧೆ
  • ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ 

ಬೆಂಗಳೂರು, ನವೆಂಬರ್​​ 06: ಸ್ಲಿಮ್ ಆಗಬೇಕು, ಫಿಟ್ ಆಗಿ ಕಾಣಬೇಕು, ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಳ್ಳಬೇಕು ಎಂಬ ಆಸೆ ನಿಮಗಿದೆಯಾ? ಹಾಗಾದರೆ ಎಚ್ಚರ. ಏಕೆಂದರೆ ರಾಜಧಾನಿ ಬೆಂಗಳೂರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರ ಜಾಲ ಸಕ್ರಿಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣಬಣ್ಣದ ವಿಡಿಯೋ ಹಾಕಿ, ಸ್ಟಾರ್ ಹೋಟೆಲ್‌ಗಳಲ್ಲೇ ಇಂಜೆಕ್ಷನ್ ಚಿಕಿತ್ಸೆ ನೀಡುವ ಆಮಿಷವೊಡ್ಡುತ್ತಿದ್ದಾರೆ.

ವೈದ್ಯರ ಸೋಗಿನಲ್ಲಿ ಚಿಕಿತ್ಸೆ

ಸ್ಲಿಮ್ ಆಗುವ ಹಾಗೂ ಫಿಟ್ ಆಗಿ ಕಾಣುವ ಕನಸು ಹಲವರದ್ದು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಇನ್ಸ್ಟಾಗ್ರಾಮ್​ನಲ್ಲಿ ಆಕರ್ಷಕ ವಿಡಿಯೋಗಳ ಮೂಲಕ ಜನರನ್ನ ಸೆಳೆಯುವ ಹೊಸ ದಂಧೆ ಶುರುವಾಗಿದೆ. ಮೆಡಿಸಿನ್ ಮತ್ತು ಇಂಜೆಕ್ಷನ್ ಮೂಲಕ ಕಡಿಮೆ ಸಮಯದಲ್ಲಿ ತೂಕ ಇಳಿಸುತ್ತೇವೆ ಅಥವಾ ದಪ್ಪ ಮಾಡುತ್ತೇವೆ ಅಂತ ಪ್ರಚಾರ ಮಾಡಲಾಗುತ್ತಿದೆ. ವೈದ್ಯಕೀಯ ಅರ್ಹತೆ ಮತ್ತು ಅಗತ್ಯ ಪ್ರಮಾಣಪತ್ರಗಳಿಲ್ಲದ ವ್ಯಕ್ತಿಗಳೇ ವೈದ್ಯರ ಸೋಗಿನಲ್ಲಿ ಚಿಕಿತ್ಸೆ ನೀಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಅಷ್ಟಕ್ಕೂ ಇವರ ಕಾರ್ಯವೈಖರಿ ಹೇಗಿರುತ್ತೆ ಗೊತ್ತಾ?

ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಮೂಲಕ ಜನರನ್ನ ನಂಬಿಸುತ್ತಾರೆ. ಬಳಿಕ ಸ್ಟಾರ್ ಹೋಟೆಲ್‌ಗಳಲ್ಲಿ ನಿರ್ದಿಷ್ಟ ದಿನಾಂಕ, ಸಮಯ ನಿಗದಿಪಡಿಸಿ ಇಂಜೆಕ್ಷನ್ ಚಿಕಿತ್ಸೆ ನೀಡುವ ಆಮಿಷವೊಡ್ಡುತ್ತಾರೆ. ಇದಕ್ಕಾಗಿ ಜನರಿಂದ ದೊಡ್ಡ ಮೊತ್ತದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.

LIVE TV

ಸ್ಟಾರ್ ಹೋಟೆಲ್​​ನಲ್ಲೇ ಪ್ರಕರಣ ಬೆಳಕಿಗೆ

ಇನ್ನು ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಈ ಜಾಲದ ಹಿಂದೆ ಇನ್ನೂ ಹಲವರು ಇರುವ ಶಂಕೆಯೂ ವ್ಯಕ್ತವಾಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಹಾಗೂ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ. ಕೇವಲ ಒಂದೇ ಪ್ರಕರಣವಲ್ಲ, ಇಂತಹ ರೀತಿಯಲ್ಲಿ ಬೇರೆ ಬೇರೆ ಕಡೆ ಚಿಕಿತ್ಸೆ ನೀಡುತ್ತಿರುವವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ 

ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜನರು ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳನ್ನು ನಂಬಿ ಇಂತಹ ಚಿಕಿತ್ಸೆಗೆ ಒಳಗಾಗಬಾರದು. ವೈದ್ಯರ ಅರ್ಹತೆ, ನೋಂದಣಿ ಮತ್ತು ಚಿಕಿತ್ಸೆಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ ಮುಂದುವರಿಯಬೇಕು ಎಂಬುದು ಇಲಾಖೆ ಮನವಿ ಮಾಡಿದೆ. ಆರೋಗ್ಯ ಇಲಾಖೆ ಸಾಮಾಜಿಕ ಜಾಲತಣದಲ್ಲಿ ಸುಳು ಮಾಹಿತಿ ಹಾಕುವ ಕಳ್ಳರ ಹಿಂದೆ ಬಿದ್ದಿದೆ.

ಇದನ್ನೂ ಓದಿ: ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು, ಸಾರ್ವಜನಿಕರ ಸಹಾಯಕ್ಕೆ ಎಲ್ಲೆಡೆ ಶಾಘ್ಲನೆ

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಪ್ರತಿಯೊಂದು ಜಾಹೀರಾತು ಸತ್ಯವಲ್ಲ. ವೈದ್ಯರ ಅರ್ಹತೆ ಪರಿಶೀಲಿಸದೆ ಇಂಜೆಕ್ಷನ್ ಅಥವಾ ಔಷಧಿ ಚಿಕಿತ್ಸೆ ಪಡೆಯಬಾರದು. ನಕಲಿ ವೈದ್ಯರ ಜಾಲದ ಪತ್ತೆಗೆ ಆರೋಗ್ಯ ಇಲಾಖೆ ತನಿಖೆ ಚುರುಕುಗೊಳಿಸಿದ್ದು, ಇನ್ನೆಷ್ಟು ಮಂದಿ ಈ ದಂಧೆಯ ಹಿಂದೆ ಇದ್ದಾರೆ ಅನ್ನೋದು ತನಿಖೆಯಿಂದಷ್ಟೇ ಹೊರಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More