ಬಸವರಾಜ್ ಬೊಮ್ಮಾಯಿಯವರು ಶಿರಹಟ್ಟಿ MLA ಬಿಜೆಪಿ ಟಿಕೆಟ್ ದುಡ್ಡಿಗೆ ಮಾರಾಟ ಮಾಡಿದ್ದಾರೆ -ರಾಮಣ್ಣ ಲಮಾಣಿ ಗಂಭೀರ ಆರೋಪ

| Updated By: ಆಯೇಷಾ ಬಾನು

Updated on: Apr 02, 2024 | 10:40 AM

ಕಳೆದ ವರ್ಷ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ಮಾಜಿ ಸಿಎಂ, ಹಾವೇರಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಹಣಕ್ಕಾಗಿ ಶಿರಹಟ್ಟಿ ಬಿಜೆಪಿ ಎಂಎಲ್​ಎ ಟಿಕೆಟ್ ಮಾರಾಟ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಬಸವರಾಜ್ ಬೊಮ್ಮಾಯಿಯವರು ಶಿರಹಟ್ಟಿ MLA ಬಿಜೆಪಿ ಟಿಕೆಟ್ ದುಡ್ಡಿಗೆ ಮಾರಾಟ ಮಾಡಿದ್ದಾರೆ -ರಾಮಣ್ಣ ಲಮಾಣಿ ಗಂಭೀರ ಆರೋಪ
ರಾಮಣ್ಣ ಲಮಾಣಿ
Follow us on

ಗದಗ, ಏಪ್ರಿಲ್.02: ಒಂದು ಕಡೆ ಬೇಸಿಗೆ ಹೆಚ್ಚಾಗುತ್ತಿದ್ದು ಮತ್ತೊಂದೆಡೆ ಲೋಕಸಭಾ ಚುನಾವಣೆಯ (Lok Sabha Election) ಕಾವು ಕೂಡ ಹೆಚ್ಚಾಗುತ್ತಿದೆ. ವಾಗ್ದಾಳಿ, ಆರೋಪ, ಸಭೆ, ಪ್ರಚಾರ, ತಂತ್ರಗಾರಿಕೆ ಎಲ್ಲವೂ ನಡೆಯುತ್ತಿದೆ. ಸದ್ಯ ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ (Ramanna Lamani) ಅವರು ಮಾಜಿ ಸಿಎಂ, ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶಿರಹಟ್ಟಿ MLA ಬಿಜೆಪಿ ಟಿಕೆಟ್ ದುಡ್ಡಿಗೆ ಮಾರಾಟ ಮಾಡಿದ್ದಾರೆ. ಹಣಕ್ಕಾಗಿ ಅಂದಿನ ಸಿಎಂ ಬೊಮ್ಮಾಯಿ BJP ಟಿಕೆಟ್​​ ಮಾರಿದ್ದರು ಎಂದು ಬೊಮ್ಮಾಯಿ ವಿರುದ್ಧ ರಾಮಣ್ಣ ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಟಿವಿ9 ಜೊತೆ ಮಾತನಾಡಿದ ಮಾಜಿ ಶಾಸಕ ರಾಮಣ್ಣ ಲಮಾಣಿ, ಶಿರಹಟ್ಟಿ ಕ್ಷೇತ್ರದ MLA ಟಿಕೆಟ್ ಬಿಜೆಪಿ ದುಡ್ಡಿಗಾಗಿ ಮಾರಾಟ ಮಾಡಿದೆ. ಆಗಿನ ಸಿಎಂ ಬಸವರಾಜ್ ಬೊಮ್ಮಾಯಿ ಅವ್ರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಮ್ಮ ಕ್ಷೇತ್ರದ ಅಲ್ಲದವ್ರಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ. ಬಿಜೆಪಿಯಲ್ಲಿ ಶ್ರಮಪಟ್ಟು ಪಕ್ಷ ಕಟ್ಟಿದ್ದೆ. ಟಿಕೆಟ್ ತಪ್ಪಿದ ಬಳಿಕ ಕಾಂಗ್ರೆಸ್ ತತ್ವ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ಬಸವರಾಜ್ ಬೊಮ್ಮಾಯಿ ಅವ್ರಿಂದ ಶಿರಹಟ್ಟಿ ತಾಲೂಕಿಗೆ ಅನ್ಯಾಯವಾಗಿದೆ. ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಜಾಲವಾಡಗಿ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ಮಾಡಿದ್ರು. ಅನುದಾನ ನೀಡುವುದಾಗಿ ಹೇಳಿದ್ರು. ಆದ್ರೆ ಅನುದಾನ ನೀಡಿಲ್ಲ. ಮೊನ್ನೆ ಸಿಎಂ ಸಿದ್ದರಾಮಯ್ಯ 290 ಕೋಟಿ ಘೋಷಣೆ ಮಾಡಿದ್ದಾರೆ.

ಶೀಘ್ರದಲ್ಲೇ ಕೆರೆಗಳು ತುಂಬಿಸುತ್ತೇವೆ. ದಮ್ಮು, ತಾಕತ್ತು ಇದ್ರೆ ಬಸವರಾಜ್ ಬೊಮ್ಮಾಯಿ ಗೆಲ್ಲಲಿ. ಬೊಮ್ಮಾಯಿ ಅವರನ್ನ ಸೋಲಿಸುತ್ತೇವೋ ಇಲ್ವೋ ಗೊತ್ತಿಲ್ಲ. ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಆರಿಸಿ ತರ್ತೀನಿ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ವಿರುದ್ಧ ರಾಮಣ್ಣ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ, ವಜ್ರ.. ಅಬ್ಬಬ್ಬಾ ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ಎಷ್ಟಿದೆ ಗೊತ್ತಾ?

‘ಗ್ಯಾರಂಟಿ’ ಟಾರ್ಗೆಟ್‌ ಮಾಡಿ ಹೆಚ್​ಡಿಕೆ ದಾಳಿ

ಲೋಕ ಸಮರದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿರೋ ಹೆಚ್​​​​.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನೇ ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿರೋ RJಕನ್ವೆನ್ಷನ್‌ ಸೆಂಟರ್​ನಲ್ಲಿ ಬಿಜೆಪಿ, ಜೆಡಿಎಸ್ ಬೂತ್ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಕಿಡಿಕಾರಿದ್ರು.

‘ಗ್ಯಾರಂಟಿ 2ಸಾವಿರದಿಂದ ಕುಟುಂಬ ಸಾಗ್ತಿದ್ಯಾ?’

ಬೆಂಗಳೂರು ಉತ್ತರ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಕೆಲಸ ಮಾಡುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ ಅವ್ರು, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ವಿರುದ್ಧ ಬೆಂಕಿ ಉಗುಳಿದ್ರು. ಗ್ಯಾರಂಟಿ 2ಸಾವಿರದಿಂದ ಕುಟುಂಬ ಸಾಗ್ತಿದ್ಯಾ ಅಂತಾ ಪ್ರಶ್ನಿಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:39 am, Tue, 2 April 24