Hubballi News​: ಹಣ ಮಾಡುವ ಸ್ವಹಿತಾಸಕ್ತಿಯಿಂದ ಹುಬ್ಬಳ್ಳಿ ಪಾಲಿಕೆಯ ಸುತ್ತಮುತ್ತಲ ಹಳ್ಳಿಗಳ ಸೇರ್ಪಡೆಗೆ ಕಾರ್ಪೊರೇಟರ್​​ಗಳ ಸಂಚು! ಏನಿದು ಒಳಮಸಲತ್ತು?

Hubballi News: ಈಗಾಗಲೆ ಸೇರ್ಪಡೆ ಮಾಡೋ ಹಳ್ಳಿಗಳ ಸುತ್ತಮುತ್ತ ಪಾಲಿಕೆ ಸದಸ್ಯರು ಭೂಮಿ ಖರೀದಿ ಮಾಡಿದ್ದು ಅದನ್ನ ರಿಯಲ್ ಎಸ್ಟೇಟ್ ಮಾಡೋ ಉದ್ದೇಶಕ್ಕೆ ಮೀಸಲಿಟ್ಟಿದ್ದಾರೆ. ಕೆಲ ಸದಸ್ಯರಿಗೆ, ಅಧಿಕಾರಿಗಳಿಗೆ ಗೊತ್ತಿಲ್ಲದೆ ಆಡಳಿತ ಪಕ್ಷದ ಕೆಲ ಸದಸ್ಯರು ಪಾಲಿಕೆ ವ್ಯಾಪ್ತಿಗೆ ಹಳ್ಳಿಗಳ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟಲ ಆರೋಪಿಸಿದ್ದಾರೆ.

Hubballi News​: ಹಣ ಮಾಡುವ ಸ್ವಹಿತಾಸಕ್ತಿಯಿಂದ ಹುಬ್ಬಳ್ಳಿ ಪಾಲಿಕೆಯ ಸುತ್ತಮುತ್ತಲ ಹಳ್ಳಿಗಳ ಸೇರ್ಪಡೆಗೆ ಕಾರ್ಪೊರೇಟರ್​​ಗಳ ಸಂಚು! ಏನಿದು ಒಳಮಸಲತ್ತು?
ಹಣ ಮಾಡುವ ಸ್ವಹಿತಾಸಕ್ತಿಯಿಂದ ಹುಬ್ಬಳ್ಳಿ ಪಾಲಿಕೆಯ ಸುತ್ತಮುತ್ತಲ ಹಳ್ಳಿಗಳ ಸೇರ್ಪಡೆಗೆ ಕಾರ್ಪೊರೇಟರ್​​ಗಳ ಸಂಚು!
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಸಾಧು ಶ್ರೀನಾಥ್​

Updated on:Nov 06, 2023 | 5:31 PM

ಅದು ರಾಜ್ಯದ ಎರಡನೇ ಅತೀದೊಡ್ಡ ಮಹಾನಗರ ಪಾಲಿಕೆ. ಆ ಪಾಲಿಕೆ ನಿತ್ಯ ಒಂದಲ್ಲಾ ಒಂದು ಸುದ್ದಿಯಲ್ಲಿರತ್ತೆ. ಹೇಗೆ ದೊಡ್ಡ ಪಾಲಿಕೆಯೋ, ಅದೇ ರೀತಿ ಪಾಲಿಕೆಯಲ್ಲಿ ವಿವಾದಕ್ಕೇನೂ ಕಮ್ಮಿ ಇಲ್ಲ ಎಂಬಂತಾಗಿದೆ. ಇದೀಗ ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳ ಕಣ್ಣು ರಿಯಲ್ ಎಸ್ಟೇಟ್ (Real estate) ಮೇಲೆ ಮೇಲೆ ಬಿದ್ದಿದೆ..ಪಾಲಿಕೆ ಸುತ್ತಮುತ್ತಲಿನ ಗ್ರಾಮಗಳನ್ನು ಸೇರ್ಪಡೆಗೆ ಚಿಂತನೆ ನಡೆಸಿದ್ದು ಇದಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಜಟಾಪಟಿ ನಡೆದಿದೆ. ಹೌದು… ವಾಣಿಜ್ಯ ನಗರಿ ಹುಬ್ಬಳ್ಳಿ ಸುತ್ತಲೂ ಭೂಮಿಗೆ ಬಂಗಾರದ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಪಾಲಿಕೆ ವ್ಯಾಪ್ತಿಯ ( Hubballi Dharwad Corporation) ಗ್ರಾಮಗಳ ಸೇರ್ಪಡೆಗೆ ಚಿಂತನೆ ನಡೆಸಿದ್ದು, ವಿರೋಧ ಪಕ್ಷವು ಇದಕ್ಕೆ ವಿರೋಧ ಎತ್ತಿದೆ. ಮೊದಲೆ ಅವಳಿ ನಗರದಲ್ಲಿ ಅಭಿವೃದ್ಧಿ ಇಲ್ಲ ಅಂತಹುದರಲ್ಲಿ ಗ್ರಾಮಗಳ ಸೇರ್ಪಡೆ ಮಾಡ್ತಿದ್ದಾರೆಂದು ಚಕಾರವೆತ್ತಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬರೋಬ್ಬರಿ 51 ಕಂದಾಯ ಗ್ರಾಮಗಳ ಸೇರ್ಪಡೆಗೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ಅವಳಿ ನಗರದ ಅಭಿವೃದ್ದಿಗೇ ಅನುದಾನದ‌ ಕೊರತೆ ಎದುರಾಗಿದೆ. ಅಂತಹುದರಲ್ಲಿ ಪಾಲಿಕೆಯು ಗ್ರಾಮಗಳ ಸೇರ್ಪಡೆಗೆ ಮುಂದಾಗುತ್ತಿರೋದ್ಯಾಕೆ? ಎಂದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಗ್ರಾಮಗಳ‌ ಸೇರ್ಪಡೆ ವಿಚಾರಕ್ಕೆ ಜಟಾಪಟಿ ನಡೆದಿದೆ.

ಪಾಲಿಕೆ ತನ್ನ ಗಡಿಯನ್ನು ಹಚ್ಚಿಸಲು ಮುಂದಾಗಿದ್ದು, ಪಾಲಿಕೆಯ ಕೆಲ ಸದಸ್ಯರು ರಿಯಲ್ ಎಸ್ಟೇಟ್ ಲಾಬಿ ಮಾಡ್ತಿದ್ದು, ಅಂತಹ ಸದಸ್ಯರು ಇದೀಗ ಹಳ್ಳಿಗಳ ಸೇರ್ಪಡೆಗೆ ಬೆನ್ನು ಬಿದ್ದಿದ್ದಾರೆ. ಹುಬ್ಬಳ್ಳಿ ಸುತ್ತಮುತ್ತ ರಿಯಲ್ ಎಸ್ಟೇಟ್ ಮಾಫಿಯಾ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ಈಗಾಗಲೆ ಸೇರ್ಪಡೆ ಮಾಡೋ ಹಳ್ಳಿಗಳ ಸುತ್ತಮುತ್ತ ಪಾಲಿಕೆ ಸದಸ್ಯರು ಭೂಮಿ ಖರೀದಿ ಮಾಡಿದ್ದು ಅದನ್ನ ರಿಯಲ್ ಎಸ್ಟೇಟ್ ಮಾಡೋ ಉದ್ದೇಶಕ್ಕೆ ಮೀಸಲಿಟ್ಟಿದ್ದಾರೆ.ಕೆಲ ಸದಸ್ಯರಿಗೆ ,ಅಧಿಕಾರಿಗಳಿಗೆ ಗೊತ್ತಿಲ್ಲದೆ ಆಡಳಿತ ಪಕ್ಷದ ಕೆಲ ಸದಸ್ಯರು ಪಾಲಿಕೆ ವ್ಯಾಪ್ತಿಗೆ ಹಳ್ಳಿಗಳ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟಲ ಆರೋಪಿಸಿದ್ದಾರೆ.

ಈಗಾಗಲೇ ಕುಸುಗಲ್, ಅಂಚಟಗೇರಿ, ಸುಳ್ಳ ಸೇರಿ 51 ಗ್ರಾಮಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿವೆ. ಪಾಲಿಕೆ ಆಡಳಿತ ಪಕ್ಷ ಮತ್ತು ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡದೇ, ಅವಳಿ‌ನಗರದ ಸುತ್ತಲೂ ಇರುವ ಗ್ರಾಮಗಳ ಸೇರ್ಪಡೆಯ ಚಿಂತನೆ ನಡೆಸಿದೆ.‌ ಇದು ಹಲವು ಅನುಮಾನಗಳನ್ನು ಮೂಡಿಸಿದೆ.

ವೈಯಕ್ತಿಕ ಸ್ವಹಿತಾಸಕ್ತಿಗಾಗಿ ಗ್ರಾಮಗಳ‌ ಸೇರ್ಪಡೆಗೆ ಮುಂದಾಗುತ್ತಿದ್ದಾರಾ ಆಡಳಿತ ಪಕ್ಷದ ಸದಸ್ಯರು…? ಎಂದು ಪಾಲಿಕೆ ಅಧಿಕಾರಿಗಳ ಹಾಗೂ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷ ಕೆಂಡಾಮಂಡಲವಾಗಿದೆ. ನಗರ ಪ್ರದೇಶಗಳಲ್ಲಿ ಕುಂಠಿತಗೊಂಡಿರೋ ಅಭಿವೃದ್ದಿ ಬಗ್ಗೆ ಯೋಚನೆ ಮಾಡದ ಪಾಲಿಕೆಗೆ ರಿಯಲ್ ಎಸ್ಟೇಟ್ ಮೇಲೆ ಕಣ್ಣು ಬಿದ್ದಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೇ ಏಕಾಏಕಿ ಕಂದಾಯ ಗ್ರಾಮಗಳ ಸೇರ್ಪಡೆಗೆ ಪಾಲಿಕೆ ರೂಪುರೇಷೆ ನಡಸಿವೆ ಅನ್ನೋ ಆರೋಪ ಕೇಳಿ ಬಂದಿದೆ. ಇ

ಒಟ್ಟಿನಲ್ಲಿ ಹೇಳಬೇಕೆಂದ್ರೆ ಆಡಳಿತ ಪಕ್ಷದ ಈ ಏಕಪಕ್ಷೀಯ ನಡೆಗೆ ವಿಪಕ್ಷ ವಿರೋಧ‌ ಮಾಡ್ತಿದೆ. ಗ್ರಾಮಗಳಲ್ಲಿ ಏನೆ ಇದ್ದರೂ ಪಂಚಾಯತಿ ಮಟ್ಟದಲ್ಲಿ ಮಾಡಿಕೊಳ್ಳುತ್ತಾರೆ. ನಗರಗಳ ಅಭಿವೃದ್ಧಿಗೆ ಅನುದಾನ ಇಲ್ಲ. ನಗರದಲ್ಲಿಯೇ ಅನೇಕ ಸಮಸ್ಯೆಗಳಿವೆ, ಹೀಗಿರುವಾಗ ರಿಯಲ್ ಎಸ್ಟೇಟ್ ನಲ್ಲಿ ಹಣ ಮಾಡೋ ಉದ್ದೇಶಕ್ಕೆ ಹಳ್ಳಿಗಳ ಸೇರ್ಪಡೆಗೆ ಕೆಲ ಸದಸ್ಯರು ಭಾಗಿಯಾಗಿರೋದಂತೂ ಸತ್ಯ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:11 am, Mon, 6 November 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ