ಇನ್ನು ಯಶವಂತಪುರ-ಶಿವಮೊಗ್ಗ ರೈಲು ಪ್ರಯಾಣಿಕರೂ ವಿಸ್ಟಾಡೋಮ್ ಕೋಚ್ನಲ್ಲಿ ಪ್ರಯಾಣಿಸಬಹುದು: ಡಿ.25ರಿಂದಲೇ ಆರಂಭ
ಬೆಂಗಳೂರನಿಂದ ಹೊರಡುವ ಯಶವಂತಪುರ -ಶಿವಮೊಗ್ಗ ಇಂಟರ್ಸಿಟಿ ಎಕ್ಸ್ಪ್ರೆಸ್ನ ಎರಡು ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಇರುವ ವಿಸ್ಟಾಡೋಮ್ ಕೋಚ್ ಅಳವಡಿಸಲು ನಿರ್ಧರಿಸಿದೆ.

ನೈರುತ್ಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಶವಂತರಪುರದಿಂದ ಶಿವಮೊಗ್ಗಕ್ಕೆ ತೆರಳುವ ಎರಡು ರೈಲಿಗೆ ಎಸಿ ವಿಸ್ಟಾಡೋಮ್ ಕೋಚ್ ಅಳವಡಿಸಲು ನಿರ್ಧರಿಸಿದೆ. ಬೆಂಗಳೂರಿನಿಂದ ಹೊರಡುವ ಯಶವಂತಪುರ -ಶಿವಮೊಗ್ಗ ಇಂಟರ್ಸಿಟಿ ಎಕ್ಸ್ಪ್ರೆಸ್ನ ಎರಡು ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಇರುವ ವಿಸ್ಟಾಡೋಮ್ ಕೋಚ್ ಅಳವಡಿಸಲು ನಿರ್ಧರಿಸಿದೆ. ಈ ಕುರಿತು ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
16579 ಸಂಖ್ಯೆಯ ಯಶವಂತಪುರದಿಂದ ಶಿವಮೊಗ್ಗಕ್ಕೆ ಹೋಗುವ ರೈಲಿಗೆ ಒಂದು ಎಸಿ ಇರುವ ವಿಸ್ಟಾಡೋಮ್ ಕೋಚ್ ಅಳವಡಿಸುತ್ತಿದೆ. ಡಿಸೆಂಬರ್ 25ರಿಂದ 2022ರ ಮಾರ್ಚ್ 31ರವರೆಗೆ ಈ ವಿಸ್ಟಾಡೋಮ್ ಕೋಚ್ ಇರುವ ರೈಲು ಯಶವಂತಪುರದಿಂದ ಶಿವಮೊಗ್ಗಕ್ಕೆ ಚಲಿಸಲಿದೆ.
ಅದೇ ರೀತಿ 16580 ಸಂಖ್ಯೆಯ ಒಂದು ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲು ಡಿಸೆಂಬರ್ 25ರಿಂದ 2022ರ ಮಾರ್ಚ್ 31ರವರೆಗೆ ಶಿವಮೊಗ್ಗದಿಂದ ಯಶವಂತಪುರಕ್ಕೆ ಸಂಚರಿಸಲಿದೆ ಎಂದು ನೈರುತ್ವ ರೈಲ್ವೆ ಇಲಾಖೆ ತಿಳಿಸಿದೆ.
ವಿಸ್ಟಾಡೋಮ್ ಕೋಚ್ ನಲ್ಲಿ ಸೀಟ್ಗಳು 180 ಡಿಗ್ರಿ ಸುತ್ತಳತೆಯಲ್ಲೂ ತಿರುಗುತ್ತದೆ. ರೈಲಿನಲ್ಲಿ ಕುಳಿತ ಪ್ರಯಾಣಿಕರಿಕೆ ಸುತ್ತಲೂ ಇರುವ ಹಸಿರು ಪರಿಸರ, ವಾತಾವರಣವನ್ನು ಆನಂದಿಸಲು ಅನುಕೂಲವಾಗುವಂತೆ ವ್ಯವಸ್ಥೆ ಇರುತ್ತದೆ. ಪ್ರತೀ ಕೋಚ್ 44 ಆಸನಗಳನ್ನು ಹೊಂದಿದ್ದು ವಿಶಾಲವಾದ ಗ್ಲಾಸ್ನ ಕಿಟಕಿಗಳನ್ನು ಹೊಂದಿರುತ್ತದೆ.
ಈಗಾಗಲೇ ಯಶವಂತಪುರದಿಂದ ಮಂಗಳೂರಿಗೆ ಚಲಿಸುವ ರೈಲಿಗೆ ವಿಸ್ಟಾಡೋಮ್ ಕೋಚ್ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಸುಂದರ ಪ್ರಕೃತಿಯನ್ನು ಆಸ್ವಾದಿಸುತ್ತಾ ಪ್ರಯಾಣ ಮಾಡಬಹುದಾಗಿದೆ.
ಇದನ್ನೂ ಓದಿ:
ಬೆಂಗಳೂರು: ಹೆಬ್ಬಾಳದ ಮಸೀದಿ ಬಳಿ ಸಿಲಿಂಡರ್ ಸ್ಫೋಟ; ಯಾವುದೇ ಪ್ರಾಣಾಪಾಯವಾಗಿಲ್ಲ- ಘಟನೆಯ ವಿಡಿಯೋ ಇಲ್ಲಿದೆ
Published On - 3:59 pm, Fri, 24 December 21