ಮೈಸೂರು ದಸರಾಗೆ ಕರಾವಳಿಯ ಕಂಬಳದ ಮೆರುಗು: ಸಾಂಪ್ರದಾಯಿಕ ಕ್ರೀಡಾ ವೈಭವಕ್ಕೆ ಸಕಲ ಸಿದ್ಧತೆ

ಸಾಕಷ್ಟು ಪರ-ವಿರೋಧಗಳ ನಡುವೆ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸಲಾಗಿದೆ. ಆ ಮೂಲಕ ದಸರಾಗೆ ಕಂಬಳದ ಮೆರುಗು ಸೇರಿದೆ. ಮೈಸೂರು ಕಂಬಳಕ್ಕೆ ಕರಾವಳಿಯಲ್ಲಿ ತಯಾರಿ ಜೋರಾಗಿದೆ. ಮೈಸೂರು ಜಿಲ್ಲಾಡಳಿತದಿಂದ ಕಂಬಳ ಆಯೋಜಕರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೈಸೂರು ದಸರಾಗೆ ಕರಾವಳಿಯ ಕಂಬಳದ ಮೆರುಗು: ಸಾಂಪ್ರದಾಯಿಕ ಕ್ರೀಡಾ ವೈಭವಕ್ಕೆ ಸಕಲ ಸಿದ್ಧತೆ
ಮೈಸೂರು ಕಂಬಳ
Image Credit source: tv9 kannada
Edited By:

Updated on: Sep 25, 2026 | 10:22 PM

ಮಂಗಳೂರು, ಸೆಪ್ಟೆಂಬರ್​​ 25: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಕರಾವಳಿಯ ಕಂಬಳದ ಮೆರುಗು ಸೇರ್ಪಡೆಯಾಗುತ್ತಿದೆ. ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಅದ್ಧೂರಿ ಕಂಬಳ ನಡೆಯಲಿದೆ. ಇದಕ್ಕಾಗಿ 20 ಎಕರೆ ಪ್ರದೇಶದಲ್ಲಿ ಕಂಬಳದ ಕರೆ ನಿರ್ಮಾಣವಾಗಿದ್ದು, ಸುಮಾರು 15 ಸಾವಿರ ಜನರಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

20 ಎಕರೆ ಜಾಗ, 147 ಮೀಟರ್ ಉದ್ದದ ಕರೆ ನಿರ್ಮಾಣ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ 48 ಗಂಟೆಗಳ ಕಾಲ ಕಂಬಳ ನಡೆಯಲಿದೆ. 20 ಎಕರೆ ಪ್ರದೇಶದಲ್ಲಿ ಕಂಬಳ ಆಯೋಜಿಸಲಾಗಿದ್ದು, ಸುಮಾರು 15 ಸಾವಿರ ಜನರು ಕಂಬಳ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮ, ವಿಐಪಿ ಹಾಗೂ ವಿವಿಐಪಿಗಳಿಗಾಗಿ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ತೀವ್ರ ವಿರೋಧದ ನಡುವೆಯೂ ಮೈಸೂರು ದಸರಾದಲ್ಲಿ ಕಂಬಳಕ್ಕೆ ಭರದ ಸಿದ್ಧತೆ: ಟ್ರ್ಯಾಕ್ ನಿರ್ಮಾಣ ಕಾರ್ಯ ಆರಂಭ

ಮೈಸೂರು ಜಿಲ್ಲಾಡಳಿತದಿಂದ ಕಂಬಳ ಆಯೋಜಕರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಒಟ್ಟು 160 ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿ ಕೋಣಗಳ ಯಜಮಾನರ ಮನೆಗೆ ತೆರಳಿ ನೋಂದಣಿ ಮಾಡಲಾಗಿದೆ. ಅಕ್ಟೋಬರ್ 10ರಂದು ಕಂಬಳದ ಕರೆಯಲ್ಲಿ ಐದು ಜೊತೆ ಕೋಣಗಳ ಟ್ರಯಲ್ ಓಟ ನಡೆಯಲಿದೆ. ಕಂಬಳದ ಕರೆ 147 ಮೀಟರ್ ಉದ್ದವಿದೆ.

160 ಜೊತೆ ಕೋಣಗಳು ಭಾಗಿ: ಅಕ್ಟೋಬರ್ 16ರಂದು ಮೈಸೂರಿನತ್ತ ಪಯಣ

ಇನ್ನು ಅಕ್ಟೋಬರ್ 16ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನಿಂದ ಕಂಬಳ ಕೋಣಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ಮಡಿಕೇರಿಯಲ್ಲಿ ಸುಮಾರು ಮೂರು ಗಂಟೆಗಳ ವಿಶ್ರಾಂತಿ ಬಳಿಕ ಸಂಜೆ ಮತ್ತೆ ಪ್ರಯಾಣ ಮುಂದುವರಿಸಿ ರಾತ್ರಿ ಮೈಸೂರು ತಲುಪಲಿವೆ. ಅಕ್ಟೋಬರ್ 17ರಂದು ಕೋಣಗಳಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಅಕ್ಟೋಬರ್ 18ರಂದು ಕಂಬಳ ಆರಂಭವಾಗಲಿದ್ದು, ಅಕ್ಟೋಬರ್ 19ರಂದು ಬಹುಮಾನ ವಿತರಣೆ ನಡೆಯಲಿದೆ.

ಚಿನ್ನ ಹಾಗೂ ನಗದು ವಿಶೇಷ ಬಹುಮಾನ

ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಬಹುಮಾನವೂ ವಿಶೇಷವಾಗಿದೆ. ದೊಡ್ಡ ಕೋಣಗಳ ವಿಭಾಗದಲ್ಲಿ ಪ್ರಥಮ ಬಹುಮಾನ 65 ಸಾವಿರ ರೂ. ಚಿಕ್ಕ ಕೋಣಗಳ ವಿಭಾಗದಲ್ಲಿ ಪ್ರಥಮ ಬಹುಮಾನ 50 ಸಾವಿರ ರೂ. ಇದರ ಜೊತೆಗೆ ಮೈಸೂರು ದಸರಾ ಪ್ರಶಸ್ತಿ ಫಲಕ ನೀಡಲಾಗುತ್ತದೆ. ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ. ದ್ವಿತೀಯ ಬಹುಮಾನ 8 ಗ್ರಾಂ ಚಿನ್ನ. ಮೂರನೇ ಮತ್ತು ನಾಲ್ಕನೇ ಬಹುಮಾನಕ್ಕೆ ತಲಾ ಒಂದು ಪವನ್ ಚಿನ್ನ ನೀಡಲಾಗುತ್ತದೆ.

ಇದನ್ನೂ ಓದಿ: Protest Against Kambala: ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?

ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ 8 ಗ್ರಾಂ ಹಾಗೂ ದ್ವಿತೀಯ ಬಹುಮಾನ 5 ಗ್ರಾಂ ಚಿನ್ನ ನೀಡಲಾಗುತ್ತದೆ. ಕಂಬಳ ವೀಕ್ಷಣೆಗೆ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಇಲ್ಲದೆಯೂ ಸಾರ್ವಜನಿಕರು ಕಂಬಳ ವೀಕ್ಷಿಸಲು ಅವಕಾಶವಿದೆ. ವಿಐಪಿ ಹಾಗೂ ವಿವಿಐಪಿ ಪಾಸ್‌ಗಳನ್ನೂ ವಿತರಿಸಲಾಗುತ್ತಿದ್ದು, ಕಂಬಳ ಕೋಣಗಳ ಜೊತೆ ಫೋಟೋ ತೆಗೆಸಿಕೊಳ್ಳುವ ವ್ಯವಸ್ಥೆಯೂ ಇರಲಿದೆ. ಕೋಣಗಳಿಗೆ ಅಗತ್ಯವಿರುವ ನೀರಿನ ವ್ಯವಸ್ಥೆಯನ್ನೂ ಇಲ್ಲಿಂದಲೇ ಮಾಡಲಾಗುತ್ತಿದೆ.

ಕರಾವಳಿ ಫುಡ್ ಫೆಸ್ಟಿವಲ್ 

ಮೈಸೂರು ದಸರಾ ಕಂಬಳದ ಜೊತೆಗೆ ಕರಾವಳಿಯ ಆಹಾರ ತಿನಿಸುಗಳ ಫುಡ್ ಫೆಸ್ಟಿವಲ್ ಕೂಡ ನಡೆಯಲಿದೆ. ಕಂಬಳ ವೀಕ್ಷಣೆಗೆ ಬರೋಬ್ಬರಿ 25 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಮೈಸೂರು ದಸರಾ ಸಂಭ್ರಮದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕಂಬಳದ ಸೊಬಗು. ಮೈಸೂರಿನ ಅಂಗಳದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯ ವೈಭವಕ್ಕೆ ಸಕಲ ಸಿದ್ಧತೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:22 pm, Fri, 25 September 26

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us