ಸೆಪ್ಟೆಂಬರ್ 19 ಗುರುವಾರ ಧಾರವಾಡದ ಹಲವು ಪ್ರದೇಶಗಳಲ್ಲಿ ಪವರ್ ಕಟ್
ಧಾರವಾಡದಲ್ಲಿ ಗುರುವಾರ (ಸೆ.19) ರಂದು ಕೆಪಿಟಿಸಿಎಲ್ 2ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಸಿದೆ.
ಧಾರವಾಡ, ಸೆಪ್ಟೆಂಬರ್ 18: ನಗರದ ಕೆಯುಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಗುರುವಾರ (ಸೆ.19) ರಂದು 2ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ. ಹೀಗಾಗಿ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲ 11 ಕೆವಿ ಮಾರ್ಗಗಳಲ್ಲಿ ಸೆ.19ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ.
ಪವರ್ ಕಟ್ ಆಗುವ ಪ್ರದೇಶಗಳು
ನೆಹರು ನಗರ, ಬಸವ ನಗರ, ಹೊಯ್ಸಳ ನಗರ, ಕಲ್ಯಾಣ ನಗರ, ವಿಜಯಾನಂದ ನಗರ, ಶ್ರೀನಗರ, ಮಹಾಂತ ನಗರ, ಮಂಜುನಾಥ ಕಾಲೊನಿ, ಕೆಲಗೇರಿ ರೋಡ, ಶಿವಶಕ್ತಿ ನಗರ, ಶಾಂತಿನಿಕೇತನ ನಗರ, ಪ್ರಶಾಂತ್ ನಗರ, ಸಾಧನಕೇರಿ, ಬ್ರಹ್ಮ ಚೇತನ ಪಾರ್ಕ್, ಬೇಂದ್ರೆ ಭವನ, ಶಿರಡಿ ಸಾಯಿಬಾಬಾ ಕಾಲೋನಿ, ಆಂಜನೇಯ ನಗರ, ಸಿಲ್ವರ್ ಆರ್ಚಿಡ್, ಸಾಯಿ ನಗರ, ರೆವಿನ್ಯೂ ಕಾಲೊನಿ, ಸಿಬಿ ನಗರ, ಯುಸಿಬಿ ನಗರ, ಮಿಚಿಗನ್ ಕಂಪೌಂಡ್, ಚೈತನ್ಯ ನಗರ, ಚನ್ನಬಸವೇಶ್ವರ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: Viral Video: ಮಳೆಯನ್ನೂ ಲೆಕ್ಕಿಸದೇ, ವಿದ್ಯುತ್ ಸಂಪರ್ಕ ಸರಿಪಡಿಸಿದ ಲೈನ್‌ಮ್ಯಾನ್‌ಗಳ ಕೆಲಸ ನಿಜಕ್ಕೂ ಶ್ಲಾಘನೀಯ
ಹಾಗೇ, ವಿನಾಯಕ ನಗರ, ಶಿವಗಿರಿ, ಪಾವಟೆ ನಗರ, ಕೆಯುಡಿ, ಬಾರಾಕೊಟ್ರಿ, ಡಿಸಿ ಕಂಪೌಂಡ್, ಮಾಳಮಡ್ಡಿ, ಸರೋವರ ನಗರ, ಲೋಟಸ್ ಪಾರ್ಕ್, ಸಪ್ತಾಪೂರ, ಕೆಸಿಡಿ, ಜಯ ನಗರ, ಪಾವಟೆ ನಗರ, ನವೋದಯ ನಗರ, ಸಲಕಿನಕೊಪ್ಪ, ಮುಗದ, ಬಸವೇಶ್ವರ, ರಾಮಾಪುರ, ಕ್ಯಾರಕೊಪ್ಪ, ಹುಲಕಟ್ಟಿ ಮುಗದ, ಕಲ್ಲಾಪೂರ, ಐಶ್ವರ್ಯ ಲೇಔಟ್, ಭಾವಿಕಟ್ಟಿ ಪ್ಲಾಟ್, ಕೆಲಗೇರಿ ರೋಡ್, ಮಂಜುನಾಥ ಕಾಲೋನಿ ಮತ್ತು ಕೋರ್ಟ್ ವೃತ್ತದಿಂದ ಆಲೂರು ವೆಂಕಟರಾವ್ ವೃತ್ತವರೆಗೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ