ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯ ಫೋಟೋಗೆ ಲೈಕ್, ಪ್ರೇಯಸಿಯಿಂದ ತರಾಟೆ: ಪ್ರಿಯಕರ ಆತ್ಮಹತ್ಯೆಗೆ ಶರಣು
ಬಂಟ್ವಾಳ ತಾಲೂಕಿನ ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋಗೆ ಲೈಕ್ ಕೊಟ್ಟಿದ್ದಕ್ಕಾಗಿ ಆತನ ಪ್ರೇಯಸಿ ಕೋಪಗೊಂಡು ತರಾಟೆಗೆ ತೆಗೆದುಕೊಂಡಿದ್ದಾಳೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮತ್ತು ಅದರಿಂದ ಉಂಟಾಗುವ ಮಾನಸಿಕ ಒತ್ತಡದ ಬಗ್ಗೆ ಗಮನ ಸೆಳೆಯುತ್ತದೆ. ಯುವಕರಲ್ಲಿ ಸಾಮಾಜಿಕ ಮಾಧ್ಯಮದ ಚಟ ಹೆಚ್ಚುತ್ತಿರುವುದು ಚಿಂತಾಜನಕ.
ಮಂಗಳೂರು, ಜನವರಿ 25: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸಾಮಾಜಿಕ ಜಾಲತಾಣದ ಗೀಳು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದ ಫೋಸ್ಟ್ ಮಾಡುವ ಫೋಟೋಗಳಿಗೆ ಹೆಚ್ಚಿನ ಲೈಕ್ ಮತ್ತು ಕಾಮೆಂಟ್ ಬರಲಿ ಎಂಬ ಉದ್ವಿಗ್ನತೆಯಲ್ಲಿರುತ್ತಾರೆ. ಆದರೆ, ಇದೇ ಉದ್ವಿಗ್ನತೆ ಎಷ್ಟೋ ಜನರ ಪ್ರಾಣ ಕಸಿದುಕೊಂಡಿದೆ. ಹೌದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಪೂಂಜಾಲಕಟ್ಟೆ ಕುಕ್ಕಿಪ್ಪಾಡಿಯ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮೃತ ಚೇತನ್ಗೆ ಕುಂದಾಪುರದ ಚೈತನ್ಯ ಎಂಬ ಯುವತಿಯು ಇನ್ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದಳು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು, ಸ್ನೇಹ ಪ್ರೀತಿಗೆ ತಿರುಗಿತ್ತು. 8 ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥವಾಗಿತ್ತು. ಜನವರಿ 21 ರಂದು ಚೇತನ್ ತನ್ನ ಪರಿಚಯದ ಬೇರೊಂದು ಯುವತಿಯ ಫೋಟೋಗೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ ಕೊಟ್ಟಿದ್ದನು.
ಇದನ್ನೂ ಓದಿ: ಅನೈತಿಕ ಚಟುವಟಿಕೆ ಆರೋಪ: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿ
ಇದನ್ನು ಪ್ರಶ್ನಿಸಲು ಚೈತನ್ಯ ಭಾವಿ ಪತಿ ಚೇತನ್ ಮನೆಗೆ ಬಂದಿದ್ದರು. ಈ ವೇಳೆ ಚೇತನ್ ಮನೆಯಲ್ಲಿ ಒಬ್ಬರೇ ಇದ್ದರು. ಯುವತಿಯ ಫೋಟೋಗೆ ಲೈಕ್ ನೀಡಿದ್ದಕ್ಕೆ ಚೇತನ್ನನ್ನು ಚೈತನ್ಯ ತರಾಟೆಗೆ ತೆಗೆದುಕೊಂಡಿದ್ದಳು.
ಇದರಿಂದ ಮನನೊಂದ ಚೇತನ್ ಯುವತಿ ಮನೆಯಲ್ಲಿ ಇರುವಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಳಿಕ ಚೇತನ್ ತಾಯಿಗೆ ಕರೆ ಮಾಡಿದ ಚೈತನ್ಯ ಮಲಗಿದ್ದಾತ ಮೇಲೆ ಏಳುತ್ತಿಲ್ಲ ಎಂದು ಹೇಳಿದ್ದಾನೆ. ಕೂಡಲೇ ಚೇತನ್ ತಾಯಿ ಮನೆಗೆ ಬಂದು ನೋಡಿದಾಗ, ಮನೆಯ ಮೆಲ್ಚಾವಣಿಯಲ್ಲಿ ನೇಣು ಬಿಗಿದ ಕುಣಿಕೆ ಸಿಕ್ಕಿತ್ತು. ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿನ ಒಂದು ಫೋಸ್ಟ್ಗೆ ಲೈಕ್ ಕೊಟ್ಟಿದ್ದರಿಂದ ಪ್ರೇಮಿಗಳ ನುಡುವೆ ಬಿರುಕು ಮೂಡುವಂತೆ ಮಾಡಿದ್ದು, ವಿಪರ್ಯಾಸ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Sat, 25 January 25