Tv9 Digital Live: ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತಾ ಕೊರೊನಾ? ಪರೀಕ್ಷೆ ನಡೆಸುವ ಬಗ್ಗೆ ತಜ್ಞರ ಅಭಿಪ್ರಾಯಗಳು ಹೀಗಿವೆ..

ರಕ್ಕಸ ಕೊರೊನಾ ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತಾ? ಶಾಲೆ ಮತ್ತು ಪರೀಕ್ಷೆ ನಡೆಸಲು ಇದು ಸೂಕ್ತ ಸಮಯವಾ? ಎಂಬ ಪ್ರಶ್ನೆಯನ್ನು ಆಧಾರವಾಗಿಸಿಕೊಂಡು ಡಿಜಿಟಲ್ ಲೈವ್​ನಲ್ಲಿ ಚರ್ಚಿಸಲಾಯಿತು.

Tv9 Digital Live: ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತಾ ಕೊರೊನಾ? ಪರೀಕ್ಷೆ ನಡೆಸುವ ಬಗ್ಗೆ ತಜ್ಞರ ಅಭಿಪ್ರಾಯಗಳು ಹೀಗಿವೆ..
ಲೋಕೇಶ್ ತಾಳಿಕಟ್ಟೆ, ಚೈತ್ರ, ಶಶಿಕುಮಾರ್
Follow us
sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 06, 2021 | 10:44 PM

ಬೆಂಗಳೂರು: ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಈ ನಡುವೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಈಗಾಗಲೇ ಪಾಠದ ಬಗ್ಗೆ ಮಕ್ಕಳಿಗೆ ಆಸಕ್ತಿ ಕಡಿಮೆಯಾಗಿದೆ ಎಂದು ಪೋಷಕರು ಒಂದು ಕಡೆ ಆತಂಕಕ್ಕೊಳಗಾಗಿದ್ದರೆ. ಇನ್ನೊಂದೆಡೆ ಕೊರೊನಾ ಅಟ್ಟಹಾಸದ ನಡುವಲ್ಲೇ ಶಾಲೆಗಳನ್ನು ಆರಂಭಿಸುತ್ತಾರಾ ಎನ್ನುವ ಭಯ ಹುಟ್ಟಿದೆ. ಶಾಲೆಗಳನ್ನು ತೆರೆಯುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎರಡು ದಿನಗಳ ಒಳಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ರಕ್ಕಸ ಕೊರೊನಾ ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತಾ? ಶಾಲೆ ಮತ್ತು ಪರೀಕ್ಷೆ ನಡೆಸಲು ಇದು ಸೂಕ್ತ ಸಮಯವಾ? ಎಂಬ ಪ್ರಶ್ನೆಯನ್ನು ಆಧಾರವಾಗಿಸಿಕೊಂಡು ಡಿಜಿಟಲ್ ಲೈವ್​ನಲ್ಲಿ ಚರ್ಚಿಸಲಾಯಿತು. ಚರ್ಚೆಯಲ್ಲಿ ರುಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಲೋಕೇಶ್ ತಾಳಿಕಟ್ಟೆ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಶಿಕ್ಷಣ ತಜ್ಞರಾದ ನಿರಂಜನ್ ಆರಾಧ್ಯ ಮತ್ತು ಪೋಷಕರಾದ ಚೈತ್ರಾ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆ್ಯಂಕರ್ ಆನಂದ್ ಬುರಲಿ ನಡೆಸಿಕೊಟ್ಟರು.

ಕಳೆದ ಬಾರಿಯೂ ಕೊರೊನಾದಿಂದ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಇನ್ನೇನು ಶಾಲೆಗಳನ್ನು ತೆರೆಯಬಹುದೆಂದು ಯೋಚಿಸುವ ಹೊತ್ತಿಗೆ ಕೊವಿಡ್ ಎರಡನೇ ಅಲೆ ಜೋರಾಗಿ ಬೀಸುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಪರೀಕ್ಷೆಯನ್ನು ನಡೆಸುವುದು ಎಷ್ಟು ಲೇಸು ಎಂದು ಕೇಳಿದ ಪ್ರಶ್ನೆಗೆ ರುಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಲೋಕೇಶ್ ತಾಳಿಕಟ್ಟೆ ಪರೀಕ್ಷೆ ಎನ್ನುವುದು ಮೌಲ್ಯ ಮಾಪನಕ್ಕೆ ಒಳಪಟ್ಟ ವಿಧಾನ. ವರ್ಷಪೂರ್ತಿ ಮಕ್ಕಳ ಸಂಪರ್ಕವಿರಲಿಲ್ಲ. ಹೀಗಾಗಿ ಒಂದಾದರು ಅಸೆಸ್ಮೆಂಟ್ ಇದ್ದರೆ ಒಳ್ಳೆಯದು ಎಂದು ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೊರೊನಾದಿಂದ ಪರಿಸ್ಥಿತಿ ಗಂಭೀರವಾಗಿದೆ. ಈ ಮಧ್ಯೆ ಮಕ್ಕಳನ್ನು ಶಾಲೆಗಳಿಗೆ ಕರೆಸಲು ಸಾಧ್ಯವಾಗಲ್ಲ. ಆದರೆ ಆನ್​ಲೈನ್​ ಮೂಲಕ ಅಸೆಸ್ಮೆಂಟ್ ಮಾಡಬೇಕು. ಅಸೆಸ್ಮೆಂಟ್​ನಲ್ಲಿ ಮಕ್ಕಳ ನಾಲ್ಕು ಸಾಮರ್ಥ್ಯವನ್ನು ಅಳೆಯುತ್ತೇವೆ. ಮೊದಲಿಗೆ ವಿದ್ಯಾರ್ಥಿಯ ಕೇಳುವ ಸಾಮರ್ಥ್ಯ, ಎರಡನೇದಾಗಿ ಮಾತನಾಡುವ ಸಾಮರ್ಥ್ಯ, ಮೂರನೇದಾಗಿ ಬರೆಯುವ ಸಾಮರ್ಥ್ಯ ಮತ್ತು ಓದುವ ಸಾಮರ್ಥ್ಯವನ್ನು ಅಳೆಯುತ್ತೇವೆ. ಇದರಲ್ಲಿ ಯಾವ ಮಗು ಹಿಂದುಳಿದಿದೆ ಎಂದು ನಿರ್ಧರಿಸಿ ಆ ಮಗುವಿಗೆ ಬೇಕಾದ ಶಿಕ್ಷಣವನ್ನು ನೀಡುವ ಜವಾಬ್ದಾರಿ ಶಿಕ್ಷಕರಿಗೆ ಇರುತ್ತದೆ. ಈ ಉದ್ದೇಶದಿಂದ ಮೌಲ್ಯಾಂಕನ ನಡೆಸಿ ಎಂದು ಸರ್ಕಾರಕ್ಕೆ ಕಳಕಳಿಯಾಗಿ ಕೇಳಿದ್ದೇವೆ ಎಂದು ತಿಳಿಸಿದರು.

ಚರ್ಚೆಯ ಮುಂದಿನ ಭಾಗವಾಗಿ ಪೋಷಕರ ಪರವಾಗಿ ಮಾತನಾಡಿದ ಚೈತ್ರಾ ಆನ್​ಲೈನ್​ನಲ್ಲಿ ನಡೆಸುವ ಮೌಲ್ಯಾಂಕನಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕೆಲವು ಶಾಲೆಗಳಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವುದು ಗೊತ್ತಿದ್ದರೂ ಶಾಲೆಗಳಿಗೆ ಮಕ್ಕಳು ಬರಬೇಕೆಂದು ಒತ್ತಾಯ ಹೇರುತ್ತಿದ್ದಾರೆ. ಮಕ್ಕಳ ಆರೋಗ್ಯ ತುಂಬಾ ಮುಖ್ಯ. ಆನ್​ಲೈನ್ ತರಗತಿ ನಡೆಸುವುದು ಸದ್ಯಕ್ಕೆ ಸೂಕ್ತವಾಗಿರುತ್ತದೆ. ಮನೆಗಳಲ್ಲಿ ವಯಸ್ಸಾದವರು ಇರುತ್ತಾರೆ. ಮಕ್ಕಳು ಪ್ರತಿದಿನ ಶಾಲೆಗೆ ಹೋದರೆ ಮನೆಗಳಲ್ಲಿರುವ ವಯಸ್ಸಾದವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪರೀಕ್ಷೆ ನಡೆಸಲು ಶಾಲೆಗಳಿಗೆ ಕಳುಹಿಸಿ ಎಂದರೆ ಮಕ್ಕಳನ್ನು ಕಳುಹಿಸಲ್ಲ. ಆದರೆ ಆನ್​ಲೈನ ಮೂಲಕ ಅಸೆಸ್ಮೆಂಟ್ ನಡೆಸುತ್ತೇವೆ ಎಂದರೆ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.

ನಂತರ ಮಾತನಾಡಿದ ಶಿಕ್ಷಣ ತಜ್ಞರಾದ ನಿರಂಜನ್ ಆರಾಧ್ಯ ಮಕ್ಕಳ ಕಲಿಕೆ ಮತ್ತು ಮೌಲ್ಯಮಾಪನ ಹೇಗಿರಬೇಕೆಂದು ಶಿಕ್ಷಣ ಹಕ್ಕು ಕಾಯ್ದೆಗಳು ಸ್ಪಷ್ಟವಾಗಿ ತಿಳಿಸಿದೆ. ಇದರಿಂದ ಸರ್ಕಾರ ಕಾನೂನಿನ ಚೌಕಟ್ಟಿನಡಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರ ಶಿಕ್ಷಣ ಹಕ್ಕಿನ ಕಾಯ್ದೆಯ ಅಡಿಯಲ್ಲಿ ಕಲಿಕೆಗೆ ಹೆಚ್ಚು ಒತ್ತನ್ನು ನೀಡಬೇಕೆ ಹೊರತು ಪರೀಕ್ಷೆ ಹೆಸರಲ್ಲಿ ಮಕ್ಕಳನ್ನು ಬಲಿಪಶು ಮಾಡುವುದು ಸರಿಯಲ್ಲ. ಯಾವುದೇ ಮಗು ಶಾಲೆಗೆ ಅನುತ್ತೀರ್ಣವಾಗಬೇಕೆಂದು ಬರಲ್ಲ. ಆದ್ದರಿಂದ ಶಿಕ್ಷಕರು ಮತ್ತು ಸರ್ಕಾರ ಮಕ್ಕಳಿಗೆ ಬೇಕಾದ ಶಿಕ್ಷಣವನ್ನು ನೀಡುವ ಹೊಣೆಯನ್ನು ಹೊರಬೇಕಾಗುತ್ತದೆ. ಮಕ್ಕಳ ಕಲಿಕೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡದೇ ಕೇವಲ ಪರೀಕ್ಷೆಗಳ ಬಗ್ಗೆ ಆಸಕ್ತಿ ತೋರಿಸಿದರೆ ತಪ್ಪಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದರು.

ಕಳೆದ ಬಾರಿ ಎಲ್ಲ ಮಗುವನ್ನು ಪಾಸ್ ಮಾಡಿದ್ದೇವೆ. ಆದರೆ ಯಾವ ಮಗು ಯಾವ ಕಲಿಕೆ ಹಂತದಲ್ಲಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಈ ಬಾರಿಯೂ ಹೀಗಾದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ಮಕ್ಕಳಿಗೆ ಅಸೆಸ್ಮೆಂಟ್ ಮಾಡಬೇಕಾಗುತ್ತದೆ. ಈ ಬಗ್ಗೆ ಪೋಷಕರು ಬೇಡಿಕೆಯಿಟ್ಟಿದ್ದಾರೆ. ರಾಜ್ಯ ಸರ್ಕಾರ ವಿಫಲವಾಗದೆ ಎಂದ ಮಾತ್ರಕ್ಕೆ ಇಡೀ ರಾಜ್ಯದ ಮಕ್ಕಳಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಮಕ್ಕಳು ಆರೋಗ್ಯದ ಜೊತೆಗೆ ಒಂದಿಷ್ಟು ಶಿಕ್ಷಣ ಕಲಿಯಬೇಕಾದರೆ ಕನಿಷ್ಠ ಮೌಲ್ಯಮಾಪನ ನಡೆಯಬೇಕು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಮ್ಮ ಅಭಿಪ್ರಾಯ ತಿಳಿಸಿದರು.

ಇದನ್ನೂ ಓದಿ

ಈ ಹೂವುಗಳನ್ನೆಂದೂ ಮುಟ್ಟಬೇಡಿ.. ಸುವಾಸನೆಯನ್ನು ತೆಗೆದುಕೊಳ್ಳಲೇಬೇಡಿ; ಜೀವವೇ ಹೋಗಬಹುದು !

Karnataka Transport Workers Strike LIVE: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ​ಬಸ್ ಬಂದ್, ಪ್ರಯಾಣಿಕರಿಗೆ ತಟ್ಟಿದ ಬಿಸಿ

(School Student Covid 19 Exam TV9 Kannada digital)

Published On - 10:43 pm, Tue, 6 April 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?