ಮೈಸೂರು ದಸರಾದಲ್ಲೂ ಧರ್ಮ ದಂಗಲ್: ಗುಂಬಜ್ ಮಾದರಿಯ ದೀಪಾಲಂಕಾರಕ್ಕೆ ಅಪಸ್ವರ

ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ಪ್ರತೀ ವರ್ಷದಿಂತೆ ಈ ಬಾರಿಯೂ ಕೆಲ ವಿವಾದಗಳು ಹುಟ್ಟುಕೊಂಡಿದ್ದವು. ಇದೀಗ ದಸರಾ ಉದ್ಘಾಟನೆಗೂ ಮುನ್ನ ಧರ್ಮ ದಂಗಲ್ ಶುರುವಾಗಿದೆ. ಮೈಸೂರಿನಲ್ಲಿ ಗುಂಬಜ್ ಮಾದರಿ ದೀಪಾಲಂಕಾರಕ್ಕೆ ಮಾಜಿ ಸಂಸದ ಪ್ರತಾಪ್​ ಸಿಂಹ ಅಪಸ್ವರ ಎತ್ತಿದ್ದಾರೆ.

ಮೈಸೂರು ದಸರಾದಲ್ಲೂ ಧರ್ಮ ದಂಗಲ್: ಗುಂಬಜ್ ಮಾದರಿಯ ದೀಪಾಲಂಕಾರಕ್ಕೆ ಅಪಸ್ವರ
ಮೈಸೂರು ದಸರಾದಲ್ಲೂ ಧರ್ಮ ದಂಗಲ್: ಗುಂಬಜ್ ಮಾದರಿಯ ದೀಪಾಲಂಕಾರಕ್ಕೆ ಅಪಸ್ವರ
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Oct 02, 2024 | 10:24 PM

ಮೈಸೂರು, ಅಕ್ಟೋಬರ್​ 02: ವಿಶ್ವವಿಖ್ಯಾತ ದಸರಾ (Dasara) ಬಂದರೆ ಸಾಕು ಮೈಸೂರಿನಲ್ಲಿ‌ ಒಂದಿಲ್ಲೊಂದು ವಿಚಾರಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚೆಗಷ್ಟೇ ಮಹಿಷಾ ದಸರಾ ಸಂಘರ್ಷವಾಗಿತ್ತು. ಅದು ಮುಗಿಯಿತು ಎನ್ನುವಷ್ಟರಲ್ಲಿ ಇದೀಗ ಧರ್ಮ ದಂಗಲ್​ ಶುರುವಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಗುಂಬಜ್ ಮಾದರಿ ದೀಪಾಲಂಕಾರದ ಬಗ್ಗೆ ಮಾಜಿ ಸಂಸದ ಪ್ರತಾಪ್​ ಸಿಂಹ ಅಪಸ್ವರ ಎತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರತಾಪ್​ ಸಿಂಹ, ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಅಳವಡಿಸಿರುವ ಹಸಿರು ಚಪ್ಪರದ ದೀಪಾಲಂಕಾರದ ಭಾವಚಿತ್ರ ಹಾಕಿ ಬದಲಾಯಿಸಲು ಹೇಳಿದ್ದೇನೆ ಎಂದು ಹೇಳಿದ್ದಾರೆ.

ಪ್ರತಾಪ್​ ಸಿಂಹ ಟ್ವೀಟ್​ 

ಪ್ರತಿ ವರ್ಷ ಸಯ್ಯಾಜಿರಾವ್ ರಸ್ತೆಯಲ್ಲಿ ಚೆಸ್ಕಾಂನಿಂದ ಹಸಿರು ಚಪ್ಪರ ಅಳವಡಿಸಲಾಗುತ್ತದೆ. ನಾಳೆ ಸಂಜೆ ಸಚಿವ ಕೆ ಜೆ ಜಾರ್ಜ್‌ ಅವರು ಇಲ್ಲಿಂದಲೇ‌ ದೀಪಾಲಂಕಾರ ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ: ಸಿಡಿಮದ್ದು ತಾಲೀಮಿನ ವೇಳೆ ಬೆಚ್ಚಿದ ಹಿರಣ್ಯ ಆನೆ, ಮಾವುತನ ಸಾಹಸದಿಂದ ತಪ್ಪಿದ ಅನಾಹುತ

ಇನ್ನು ಇತ್ತೀಚೆಗೆ ಮಹಿಷಾ ದಸರಾ ಆಚರಣೆಯಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಬಿಜೆಪಿ ನಾಯಕರು ವಿರೋಧಿಸಿದ್ದ ಕಾರಣಕ್ಕೆ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗೇ ಮೈಸೂರಿನ ಟೌನ್‌ಹಾಲ್‌ ಹೊರತುಪಡಿಸಿ ಉಳಿದೆಡೆ 144 ಸೆಕ್ಷನ್‌ ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ: ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ​ ಅವರಿಗೆ ಸಚಿವ ಹೆಚ್​ಸಿ ಮಹದೇವಪ್ಪರಿಂದ ಅಧಿಕೃತ ಆಹ್ವಾನ

ಟೌನ್‌ಹಾಲ್‌ನಲ್ಲೇ ಬುದ್ಧ, ಅಂಬೇಡ್ಕರ್‌, ಮಹಿಷಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಆಯೋಜಕರು, ಬಳಿಕ ಆಡಿದ ಮಾತುಗಳು ವಿವಾದದ ಕಿಡಿ ಹೊತ್ತಿಸಿದೆ. ಮಾಜಿ ಮೇಯರ್‌ ಪುರುಷೋತ್ತಮ್‌, ನಾಡಹಬ್ಬ ದಸರಾ ಆಚರಿಸಲು ಬಿಡಲ್ಲ. ದಸರಾಗೆ ಕೆಟ್ಟ ಹೆಸರು ತರಬೇಕು ಅನ್ನೋ ಮೂಲಕ ಕಿಡಿ ಹೊತ್ತಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:11 pm, Wed, 2 October 24