AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಕ್ರೋ ಫೈನಾನ್ಸ್​ ಕಿರುಕುಳ: ಗರ್ಭಿಣಿ ಅಂತ ನೋಡದೆ ಮನೆಯಿಂದ ಹೊರಹಾಕಿದ ಸಿಬ್ಬಂದಿ

ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಯಲ್ಲಿ, ಎಕ್ವಾಟಿಸ್ ಸ್ಮಾಲ್ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದ ಮಕ್ತುಂಸಾಬ್ ಅವರ ಮನೆಯಿಂದ ಗರ್ಭಿಣಿ ಮಹಿಳೆ ರೇಷ್ಮಾ ಜಮಾದಾರರನ್ನು ಸೇರಿದಂತೆ ಎಲ್ಲರನ್ನು ಸಿಬ್ಬಂದಿ ಹೊರಹಾಕಿದ್ದಾರೆ. 40,000 ರೂಪಾಯಿ ಸಾಲಕ್ಕೆ 1.50 ಲಕ್ಷ ರೂಪಾಯಿ ಬಡ್ಡಿ ಸೇರಿ ಕಟ್ಟಬೇಕೆಂದು ಒತ್ತಾಯಿಸಿ ಈ ಕೃತ್ಯ ಎಸಗಿದ್ದಾರೆ.

ಮೈಕ್ರೋ ಫೈನಾನ್ಸ್​ ಕಿರುಕುಳ: ಗರ್ಭಿಣಿ ಅಂತ ನೋಡದೆ ಮನೆಯಿಂದ ಹೊರಹಾಕಿದ ಸಿಬ್ಬಂದಿ
ಮೈಕ್ರೋ ಫೈನಾನ್ಸ್​ ಕಿರುಕುಳ: ಗರ್ಭಿಣಿ ಅಂತ ನೋಡದೆ ಮನೆಯಿಂದ ಹೊರಹಾಕಿದ ಸಿಬ್ಬಂದಿ
ಶಿವಕುಮಾರ್ ಪತ್ತಾರ್
| Edited By: |

Updated on: Nov 29, 2024 | 5:11 PM

Share

ಹುಬ್ಬಳ್ಳಿ, ನವೆಂಬರ್​ 29: ಸಾಲ ಮರುಪಾವತಿ ಮಾಡದ ಹಿನ್ನಲೆ ಮೈಕ್ರೋ ಫೈನಾನ್ಸ್ (Microfinance)  ಸಿಬ್ಬಂದಿ ವ್ಯಕ್ತಿಗೆ ಕಿರುಕುಳ ನೀಡಿದ್ದು, ಗರ್ಭಿಣಿಯನ್ನು ಮನೆಯಿಂದ ಹೊರಹಾಕಿರುವಂತಹ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ. ಊಟ, ಮಾತ್ರೆ ಇಲ್ಲದೆ ಗರ್ಭಿಣಿ ಕುಸಿದು ಬಿದಿದ್ದಾರೆ. ಸದ್ಯ ಸಂಬಂಧಿಕರು ಗರ್ಭಿಣಿಯನ್ನು ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಕ್ವಾಟಿಸ್ ಸ್ಮಾಲ್ ಫೈನಾನ್ಸ್​ನಿಂದ ಮಕ್ತುಂಸಾಬ್​ ಎನ್ನುವವರು 40 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಅದು ಬಡ್ಡಿ ಸೇರಿ ಇದೀಗ 1.50 ಲಕ್ಷ ರೂ. ಕಟ್ಟಬೇಕು ಎಂದು ಫೈನಾನ್ಸ್ ಸಿಬ್ಬಂದಿ ಹೇಳುತ್ತಿದ್ದಾರೆ.

ಗರ್ಭಿಣಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಫೈನಾನ್ಸ್ ಸಿಬ್ಬಂದಿಗಳು

ಇಂದು ಸಾಲ ವಸೂಲಾತಿಗೆ ಬಂದ ಸಿಬ್ಬಂದಿ ಮನೆಯಲ್ಲಿದ್ದವರನ್ನು ಹೊರಹಾಕಿದ್ದಾರೆ. ಈ ವೇಳೆ ಗರ್ಭಿಣಿ ರೇಷ್ಮಾ ಜಮಾದಾರ ಸೇರಿ ಎಲ್ಲರನ್ನೂ ಹೊರಹಾಕಿದ್ದಾರೆ. ರೇಷ್ಮಾ ಜಮಾದಾರ ಅವರ ಮಾತ್ರೆ ಕೂಡ ಕೊಡದೆ ಅಮಾನವೀಯವಾಗಿ ಫೈನಾನ್ಸ್ ಸಿಬ್ಬಂದಿಗಳು ನಡೆದುಕೊಂಡಿದ್ದಾರೆ. ಬೆಳಗ್ಗೆ ಇಂದ ಊಟ, ಮಾತ್ರೆ ಕೊಡದೆ ಗರ್ಭಿಣಿ ಮಹಿಳೆ ರೇಷ್ಮಾ ಜಮಾದಾರಗೆ ಕಿರುಕುಳ ನೀಡಿದ್ದಾರೆ. ಸದ್ಯ ಸಿಬ್ಬಂದಿ ಪೊಲೀಸರೊಂದಿಗೆ ಬಂದು ಮನೆ ಸೀಜ್ ಮಾಡಿದ್ದಾರೆ.

ಮುಗ್ದ ಜನರ ಜೀವ ಹಿಂಡುತ್ತಿದೆ ಮೈಕ್ರೋ ಫೈನಾನ್ಸ್

ರಾಜ್ಯಾದ್ಯಂತ ಮೈಕ್ರೋಪೈನಾನ್ಸ್ ಹಾಗೂ ಮಹಿಳಾ ಕಿರುಸಾಲದ ಹೆಸರಲ್ಲಿ ಹುಟ್ಟಿಕೊಂಡಿರುವ ಸಂಘಗಳು ಮಹಿಳೆಯರ ಮಾನ ಹರಾಜಿಗಿಟ್ಟಿವೆ. ಇದಕ್ಕೆ ಸಾಕ್ಷಿ ಎಂಬಂತೆ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಮಹಿಳೆಯರು ಪ್ರತಿಭಟನೆ ಮಾಡಿದ್ದರು. ಹಳ್ಳಿಗಳಲ್ಲಿ ಬಂದು ಹತ್ತು ಜನರ ಗುಂಪು ಕಟ್ಟಿ ಫೈನಾನ್ಸ್ ಸಿಬ್ಬಂದಿ ಅವರೇ ಸ್ವತ ಸಾಲ ನೀಡಿ ಬದುಕು ಕಟ್ಟಿಕೊಳ್ಳಿ ಅಂತ ಒತ್ತಡ ಹೇರಿ ಸಾಲ ನೀಡುತ್ತಾರೆ. ಬಳಿಕ ಸಾಲ ವಸೂಲಿ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡ್ತಿರುವ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಸಾಲ ಪಡೆದಿದ್ದ ವ್ಯಕ್ತಿಗೆ ನಗ್ನ ಚಿತ್ರ ಹರಿಬಿಡುವ ಬೆದರಿಕೆ: ಕಿರುಕುಳಕ್ಕೆ ನೊಂದು ಕ್ಯಾಮರಾಮನ್‌ ಆತ್ಮಹತ್ಯೆ

ಸೂರ್ಯ ಉದಯಿಸುವ ಮೊದಲೇ ಮನೆ ಬಾಗಿಲಿಗೆ ಬಂದು ನಿಲ್ಲುವ ಫೈನಾನ್ಸ್ ಸಿಬ್ಬಂದಿ ಸಾಲ ಕಟ್ಟದಿದ್ದರೇ ಬಾಗಿಲಲ್ಲೇ ನಿಂತು ಅವಾಚ್ಯವಾಗಿ ನಿಂದಿಸ್ತಿದ್ದಾರೆಂದು ಮಹಿಳೆಯರು ದೂರಿದ್ದರು. ಅಲ್ಲದೆ ಕೆಲ ಮಹಿಳೆಯರಿಗೆ ಶೌಚಾಲಯಕ್ಕೂ ಬಿಡದೇ ಕಾಟ ಕೊಟ್ಟಿದ್ದರು. ಮಹಿಳೆಯೊಬ್ಬರು ಮೂತ್ರ ವಿಸರ್ಜನೆಗೆ ಹೋದಾಗಲೂ ಹಿಂದೆ ಬಂದು ನಿಲ್ತಾರೆ ಅಂತ ಮಹಿಳೆಯರು ಕಿರುಸಾಲ ಸಂಘದ ವಸೂಲಿದಾರರ ವಿರುದ್ಧ ಆರೋಪ ಮಾಡಿ, ಆಕ್ರೋಶ ಹೊರ ಹಾಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.