ನೆಲಮಂಗಲ: ಪಾನಮತ್ತನಾಗಿ ತನ್ನದೇ ಬೈಕ್ಗೆ ಬೆಂಕಿ ಹಚ್ಚಿ ಸುಟ್ಟ ಕುಡುಕ!
ನೆಲಮಂಗಲದ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ ಗಂಟಲು ಪೂರ್ತಿ ಕುಡಿದಿದ್ದ. ಅಷ್ಟೇ ಅಲ್ಲ, ದೊಡ್ಡದಾಗಿ ಗಲಾಟೆ ಕೂಡ ಮಾಡುತ್ತಿದ್ದ. ವಿಚಿತ್ರ ಎಂಬಂತೆ ಏಕಾಏಕಿ ಬೈಕ್ಗೆ ಬೆಂಕಿ ಹಚ್ಚಿದ್ದಾನೆ! ಅದೂ ಆತನದ್ದೇ ಬೈಕ್!
ನೆಲಮಂಗಲ: ಕುಡಿದ ಅಮಲಿನಲ್ಲಿ ಯಾರು ಏನು ಮಾಡುತ್ತಾರೆ ಎಂದು ಹೇಳೋದು ತುಂಬಾನೇ ಕಷ್ಟ. ಕೆಲವರು ಪಾನಮತ್ತರಾಗಿ ಹೆಂಡತಿಗೆ ಹೊಡೆದರೆ, ಇನ್ನೂ ಕೆಲವರು ಸಾರ್ವುಜನಿಕ ಆಸ್ತಿ ಹಾಳುಮಾಡುತ್ತಾರೆ. ಇಲ್ಲವೇ ದೊಡ್ಡದಾಗಿ ಗದ್ದಲ ಎಬ್ಬಿಸಿ ಬೇರೆಯವರಿಗೆ ತೊಂದರೆ ನೀಡುತ್ತಾರೆ. ಆದರೆ, ತಮಗೆ ತಾವೇ ತೊಂದರೆ ಮಾಡಿಕೊಳ್ಳುವ ಪ್ರಕರಣ ತುಂಬಾನೇ ಅಪರೂಪ. ಆದರೆ, ಬೆಂಗಳೂರಿನ ನೆಲಮಂಗಲದಲ್ಲಿ ಈ ವಿಚಾರ ಸುಳ್ಳಾಗಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ತನ್ನ ಬೈಕ್ಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ ಗಂಟಲು ಪೂರ್ತಿ ಕುಡಿದಿದ್ದ. ಅಷ್ಟೇ ಅಲ್ಲ, ದೊಡ್ಡದಾಗಿ ಗಲಾಟೆ ಕೂಡ ಮಾಡುತ್ತಿದ್ದ. ವಿಚಿತ್ರ ಎಂಬಂತೆ ಏಕಾಏಕಿ ಬೈಕ್ಗೆ ಬೆಂಕಿ ಹಚ್ಚಿದ್ದಾನೆ! ಅದೂ ಆತನದ್ದೇ ಬೈಕ್!
ಸ್ಥಳೀಯರು ಎಷ್ಟೇ ಕೂಗಾಡಿದರೂ ಕೇಳದ ಕುಡುಕ ಬೈಕ್ ಹೊತ್ತಿ ಉರಿಯುವಂತೆ ಮಾಡಿದ್ದಾನೆ. ಬೈಕ್ಗೆ ಬೆಂಕಿ ಬಿದ್ದಿದ್ದನ್ನು ಗಮಿಸಿದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಆದರೆ, ಬೈಕ್ ಆಗಲೇ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು.