Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಉಪ ಚುನಾವಣೆ 2024: ಪಕ್ಷದ ವಿರುದ್ಧ ಬಂಡಾಯವೆದಿದ್ದ ಖಾದ್ರಿಗೆ ಹೆಸ್ಕಾಂ ಪಟ್ಟ

ಅಜ್ಜಂಪೀರ್ ಖಾದ್ರಿಗೆ ಸರ್ಕಾರ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ. ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರು. ಮುಖಂಡರ ಮನವೊಲಿಕೆಯಿಂದ ನಾಮಪತ್ರ ವಾಪಸ್ ಪಡೆದಿದ್ದರು.

ಕರ್ನಾಟಕ ಉಪ ಚುನಾವಣೆ 2024: ಪಕ್ಷದ ವಿರುದ್ಧ ಬಂಡಾಯವೆದಿದ್ದ ಖಾದ್ರಿಗೆ ಹೆಸ್ಕಾಂ ಪಟ್ಟ
ಅಜ್ಜಂಪೀರ್ ಖಾದ್ರಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on: Nov 29, 2024 | 10:11 AM

ಹುಬ್ಬಳ್ಳಿ, ನವೆಂಬರ್​ 29: ​ನಾಯಕರ ಮನವೊಲಿಕೆ ನಂತರ ಶಿಗ್ಗಾಂವಿ (Shiggaon) ಉಪ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ್ದಿದ್ದ ಅಜ್ಜಂಪೀರ್​ ಖಾದ್ರಿಗೆ (Syed Azeempeer Khadri) ಕರ್ನಾಟಕ ಸರ್ಕಾರ ಹುಬ್ಬಳ್ಳಿ ವಿದ್ಯುತ್​​ ಸರಬರಾಜು ನಿಗಮ ನಿಯಮಿತದ (HESCOM) ಅಧ್ಯಕ್ಷ ಸ್ಥಾನ ನೀಡಿದೆ. ಅಜ್ಜಂಪೀರ್​ ಖಾದ್ರಿ ಶುಕ್ರವಾರ (ನ.29) ಮಧ್ಯಾಹ್ನ 3 ಗಂಟೆಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಅಧಿಕಾರ ಸ್ವೀಕಾರ ಕಾರ್ಯಕ್ರಮ ಹುಬ್ಬಳ್ಳಿ ಹೆಸ್ಕಾಂ ಕಚೇರಿಯಲ್ಲಿ ನಡೆಯಲಿದೆ. ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಶಿಗ್ಗಾಂವಿ ಕ್ಷೇತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸಚಿವ ಸತೀಶ್ ಜಾರಕಿಹೊಳಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಜಮೀರ್ ಅಹ್ಮದ್​​ ಹು-ಧಾರವಾಡದ ಸ್ಥಳೀಯ ಕಾಂಗ್ರೆಸ್​ ಶಾಸಕರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಯಾರು ಈ ಅಜ್ಜಂಪೀರ್​ ಖಾದ್ರಿ

ಕಳೆದ ಎರಡು ದಶಕಗಳಿಂದ ರಾಜಕೀಯದಲ್ಲಿರುವ ಅಜ್ಜಂಪೀರ್​ ಖಾದ್ರಿ 1999ರಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಶಿಗ್ಗಾಂವಿಯಲ್ಲಿ ವಿಜಯಪತಾಕೆ ಹಾರಿಸಿದ್ದರು. ನಂತರ 2008 ರಿಂದ 2023ರವೆಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್​ ಪಕ್ಷದಿಂದ ಸತತವಾಗಿ ಸ್ಪರ್ಧಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಬಸವರಾಜ ಬೊಮ್ಮಾಯಿ ರಾಜಿನಾಮೆಯಿಂದ ತೆರವಾದ ಶಿಗ್ಗಾಂವಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು.

ಇದನ್ನೂ ಓದಿ: ಟಿಕೆಟ್ ಸಿಗಲಿಲ್ಲವೆಂಬ ಬೇಸರವಿತ್ತು, ಆದರೆ ಪಠಾಣ್ ಗೆಲುವು ಸಂತಸ ತಂದಿದೆ: ಅಜ್ಜಂಪೀರ್ ಖಾದ್ರಿ

ಬಂಡಾಯವೆದಿದ್ದ ಅಜ್ಜಂಪೀರ್​ ಖಾದ್ರಿ

ಈ ಉಪ ಚುನಾವಣೆಯಲ್ಲಿ ಟಿಕೆಟ್​ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್​ ಖಾದ್ರಿ ಅವರಿಗೆ ಕಾಂಗ್ರೆಸ್​ ಪಕ್ಷ ಟಿಕೆಟ್​ ನೀಡಲಿಲ್ಲ. ಬದಲಿಗೆ ಯಾಸಿರ್​ ಅಹ್ಮದ್​ಖಾನ್​ ಪಠಾಣ್​ ಅವರಿಗೆ ಮಣೆ ಹಾಕಿದೆ. ಪಕ್ಷದ ನಿರ್ಧಾರದಿಂದ ಬೇಸರಗೊಂಡು ಬಂಡಾಯವೆದಿದ್ದ ಅಜ್ಜಂಪೀರ್​ ಖಾದ್ರಿ ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾದರು ಮತ್ತು ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದರು.

ಇದು ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿತ್ತು. ಅಜ್ಜಂಪೀರ್​ ಖಾದ್ರಿ ಪಕ್ಷೇತರ ಸ್ಪರ್ಧೆಯಿಂದ ಮತಗಳು ವಿಭಜನೆಯಾಗಲಿವೆ. ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಅರಿತ ರಾಜ್ಯ ನಾಯಕರು ಅಜ್ಜಂಪೀರ್​ ಖಾದ್ರಿಯ ಮನವೊಲಿಕೆಗೆ ಸಚಿವ ಜಮೀರ್​ ಅಹ್ಮದ್​ ಖಾನ್​ ಅವರನ್ನು ಕಳುಹಿಸಿದರು.

ಸಚಿವ ಜಮೀರ್​ ಅಹ್ಮದ್​ ಅವರು ಅಜ್ಜಂಪೀರ್​ ಖಾದ್ರಿಯನ್ನು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸುವ ಮೂಲಕ ಸಮಾಧಾನ ಮಾಡುವಲ್ಲಿ ಯಶಸ್ವಿಯಾದರು. ರಾಜ್ಯ ನಾಯಕರ ಸೂಚನೆಯಂತೆ ನಾಮಪತ್ರ ವಾಪಸ್​ ಪಡೆದರು. ಇದೀಗ ಅವರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಒಲಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ