ಲಾಕ್ಡೌನ್ ಸಮಯದಲ್ಲಿ ಸರ್ಕಾರದ ಜಮೀನು ಪ್ರಭಾವಿಗಳ ಪಾಲು, ಗ್ರಾಮಸ್ಥರ ಆಕ್ರೋಶ
ದಾವಣಗೆರೆ: ಕೊರೊನಾ ಸೋಂಕಿನ ಭಯದಿಂದ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿದ್ದರು ಕೆಲವರು ಮಾಡಬಾರದ ಕಿತಾಪತಿ ಮಾಡಿದ್ದಾರೆ. ಅದು ಅಂತಹ ಇಂತಹ ಕಿತಾಪತಿ ಅಲ್ಲ. ತಲೆತಲಾಂತರಗಳವರೆಗೂ ಮಕ್ಕಳು, ಮರಿ ಮೊಮ್ಮಕ್ಕಳು ಕುಳಿತು ತಿನ್ನುವಂತೆ ಆಸ್ತಿ ಮಾಡಿದ್ದಾರೆ. ಅರೇ ಏನಿದು ಲಾಕ್ಡೌನ್ನಿಂದ ಜನ ತುತ್ತು ಅನ್ನಕ್ಕೂ ಪರದಾಡುತ್ತಿದ್ರೆ ಇಲ್ಲಿ ಯಾರೂ ಆಸ್ತಿ ಮಾಡಿದ್ದಾರಲ್ಲ. ಅದು ಹೇಗೆ? ಅಂತ ಯೋಚಿಸ್ತಿದ್ದೀರಾ.. ಇದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಳ್ಳಿಕಟ್ಟೆ ಹಾಗೂ ನಾರಾಯಣಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ಗಳಲ್ಲಿ […]
ದಾವಣಗೆರೆ: ಕೊರೊನಾ ಸೋಂಕಿನ ಭಯದಿಂದ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿದ್ದರು ಕೆಲವರು ಮಾಡಬಾರದ ಕಿತಾಪತಿ ಮಾಡಿದ್ದಾರೆ. ಅದು ಅಂತಹ ಇಂತಹ ಕಿತಾಪತಿ ಅಲ್ಲ. ತಲೆತಲಾಂತರಗಳವರೆಗೂ ಮಕ್ಕಳು, ಮರಿ ಮೊಮ್ಮಕ್ಕಳು ಕುಳಿತು ತಿನ್ನುವಂತೆ ಆಸ್ತಿ ಮಾಡಿದ್ದಾರೆ. ಅರೇ ಏನಿದು ಲಾಕ್ಡೌನ್ನಿಂದ ಜನ ತುತ್ತು ಅನ್ನಕ್ಕೂ ಪರದಾಡುತ್ತಿದ್ರೆ ಇಲ್ಲಿ ಯಾರೂ ಆಸ್ತಿ ಮಾಡಿದ್ದಾರಲ್ಲ. ಅದು ಹೇಗೆ? ಅಂತ ಯೋಚಿಸ್ತಿದ್ದೀರಾ..
ಇದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಳ್ಳಿಕಟ್ಟೆ ಹಾಗೂ ನಾರಾಯಣಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ಗಳಲ್ಲಿ ಸುಮಾರು ಎರಡು ಸಾವಿರ ಎಕರೆ ಸರ್ಕಾರದ ಜಮೀನು ಇತ್ತು. ಇದನ್ನ ಲಾಕ್ಡೌನ್ ವೇಳೆ ಹತ್ತು ಜನ ಪ್ರಭಾವಿಗಳು ಬೇಸಾಯ ಮಾಡಿ ತಾವೇ ಇಲ್ಲಿ ನೂರಾರು ವರ್ಷಗಳಿಂದ ಉಳಿಮೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಪ್ರಭಾವಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ: ಈ ವಿಚಾರ ಜಿಲ್ಲಾಡಳಿತಕ್ಕೆ ಗೊತ್ತಾಗಿದೆ. ಅಲ್ಲದೆ ಇದೇ ಗ್ರಾಮದ ನೂರಾರು ಜನರು ಇವರು ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಪ್ರಭಾವಿಗಳು ಸರ್ಕಾರದ ಜಮೀನನ್ನು ಅಕ್ರಮಿಸಿಕೊಂಡಿದ್ದಾರೆ. ಈ ಜಮೀನಿನಲ್ಲಿ ಗಿಡ ಮರಗಳಿದ್ದವು. ಇವುಗಳನ್ನ ತೆರವು ಗೊಳಿಸಿದ್ದಾರೆ ಎಂದು ಪ್ರತಿಭಟನೆ ಮಾಡಿದ್ದಾರೆ.
ಇದು ತಿಳಿಯುತ್ತಿದ್ದಂತೆ ತಕ್ಷಣವೇ ಎಚ್ಚೆತ್ತುಕೊಂಡ ಬಳ್ಳಾರಿ ಜಿಲ್ಲಾಡಳಿತ, ಹಂಪಿ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ಲೋಕೇಶ್ ಎಂಬುವವರನ್ನ ಈ ಪ್ರಕರಣದ ವಿಚಾರಣೆಗೆ ನೇಮಕ ಮಾಡಿದೆ. ಹರಪನಹಳ್ಳಿ ತಹಶೀಲ್ದಾರ್ ಡಾ.ನಾಗವೇಣಿ ಹಾಗೂ ಡಿಎಸ್ಪಿ ಮಲ್ಲೇಶ್ ದೊಡ್ಡಮನಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆ ಹತ್ತು ಜನ ಪ್ರಭಾವಿಗಳ ಮೇಲೆ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಸರ್ಕಾರದ ಭೂಮಿ ಬಿಟ್ಟು ಕೊಡಲು ಸಿದ್ಧರಿಲ್ಲದ ಪ್ರಭಾವಿಗಳು ಕೋರ್ಟ್ ಮೆಟ್ಟಿಲೇರಳು ಮುಂದಾಗಿದ್ದಾರೆ. ಇವರಿಗೆ ಇನ್ನಷ್ಟು ಪ್ರಭಾವಿಗಳ ಬೆಂಬಲವಿದೆ ಎಂಬ ವದಂತಿಗಳು ಕೂಡಾ ಕೇಳಿ ಬರುತ್ತಿವೆ.
Published On - 12:05 pm, Thu, 4 June 20