AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಂತಕುಮಾರ ಹೆಗಡೆ ಎಲ್ಲಿ ಸಿಗ್ತಾನೋ ಅಲ್ಲೇ ಹಿಡಿದು ಹೊಡೆಯುತ್ತೇವೆ: ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಕೆ

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಮಾಜಿ ಶಾಸಕ ಎಸ್.ರಾಮಪ್ಪ, ಸಿಎಂ ಸಿದ್ದರಾಮಯ್ಯ ಬಗ್ಗೆ ಇನ್ನೊಮ್ಮೆ ಈ ರೀತಿ ಏಕವಚನದಲ್ಲಿ ಮಾತಾಡಿದರೆ ಸಂಸದ ಅನಂತಕುಮಾರ ಹೆಗಡೆ ಎಲ್ಲಿ ಸಿಗುತ್ತಾರೆ ಅಲ್ಲಿ ಹಿಡಿದು ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಹಿನ್ನೆಲೆ ಕೋಮು‌ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

ಅನಂತಕುಮಾರ ಹೆಗಡೆ ಎಲ್ಲಿ ಸಿಗ್ತಾನೋ ಅಲ್ಲೇ ಹಿಡಿದು ಹೊಡೆಯುತ್ತೇವೆ: ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಕೆ
ಮಾಜಿ ಶಾಸಕ ಎಸ್.ರಾಮಪ್ಪ, ಅನಂತಕುಮಾರ ಹೆಗಡೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Jan 15, 2024 | 10:56 PM

Share

ದಾವಣಗೆರೆ, ಜನವರಿ 15: ಸಿಎಂ ಸಿದ್ದರಾಮಯ್ಯ ಬಗ್ಗೆ ಇನ್ನೊಮ್ಮೆ ಈ ರೀತಿ ಏಕವಚನದಲ್ಲಿ ಮಾತಾಡಿದರೆ ಸಂಸದ ಅನಂತಕುಮಾರ ಹೆಗಡೆ ಎಲ್ಲಿ ಸಿಗುತ್ತಾರೆ ಅಲ್ಲಿ ಹಿಡಿದು ಹೊಡೆಯಲಾಗುವುದು ಎಂದು ಕಾಂಗ್ರೆಸ್‌ ಮಾಜಿ ಶಾಸಕ ಎಸ್.ರಾಮಪ್ಪ (S. Ramappa) ವಾರ್ನಿಂಗ್‌ ‌ಮಾಡಿದ್ದಾರೆ. ಜಿಲ್ಲೆಯ ಹರಿಹರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಆರೋಗ್ಯ ಸರಿಯಿಲ್ಲ ಅಂತಾ ಹೆಗಡೆ ಮನೆಯಲ್ಲಿ‌ ಮಲಗಿದ್ದರು. ಚುನಾವಣೆ ಹಿನ್ನೆಲೆ ಕೋಮು‌ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ಹಲವರು ಜೈಲಿಗೆ ಹೋಗಿದ್ದಾರೆ, ಅವರ ಬಗ್ಗೆ ಮಾತನಾಡಲಿ. ಸಿಎಂ ಸಿದ್ದರಾಮಯ್ಯ ಹಸಿದ ಜನರಿಗೆ ಅನ್ನ ಕೊಟ್ಟಿದ್ದಾರೆ. ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದರೂ ಯಾವುದೇ ಕಪ್ಪು‌ಚುಕ್ಕೆ ಇಲ್ಲ. ಅವರ ಬಗ್ಗೆ ಮಾತನಾಡಲು ಹೆಗಡೆ ಯೋಗ್ಯತೆ ಏನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅನಂತಕುಮಾರ್ ಹೆಗಡೆಗೆ ಮಾನಸಿಕ ಸ್ಥಿಮಿತ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ

ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಲಿ. ರಾಜ್ಯದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ವಿರುದ್ಧ ಮಾತನಾಡುತ್ತಿದ್ದಾರೆ. ಇವರು 70 ಗಡಿ ದಾಟಿದ್ದಾರೆ. ಹಿಂದು, ಮುಸ್ಲಿಂ ನಡುವೆ ಜಗಳ ಹಚ್ಚುವ ರೀತಿಯಲ್ಲಿ ಮಾಡುವುದನ್ನ ನಿಲ್ಲಿಸಲಿ ಎಂದು ಹೇಳಿದ್ದಾರೆ.

ಅನಂತಕುಮಾರ್ ಹೆಗಡೆ ಇಷ್ಟು ದಿನ ನಾಪತ್ತೆ ಆಗಿದ್ದರು: ಸಿಎಂ ಸಿದ್ದರಾಮಯ್ಯ

ಇಂದು ಕೂಡ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದು, ಅನಂತಕುಮಾರ್ ಹೆಗಡೆ ಇಷ್ಟು ದಿನ ನಾಪತ್ತೆ ಆಗಿದ್ದರು. ಅವರು ಬಡವರ ಕಷ್ಟ ಕೇಳಿದ್ದಾರಾ ಅಂತ ಆಕ್ರೋಶಭರಿತವಾಗಿ ಪ್ರಶ್ನೆ ಮಾಡಿದ್ದರು. ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿ, ಮಾನಸಿಕ ಸ್ಥಿರತೆ ಇರುವವರು ಹೀಗೆ ಮಾತನಾಡಲು ಹೋಗಲ್ಲ. ಅನಂತಕುಮಾರ್ ಹೆಗಡೆ ಹೆಲ್ತ್ ಬಗ್ಗೆ ಗಮನ ಕೊಡಲಿ ಅಂತ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಅನಂತ ಕುಮಾರ್​​ ತನ್ನ ಗುರುವಿನ ಹತ್ಯೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ: ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ

ಸಿಎಂ, ಡಿಸಿಎಂ ಮಾತ್ರವಲ್ಲ ಸಚಿವರು, ನಾಯಕರು ಕೂಡ ಅನಂತಕುಮಾರ್ ಹೆಗಡೆ ವಿರುದ್ಧ ಉರಿದುರಿದು ಬಿದ್ದಿದ್ದಾರೆ. ಮಧುಬಂಗಾರಪ್ಪ ಅನಂತ ಕುಮಾರ್ ಹೆಗಡೆ ಹುಚ್ಚ ಅಂದರೆ, ಹೆಚ್​.ಆಂಜನೇಯ ಆ ಹುಚ್ಚನ ಬಗ್ಗೆ ಯಾರಾದರು ಮಾತನಾಡುತ್ತಾರ ಅಂತ ಖಾರವಾಗಿ ಕುಟುಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.