
ಬೆಂಗಳೂರು, (ನವೆಂಬರ್ 05): ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ರೈತರಿಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೀಡಲಾಗುತ್ತಿದ್ದ ಮಧ್ಯಂತರ ಪರಿಹಾರದ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. ಈ ಹಿಂದೆ ಘೋಷಿಸಿದ್ದ 2,500ಕ್ಕೆ ಹೆಚ್ಚುವರಿಯಾಗಿ ಮತ್ತೊಂದು 2,500 ಸೇರಿಸಿ ಪ್ರತಿ ರೈತನಿಗೆ ಒಟ್ಟು 5,000 ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಇಂದು (ನವೆಂಬರ್ 05) ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ , ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಹಣ ಜಮೆ ಮಾಡುವ ಮೂಲಕ ಬರ ಪರಿಹಾರ ವಿತರಣೆಗೆ ಚಾಲನೆ ನೀಡಿದರು.
ಬಟನ್ ಕ್ಲಿಕ್ ಮಾಡುವ ಮೂಲಕ ಕೊದಲ ಕಂತು 2500 ರೈತರ ಖಾತೆಗೆ ಡಿಬಿಟಿ ಹಣ ಪಾವತಿಗೆ ಚಾಲನೆ ನೀಡಿದರು. ಇದರೊಂದಿಗೆ ಪ್ರತಿ ಎಕರೆಗೆ 2500 ನಿಗದಿ ಮಾಡಿದ್ದು, ಎರಡು ಜಮೀನು ಎಕರೆಗಿಂತ ಹೆಚ್ಚು ಇದ್ದರೂ ಸಹ 5 ಸಾವಿರ ಫಿಕ್ಸ್ ಮಾಡಲಾಗಿದೆ. ಹೀಗಾಗಿ ಎರಡು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರಿಗೂ ಹೆಚ್ಚುವರಿ ಹಣ ಸಿಗುವುದಿಲ್ಲ. ಜಮೀನಿನ ವಿಸ್ತೀರ್ಣ ಎಷ್ಟೇ ಇದ್ದರೂ ಒಬ್ಬ ರೈತನಿಗೆ ಒಟ್ಟು 5,000 ಮಾತ್ರ ಪರಿಹಾರವಾಗಿ ದೊರೆಯಲಿದೆ. ಮೊದಲ ಕಂತಿನಲ್ಲಿ 2,500 ಹಾಗೂ ನಂತರದ ಕಂತಿನಲ್ಲಿ ಉಳಿದ 2,500 ಪಾವತಿಯಾಗಲಿದೆ

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು 2,500 ರೂ. ಬರ ಪರಿಹಾರ ಕೊಡುತ್ತಿದ್ದೇವೆ. ನಾವು ಹೇಳಿದಂತೆ 1,250 ಕೋಟಿ ರೂ. ಹಣ ಹಾಕುತ್ತಿದ್ದೇವೆ. ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಹೋಗಲಿದೆ. ದೀಪಾವಳಿ ಮುಗಿದ ಬಳಿಕ ಇನ್ನೂ 2,500 ರೂ. ಕೊಡುತ್ತೇವೆ. ಪ್ರತಿ ರೈತನಿಗೆ ಒಟ್ಟು 5,000 ರೂ. ನೀಡಲಾಗುತ್ತೆ ಎಂದರು.

ಇನ್ನೂ ಡಿಸಿಎಂ ಪರಮೇಶ್ವರ್ ಮಾತನಾಡಿ, ವಿಧಾನಸಭೆಯಲ್ಲಿ ನಾವು ಪ್ರತಿ ಎಕರೆಗೆ ಹೇಳಿರಲಿಲ್ಲ, ನಾವು ಪ್ರತಿ ರೈತನಿಗೆ ಅಂತ ಹೇಳಿದ್ದು, ಅದರರಂತೆ ಪ್ರತಿ ರೈತನಿಗೆ ಕೊಡುತ್ತೇವೆ. 57 ಲಕ್ಷ ರೈತರಿಗೆ ಫಲಾನುಭವಿಗಳು ಇದ್ದಾರೆ. ಮೊದಲ ಕಂತಿನ ಇನ್ಪುಟ್ ಸಬ್ಸಿಡಿ 2,500 ಹಣ ಬಿಡುಗಡೆ ಮಾಡಿದ್ದೇವೆ. ಇನ್ನೂ ಸ್ವಲ್ಪ ದಿನದ ನಂತರ ಎರಡನೇ ಕಂತಿನಲ್ಲಿ ಮತ್ತೆ 2,500 ರೂ. ಹಣ ಬಿಡುಗಡೆ ಮಾಡಲಿದ್ದೇವೆ. ಆ ಮೂಲಕ ಪ್ರತಿ ರೈತನಿಗೆ 5,000 ರೂ. ಪರಿಹಾರ ಸಿಗಲಿದೆ. ಒಟ್ಟು ಒಬ್ಬ ರೈತರಿಗೆ 5,000 ರೂ. ಇನ್ಪುಟ್ ಸಬ್ಸಿಡಿ ಪರಿಹಾರ ಬಿಡುಗಡೆ ಆಗಲಿದೆ.2 ಎಕ್ಕರೆಗಿಂತ ಜಾಸ್ತಿ ಭೂಮಿ ಇದ್ದರೂ 5 ಸಾವಿರ ಹಣ ಮಾತ್ರ ಸಿಗಲಿದೆ ಎಂದು ಸ್ಪಷ್ಷಪಡಿಸಿದರು.
Published On - 2:33 pm, Thu, 5 November 26