ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್​​ಗೂ ನಂಟು?: ಸಭೆ ನಡೆಸಿ ಖಾಕಿ ಖಡಕ್​​ ಕ್ಲಾಸ್​​; ಏನೆಲ್ಲ ಎಚ್ಚರಿಕೆ?

ಹುಬ್ಬಳ್ಳಿ-ಧಾರವಾಡದಲ್ಲಿ ಜಿಮ್‌ಗಳಿಗೆ ಲವ್ ಜಿಹಾದ್ ಪ್ರಕರಣಗಳ ನಂಟು ಆರೋಪದ ಬೆನ್ನಲ್ಲೇ, ಪೊಲೀಸ್ ಆಯುಕ್ತರು ಜಿಮ್ ಮಾಲೀಕರು ಮತ್ತು ತರಬೇತುದಾರರ ಸಭೆ ನಡೆಸಿದ್ದಾರೆ. ಸಿಸಿಟಿವಿ ಅಳವಡಿಕೆ, ತರಬೇತುದಾರರ ಹಿನ್ನೆಲೆ ಪರಿಶೀಲನೆ, ಸದಸ್ಯರ ಮೊಬೈಲ್ ಸಂಪರ್ಕ ನಿಷೇಧ ಸೇರಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದು, ಜಿಮ್ ಸುರಕ್ಷತೆಗೆ ಒತ್ತು ನೀಡಲಾಗಿದೆ.

ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್​​ಗೂ ನಂಟು?: ಸಭೆ ನಡೆಸಿ ಖಾಕಿ ಖಡಕ್​​ ಕ್ಲಾಸ್​​; ಏನೆಲ್ಲ ಎಚ್ಚರಿಕೆ?
ಜಿಮ್​​ಗಳ ಮಾಲೀಕರು ಮತ್ತು ಟ್ರೈನರ್​​ಗಳ ಜೊತೆ ಪೊಲೀಸ್​​ ಆಯುಕ್ತರ ಸಭೆ
Image Credit source: Tv9 Kannada
Edited By:

Updated on: Apr 10, 2026 | 3:47 PM

ಹುಬ್ಬಳ್ಳಿ, ಏಪ್ರಿಲ್​​ 10: ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿಬರುತ್ತಿರುವ ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್​​ಗೂ ನಂಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಮ್ ಮಾಲೀಕರು ಮತ್ತು ಟ್ರೈನರ್​​ಗಳ ಜೊತೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆ ನೀಡಿದ್ದಾರೆ. ಮತ್ತೊಂದಡೆ ಯಾರಾದರೂ ಜಿಮ್​​ಗಳಲ್ಲಿ ಬೇರೆ ಕೆಲಸ ಮಾಡಿದ್ರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಮಾಲೀಕರಿಂದಲೂ ವ್ಯಕ್ತವಾಗಿದೆ.

ಲವ್ ಜಿಹಾದ್ ಆರೋಪ ಹೊಂದಿರೋ ಸಮೀರ್ ಮುಲ್ಲಾಜಿಮ್ ಟ್ರೈನರ್ ಆಗಿದ್ದ. ಮತ್ತೊಂದು ಪ್ರಕರಣದ ಆರೋಪಿ  ಮುಪಿಜ್ ಕೂಡಾ ಸಮೀರ್ ಇದ್ದ ಜಿಮ್​​ಗೆ ಹೋಗ್ತಿದ್ದ ವ್ಯಕ್ತಿ. ಅಲ್ಲದೆ ಈ ಹಿಂದೆ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣ ಆರೋಪಿ ಫಯಾಜ್ ಕೂಡ ಇದೇ ಜಿಮ್​​ಗೆ ಹೋಗುತ್ತಿದ್ದವ. ಇವುಗಳ ಜೊತೆ ಜಿಮ್ ಗೆ ಹೋಗ್ತಿದ್ದ ಯುವತಿ ಜೊತೆ ಮುಸ್ಲಿಂ ಟ್ರೈನರ್ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣ ಕೂಡ ಧಾರವಾಡಲ್ಲಿ ನಡೆದಿತ್ತು. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿನ ಕೆಲ ಜಿಮ್​​ಗಳು ಲವ್ ಜಿಹಾದ್ ಅಡ್ಡಗಳಾಗುತ್ತಿವೆ ಎಂದು ಹಿಂದೂಪರ ಸಂಘಟನೆಗಳು ದೂರಿದ್ದವು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಅವಳಿ ನಗರದ ಎಲ್ಲಾ ಜಿಮ್ ಮಾಲೀಕರು ಮತ್ತು ಟ್ರೈನರ್​​ಗಳ ಜೊತೆ ಸಭೆ ನಡೆಸಿದ್ದಾರೆ. ನಗರದ ಬಿವಿಬಿ ಕಾಲೇಜು ಕ್ಯಾಂಪಸ್​​ನ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಜಿಮ್ ಟ್ರೈನರ್​​ಗಳು ಮತ್ತು ಜಿಮ್ ಮಾಲೀಕರು ಭಾಗಿಯಾಗಿದ್ದರು.

ಇದನ್ನೂ ಓದಿ: ಪ್ರೇಮ ಸಂಬಂಧವೋ? ಲವ್​​ ಜಿಹಾದೋ?; ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?

ಪೊಲೀಸ್​​ ಆಯುಕ್ತರ ಸೂಚನೆಗಳೇನು?

  • ಕಡ್ಡಾಯವಾಗಿ ಎಲ್ಲಾ ಜಿಮ್​​ಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಕಬೇಕು
  • ಟ್ರೈನರ್​​ಗಳ ಪೂರ್ವಾಪರಗಳನ್ನು ವಿಚಾರಿಸಬೇಕು
  • ಜಿಮ್​​ಗೆ ಬರುವವರಿಗೆ ಟ್ರೈನರ್​​ಗಳ ಹಿನ್ನೆಲೆ ತಿಳಿಸಬೇಕು
  • ಜಿಮ್​​ಗೆ ಬರುವವರ ಮೊಬೈಲ್​​ ಸಂಖ್ಯೆ ಪಡೆದು ಟ್ರೈನರ್​​ಗಳು ಸಂಪರ್ಕ ಹೊಂದೋದನ್ನು ತಪ್ಪಿಸಬೇಕು

ಇನ್ನು ಯಾರಾದರೂ ಈ ನಿಯಮಗಳನ್ನು ಮೀರಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಕೆಲ ಜಿಮ್​​ಗಳಲ್ಲಿ ನಡೆದಿರೋ ಘಟನೆಗಳಿಂದ ಎಲ್ಲ ಜಿಮ್​​ಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಇದರಿಂದ ಹೆಚ್ಚಿನ ಪಾಲಕರು ಜಿಮ್​​ಗಳಿಗೆ ಮಕ್ಕಳನ್ನು ಕಳುಹಿಸಲು ಭಯ ಪಡ್ತಿದ್ದಾರೆ. ಹೀಗಾಗಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜಿಮ್​​ಗಳ ಮಾಲೀಕರೂ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us