ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರಿಗೆ ಜಾಮೀನು: ತನಗೂ ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್​

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ನೂರಕ್ಕೂ ಹೆಚ್ಚು ದಿ‌ನಗಳು ಕಳೆದಿವೆ. ಈಗಲಾದರೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ದರ್ಶನ್ ಇದ್ದಾರೆ. ಇದೇ ಅ. 4ರಂದು ಕೋಟ್೯ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ ಜೈಲು ಭವಿಷ್ಯ ನಿರ್ಧಾರವಾಗಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರಿಗೆ ಜಾಮೀನು: ತನಗೂ ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್​
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರಿಗೆ ಜಾಮೀನು: ತನಗೂ ಜಾಮೀನು ಸಿಗವ ನಿರೀಕ್ಷೆಯಲ್ಲಿ ದರ್ಶನ್​
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 02, 2024 | 10:05 PM

ಬಳ್ಳಾರಿ, ಅಕ್ಟೋಬರ್​ 02: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ (Darshan) ಜಾಮೀನಿನ ದೊಡ್ಡ ಟೆನ್ಷನ್‌ ಆಗಿದೆ. ಪದೇ ಪದೇ ನ್ಯಾಯಾಂಗ ಬಂಧನ ಮುಂದುಡಿಕೆ, ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಿಂದ ದಾಸ ಜೈಲಲ್ಲಿ ಹೈರಾಣಾಗಿದ್ದಾರೆ. ಈಗ 17 ಆರೋಪಿಗಳ ಪೈಕಿ ಮೂರವರಿಗೆ ಜಾಮೀನು ಸಿಕ್ಕಿದ್ದು ದರ್ಶನ್‌ಗೆ ಸ್ವಲ್ಪ ನಿರಾಳ ತಂದಿದೆ. ತನಗೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

17 ಆರೋಪಿಗಳ ಪೈಕಿ ಮೂವರಿಗೆ ಜಾಮೀನು: ದರ್ಶನ್​ಗೆ ಕೊಂಚ ನಿರಾಳ

ಇದೇ ತಿಂಗಳು 4 ನೇ ತಾರೀಖು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ಸಿಗವ ನಿರೀಕ್ಷೆಯಲ್ಲಿದ್ದಾರೆ. ಇದೇ ವಿಚಾರವಾಗಿ ಇಂದು ಫೋನ್​ನಲ್ಲಿ ಪತ್ನಿಯೊಂದಿಗೆ ಮಾತನಾಡಿರುವ ದರ್ಶನ್, ಜಾಮೀನು ವಿಚಾರವಾಗಿ ಏನ ಅಪ್ಡೇಟ್ ಇದೆ, ವಕೀಲರ ಕೆಲಸ ಹೇಗೆ ಮಾಡುತ್ತಿದ್ದಾರೆ? ಜಾಮೀನು ಸಿಗಬಹುದಾ ಅನ್ನೊ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ವಿಜಯಲಕ್ಷ್ಮಿ ಖಂಡಿತ ನಾಲ್ಕನೇ ತಾರೀಖು ಜಾಮೀನು ಸಿಕ್ಕೆ ಸಿಗುತ್ತೆ, ತಾಯಿ ಚಾಮುಂಡೇಶ್ವರಿಯನ್ನ ನಂಬಿದ್ದೇನೆ. ನೀವು ಧೈರ್ಯವಾಗಿರಿ ಎಂದಿದ್ದಾರೆ. ಪತ್ನಿಯೊಂದಿಗೆ ಫೋನ್​ನಲ್ಲಿ ಮಾತನಾಡಿದ ಬಳಿಕ ರಿಲ್ಯಾಕ್ಸ್ ಮೂಡಲ್ಲಿರುವ ದಾಸ, ಜೈಲಿನಲ್ಲಿ ಪುಸ್ತಕ ಓದುತ್ತಾ ಕುಳಿತುಕೊಂಡಿದ್ದಾರೆ.

ಇದನ್ನೂ ಓದಿ: ಮನಸ್ಸು ಬದಲಿಸಿ ಟಿವಿ ಬೇಕು ಎಂದ ದರ್ಶನ್; ಹೆಚ್ಚಿತು ಚಾರ್ಜ್​ಶೀಟ್ ಆತಂಕ

ಜಾಮೀನು ಅರ್ಜಿ ವಿಚಾರಣೆ ನಡೆಯುವ ಬಗ್ಗೆ ಪತ್ನಿಯೊಂದಿಗೆ ಮಾತನಾಡಿದ ದರ್ಶನ್, ಮೂವರಿಗೆ ಜಾಮೀನು ಸಿಕ್ಕಿರುವ ಬಗ್ಗೆಯೂ ವಿಚಾರಿಸಿದ್ದಾರೆ. ಯಾರೆಲ್ಲ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಯಾವ ಹಂತದಲ್ಲಿ ಜಾಮೀನು ಅರ್ಜಿ ವಿಚಾರಣೆಗಳಿವೆ, ಈ ಎಲ್ಲದರ ಬಗ್ಗೆ ದರ್ಶನ್ ಮಾಹಿತಿ ಪಡೆದಿದ್ದಾರೆ. ಜೊತೆಗೆ ತನ್ನ ಜಾಮೀನು ವಿಚಾರ ಎಲ್ಲಿಗೆ ಬಂತು ಅನ್ನೊದರ ಬಗ್ಗೆಯು ತಿಳಿದುಕೊಂಡಿದ್ದಾರೆ.

ಇನ್ನು ಜಾಮೀನು ಸಿಗುವ ಭರವಸೆ ಬಗ್ಗೆ ಪತ್ನಿ ಮಾತನಾಡುತ್ತಿದ್ದಂತೆ ತನ್ನ ಸೆಲ್‌ಗೆ ಬಂದು ರಿಲ್ಯಾಕ್ಸ್ ಆಗಿದ್ದು, ಜೈಲು ಸಿಬ್ಬಂದಿಯೊಂದಿಗೆ ನಗು ಮುಖದಲ್ಲಿ ಮಾತನಾಡಿದ್ದಾರೆ. ಇನ್ನು ನಿತ್ಯವು ಅದು ಬೇಕು, ಇದು ಬೇಕು ಎನ್ನುತ್ತುದ್ದ ದರ್ಶನ್ ಇವತ್ತು ಏನು ಕೇಳದೆ ಸುಮ್ಮನೆ ಸೆಲ್‌ನಲ್ಲಿದ್ದಾರೆ. ದಿಂಬು, ಬೆಡ್​ಗಾಗಿ ದಿನವು ಕಿರಿಕಿರಿ ಮಾಡುತ್ತಿದ್ದ ದರ್ಶನ್ ಇವತ್ತು ಸುಮ್ಮನೆ ಮಲಗಿದ್ದಾರೆ. ಜಾಮೀನು ಸಿಕ್ಕೆ ಸಿಗುತ್ತೆ ಅನ್ನೊ ಭರವಸೆ ದರ್ಶನ್‌ಗೆ ಇದ್ದಿದ್ದರಿಂದ ಯಾವುದನ್ನು ಕೇಳದೆ ಸುಮ್ಮನಿದ್ದಾರೆ.

ಇದನ್ನೂ ಓದಿ: ಪತಿಯನ್ನು ನೋಡಲು ಮೂರು ಬ್ಯಾಗ್ ಸಾಮಾನುಗಳೊಂದಿಗೆ ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ನೂರಕ್ಕೂ ಹೆಚ್ಚು ದಿ‌ನಗಳು ಕಳೆದಿವೆ. ಈಗಲಾದರೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ದರ್ಶನ್ ಇದ್ದಾರೆ. ಇದೇ ಅ. 4ರಂದು ಕೋಟ್೯ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ಸಿಗುತ್ತಾ ಅಥವಾ ಜೈಲೆ ಗತಿಯಾಗುತ್ತಾ ಅನ್ನೊದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:28 pm, Wed, 2 October 24

‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್