AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ರೇಣುಕಾಚಾರ್ಯ ಸೋದರ ಪುತ್ರ ನಾಪತ್ತೆ ಪ್ರಕರಣ: ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಸಿಸಿ ಟಿವಿ ದೃಶ್ಯಗಳು

ಚಂದ್ರು ತೆಗೆದುಕೊಂಡು ಹೋಗಿದ್ದ ವೈಟ್ ಕ್ರೇಟಾ ಕಾರು ಶಿವಮೊಗ್ಗದಿಂದ ಸುರಹೊನ್ನೆ ಬಳಿ ಪಾಸ್ ಆಗಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುರಹೊನ್ನೆ ಬಳಿ ಪಾಸ್ ಆಗೋ ವಿಡಿಯೋ ಮಾತ್ರ ಲಭ್ಯವಾಗಿದೆ.

ಶಾಸಕ ರೇಣುಕಾಚಾರ್ಯ ಸೋದರ ಪುತ್ರ ನಾಪತ್ತೆ ಪ್ರಕರಣ: ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಸಿಸಿ ಟಿವಿ ದೃಶ್ಯಗಳು
ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಮೃತ ಚಂದ್ರಶೇಖರ್
TV9 Web
| Edited By: |

Updated on:Nov 02, 2022 | 11:58 AM

Share

ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಕಂಡು ಬಂದಿದೆ. ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ನಾಪತ್ತೆ ಆಗಿದ್ದಾರೆ. ಚಂದ್ರಶೇಖರ್, ಭಾನುವಾರ ಶಿವಮೊಗ್ಗ ಮೂಲಕ ಹೊನ್ನಾಳಿ ಕಡೆ ಬಂದಿದ್ದರು. ಇದಾದ ಬಳಿಕ ಚಂದ್ರಶೇಖರ್ ನಾಪತ್ತೆಯಾಗಿದ್ದು ಅವರ ಕಾರು ಹೊನ್ನಾಳಿ ತಲುಪಿಲ್ಲ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಚಂದ್ರು ತೆಗೆದುಕೊಂಡು ಹೋಗಿದ್ದ ವೈಟ್ ಕ್ರೇಟಾ ಕಾರು ಶಿವಮೊಗ್ಗದಿಂದ ಸುರಹೊನ್ನೆ ಬಳಿ ಪಾಸ್ ಆಗಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುರಹೊನ್ನೆ ಬಳಿ ಪಾಸ್ ಆಗೋ ವಿಡಿಯೋ ಮಾತ್ರ ಲಭ್ಯವಾಗಿದೆ. ಆದರೆ ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಸುಳಿವಿಲ್ಲ. ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಯಾವುದೇ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿಲ್ಲ. ಹೀಗಾಗಿ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಭಾನುವಾರ ಚಿಕ್ಕಮಗಳೂರಿಗೆ ಹೋಗಿದ್ದ ಚಂದ್ರು ವಾಪಸ್ ಹೊನ್ನಾಳಿ ತಲುಪಿದ್ರಾ ಅನ್ನೋದೇ ಡೌಟಾಗಿದೆ.

ಅಲ್ಲದೆ ಚಂದ್ರು ಮೊಬೈಲ್ ಹೊನ್ನಾಳಿಯಲ್ಲೇ ಸ್ವಿಚ್ ಆಫ್‌ ಆಗಿದೆ. ಸಿಸಿ ಟಿವಿ ದೃಶ್ಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸುರಹೊನ್ನೆ ಬಳಿ ಎರಡು ಕಾರು ಜೊತೆಯಲ್ಲಿ ಪಾಸ್ ಆಗಿವೆ. ಒಂದು ಕಾರ್ ಚಂದ್ರುದ್ದು, ಇನ್ನೊಂದು ಕಾರು ಯಾರದ್ದು ಎನ್ನುವ ಪ್ರಶ್ನೆ ಉದ್ಭವಿಸಿದೆ. ಚಂದ್ರು ಎಲ್ಲಿದ್ದಿಯೋ ಬಾರೋ ಎಂದು ಅಣ್ಣನ ಮಗನನ್ನು ನೆನೆದು ಶಾಸಕ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಗಂಭೀರ ಆರೋಗ್ಯ ಸಮಸ್ಯೆ, ಸಂಬಂಧಿಕರು ನಿಧನರಾದರೆ ಮಾತ್ರ ರಜೆ: ಬೇಕಾಬಿಟ್ಟಿ ರಜೆ ಕೇಳಿದರೆ ಶಿಸ್ತುಕ್ರಮ ಎಂದ ಬೆಂಗಳೂರು ಡಿಸಿಪಿ

ಅಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡ್ತಿದ್ದಾ ಚಂದ್ರಶೇಖರ್ ಭಾನುವಾರ ಸಂಜೆ ಆರು ಗಂಟೆಗೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಆಗಮಿಸಿದ್ದ ವಿನಯ್ ಗುರುಜೀಯವರನ್ನು ಸ್ನೇಹಿತ ಕಿರಣ್ ರೊಂದಿಗೆ ಭೇಟಿ ಮಾಡಿ ಕೆಲವರಿಗೆ ಊಟ ಕೊಡಿಸಿದ್ದಾರೆ. ಅದಾದ ಬಳಿಕ ಶಿವಮೊಗ್ಗದಿಂದ ಹಿಂದಿರುಗಿದ ಚಂದ್ರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿಗೆ ಎಂಟ್ರಿ ಆಗಿದ್ದೇ ಕೊನೆ ಇಲ್ಲಿ ತನಕ ಚಂದ್ರಶೇಖರ್ ಕಾರು ಸಮೇತ ನಾಪತ್ತೆಯಾಗಿದ್ದಾರೆ. ಇನ್ನು ಪೋಲಿಸರು ಕುಟುಂಬಸ್ಥರು ಕೂಡ ಸಾಕಷ್ಟು ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಶಾಸಕ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅಳುತ್ತ ಮಾಹಿತಿ ನೀಡಿದರು. ಇನ್ನು ತನ್ನ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ ಚಂದ್ರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಕುಟುಂಬಸ್ಥರಿಗೆ ಆತಂಕಕ್ಕೆ ದೂಡಿದೆ. ಇನ್ನು ಚಂದ್ರಶೇಖರ್ ತಂದೆ ರಮೇಶ್ ತಲೆ ಮೇಲೆ ಕೈ ಹೊತ್ತು ಕೂತಿರುವ ದೃಶ್ಯಗಳು ಮನಸ್ಸಿಗೆ ರಾಚುವಂತ್ತಿತ್ತು.

ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಚಂದ್ರಶೇಖರ್ ಕಾರು ಪಾಸ್ ಆಗಿರುವುದು ಸಿಸಿಟಿವಿ ಸೆರೆಯಾಗಿದೆ. ಭಾನುವಾರ ರಾತ್ರಿ 11.56ಕ್ಕೆ ಶಿವಮೊಗ್ಗದಿಂದ ವಾಹನ ಪಾಸ್ ಆಗಿದ್ದು, ಸೋಮವಾರ ಬೆಳಿಗ್ಗೆ 6.48 ಮೊಬೈಲ್ ಫೋನ್ ಲಾಸ್ಟ್ ಲೊಕೇಶನ್ ತೋರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಾವಣಗೆರೆ ಪೊಲೀಸರಿಂದ ತೀವ್ರ ತಪಾಸಣೆ ಕಾರ್ಯ ಮುಂದುವರೆದಿದ್ದು, ಚಂದ್ರಶೇಖರ್ ಅವರು ಚಲಾಯಿಸುತ್ತಿದ್ದ ಕ್ರೇಟಾ ಕಾರು ಸಹ ಇದುವರೆಗು ಪತ್ತೆಯಾಗದೆ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಇನ್ನು ತಮ್ಮ ನಾಯಕನಿಗೆ ಸಮಾಧಾನ ಮಾಡಲು ಎಂಪಿ ರೇಣುಕಾಚಾರ್ಯರ ನಿವಾಸಕ್ಕೆ ಅಪಾರ ಸಂಖ್ಯೆಯ ಕಾರ್ಯಕರ್ತರು ಅಭಿಮಾನಿಗಳು ಆಗಮಿಸುತ್ತಿದ್ದು, ka 17 ma 2534 craeta ಕಾರು ಚಂದ್ರಶೇಖರ್ ಮೊಬೈಲ್ ಸಂಖ್ಯೆ 8792667691 ಇದಾಗಿದ್ದು ಇದುವರೆಗು ಸ್ವಿಚ್ ಆಫ್ ಆಗಿದೆ.

Published On - 11:58 am, Wed, 2 November 22