Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನ ಕಟ್ಟುವ ಬದಲು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಹೇಳಿಕೆ

ಮಠದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಹಾವಿನ ವಿಷ ಏರಿ ಅಸ್ವಸ್ಥಗೊಂಡಿದ್ದ ಸ್ವಾಮೀಜಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಸಾವನ್ನಪ್ಪಿದ್ದಾರೆ.

ದೇವಸ್ಥಾನ ಕಟ್ಟುವ ಬದಲು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ ಹೇಳಿಕೆ
ಸಂಸದ ಜಿಎಂ ಸಿದ್ದೇಶ್ವರ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Dec 11, 2021 | 10:35 PM

ದಾವಣಗೆರೆ: ಪೂಜಾರಿಗಳು ಸ್ನಾನ ಮಾಡಲ್ಲ, ತೀರ್ಥ ಕುಡಿಯೋಕೆ ಆಗಲ್ಲ. ದೇಗುಲದ ಬದಲು ಶಾಲೆ ಕಟ್ಟುವಂತೆ ಮಹಾನುಭಾವರು ಹೇಳ್ತಾರೆ. ಜನರು ದೇವಸ್ಥಾನ ಕಟ್ಟುತ್ತಾರೆ, ಆ ಪೂಜಾರಿಗಳು ಸ್ನಾನ ಮಾಡಲ್ಲ. ಪೂಜಾರಿಗಳು ಕೊಡುವ ತೀರ್ಥವನ್ನು ಕುಡಿಯೋಕೆ ಆಗುವುದಿಲ್ಲ. ಅದು ಕೇವಲ ಪೂಜಾರಿಗಳ ತಪ್ಪಲ್ಲ, ನಮ್ಮೆಲ್ಲರ ತಪ್ಪೂ ಇದೆ. ಹತ್ತಾರು ದೇವಸ್ಥಾನ ಕಟ್ಟುತ್ತೀರಾ ಪೂಜಾರಿ ನೇಮಿಸುತ್ತೀರಾ. ದೇವಸ್ಥಾನ ಕಟ್ಟುವ ಬದಲು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಯಲ್ಲೋದಹಳ್ಳಿಯಲ್ಲಿ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್​ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಯಲ್ಲೋದಹಳ್ಳಿ ಗ್ರಾಮದಲ್ಲಿ ಮಾತನಾಡಿದ್ದಾರೆ. ದೇವಸ್ಥಾನ ಉದ್ಘಾಟಿಸಿ, ಕೆರೆಗೆ ಬಾಗಿನ ಅರ್ಪಿಸಿ ಸಿದ್ದೇಶ್ವರ್​ ಹೇಳಿಕೆ ನೀಡಿದ್ದಾರೆ.

ಚಾಮರಾಜನಗರ: ಇಮ್ಮಡಿ ಗುರುಮಲ್ಲ ಸ್ವಾಮೀಜಿ ಹಾವು ಕಚ್ಚಿ ನಿಧನ ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರದ ಕಬ್ಬಿಣಕೋಲೇಶ್ವರ ಮಠದ ಇಮ್ಮಡಿ ಗುರುಮಲ್ಲ ಸ್ವಾಮೀಜಿ (38) ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಮಠದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಹಾವಿನ ವಿಷ ಏರಿ ಅಸ್ವಸ್ಥಗೊಂಡಿದ್ದ ಸ್ವಾಮೀಜಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಸಾವನ್ನಪ್ಪಿದ್ದಾರೆ.

ರಾಯಚೂರು: ನಿಧಿ ಆಸೆಗಾಗಿ ಶ್ರೀಕೃಷ್ಣನ ದೇಗುಲ ಧ್ವಂಸ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಯಾಟಗಲ್‌ನಲ್ಲಿ ನಿಧಿ ಆಸೆಗಾಗಿ ಶ್ರೀಕೃಷ್ಣನ ದೇಗುಲ ಧ್ವಂಸ ಮಾಡಿದ ಘಟನೆ ನಡೆದಿದೆ. ನಿನ್ನೆ ತಡ ರಾತ್ರಿ ದುಷ್ಕರ್ಮಿಗಳು ದೇಗುಲ ಧ್ವಂಸಗೊಳಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ದುಷ್ಕರ್ಮಿಗಳು ವಿಗ್ರಹ ಕಿತ್ತೆಸೆದು ದೇಗುಲ ಕುರೂಪಗೊಳಿಸಿದ್ದಾರೆ. ಎದೆಯೆತ್ತರ ಗುಂಡಿ ತೋಡಿ ದೇಗುಲ ದ್ವಂಸ ಮಾಡಲಾಗಿದೆ.

ಇದನ್ನೂ ಓದಿ: ಮಂಗಳೂರು: ನಗರದ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್​ಗಿರಿ; ನಾಲ್ವರು ಆರೋಪಿಗಳ ಬಂಧನ

ಇದನ್ನೂ ಓದಿ: ಮಂಡ್ಯ, ಮೈಸೂರಿನ ದೇವಸ್ಥಾನಗಳಲ್ಲಿ ದೇವರ ವಿಗ್ರಹ ಧ್ವಂಸ; ಒಂದೇ ದಿನದಲ್ಲಿ ಆರೋಪಿಯ ಬಂಧನ

Published On - 10:33 pm, Sat, 11 December 21

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್