AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಉದ್ಯಮಗಳಿಗೆ FSSAI ಬಿಗ್ ಅಲರ್ಟ್: ಈ 15 ನಿಯಮ ಹಾಗೂ ಮಾರ್ಗಸೂಚಿಗಳು ಪಾಲಿಸಲೇಬೇಕು

ಕರ್ನಾಟಕದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ FSSAI ಆಹಾರ ಸುರಕ್ಷತೆ ಮತ್ತು ಸ್ವಚ್ಛತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಶಾಲೆ, ಆಸ್ಪತ್ರೆ, ಹೋಟೆಲ್‌ ಸೇರಿದಂತೆ ಎಲ್ಲಾ ಆಹಾರ ಉದ್ಯಮಗಳು (FBOs) ಕಟ್ಟುನಿಟ್ಟಾದ 15 ನಿಯಮಗಳನ್ನು ಪಾಲಿಸಬೇಕು. FSSAI ಪರವಾನಗಿ, ನೈರ್ಮಲ್ಯ, ಗುಣಮಟ್ಟದ ಕಚ್ಚಾ ವಸ್ತು ಬಳಕೆ, ಅವಧಿ ಮೀರಿದ ಉತ್ಪನ್ನ ನಿಷೇಧ, ಸಿಬ್ಬಂದಿ ವೈಯಕ್ತಿಕ ಸ್ವಚ್ಛತೆ ಮುಖ್ಯ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.

ಆಹಾರ ಉದ್ಯಮಗಳಿಗೆ FSSAI ಬಿಗ್ ಅಲರ್ಟ್: ಈ 15 ನಿಯಮ ಹಾಗೂ ಮಾರ್ಗಸೂಚಿಗಳು ಪಾಲಿಸಲೇಬೇಕು
ಸಾಂದರ್ಭಿಕ ಚಿತ್ರ
ವಿನಯ್​ ಕಾಶಪ್ಪನವರ್​
| Edited By: |

Updated on: Aug 25, 2026 | 9:22 PM

Share

ಬೆಂಗಳೂರು, ಆ.25: ರಾಜ್ಯದಾದ್ಯಂತ ಸಾರ್ವಜನಿಕರ ಆರೋಗ್ಯ, ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು (FSSAI) ಎಲ್ಲಾ ಆಹಾರ ಉದ್ಯಮ ಸಂಸ್ಥೆಗಳಿಗೆ (FBOs) ಕಟ್ಟುನಿಟ್ಟಿನ ಮಾರ್ಗಸೂಚಿ ಹಾಗೂ ಸಲಹೆ-ಸೂಚನೆಗಳನ್ನು ಹೊರಡಿಸಿದೆ.

ಮುಖ್ಯವಾಗಿ ಶಾಲೆಗಳು, ಆಸ್ಪತ್ರೆಗಳು, ಹಾಸ್ಟೆಲ್‌ಗಳು, ಕ್ಯಾಂಟೀನ್‌ಗಳು ಹಾಗೂ ಹೋಟೆಲ್‌ಗಳು ಸೇರಿದಂತೆ ಸಾರ್ವಜನಿಕರಿಗೆ ಆಹಾರ ಪೂರೈಸುವ ಸಂಸ್ಥೆಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಇಲಾಖೆ ಸೂಚಿಸಿದ್ದು, ನಿಯಮ ಅನುಷ್ಠಾನಕ್ಕಾಗಿ ಮುಂದಿನ 15 ದಿನಗಳ ಕಾಲ ರಾಜ್ಯಾದ್ಯಂತ ವಿಶೇಷ ಪರಿಶೀಲನೆ ನಡೆಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ, 5 ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ರವಾನೆ

ಇಲಾಖೆ ಹೊರಡಿಸಿರುವ 15 ಪ್ರಮುಖ ನಿಯಮಗಳು ಹಾಗೂ ಮಾರ್ಗಸೂಚಿಗಳು:

  • FSSAI ಪರವಾನಗಿ ಕಡ್ಡಾಯ: ಎಲ್ಲಾ ಆಹಾರ ಉದ್ಯಮಗಳು (FBO) ಕಡ್ಡಾಯವಾಗಿ FSSAI ಲೈಸೆನ್ಸ್ ಅಥವಾ ನೋಂದಣಿ ಹೊಂದಿರಬೇಕು. ಪರವಾನಗಿ ಇಲ್ಲದೆ ವ್ಯವಹಾರ ನಡೆಸುವಂತಿಲ್ಲ.
  • ಸ್ವಚ್ಛತೆ ಮತ್ತು ನೈರ್ಮಲ್ಯ: ಆಹಾರ ತಯಾರಿಕಾ ಮತ್ತು ಮಾರಾಟದ ಸ್ಥಳಗಳಲ್ಲಿ ಹೆಚ್ಚಿನ ನೈರ್ಮಲ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
  • ಗುಣಮಟ್ಟದ ಕಚ್ಚಾ ವಸ್ತುಗಳು: ಕಚ್ಚಾ ವಸ್ತುಗಳ ಖರೀದಿ ಮತ್ತು ಸಂಗ್ರಹಣೆಯಲ್ಲಿ ಎಚ್ಚರ ವಹಿಸಬೇಕು, ಉತ್ತಮ ಗುಣಮಟ್ಟದ ವಸ್ತುಗಳನ್ನೇ ಬಳಸಬೇಕು.
  • ಅವಧಿ ಮೀರಿದ ವಸ್ತುಗಳ ನಿಷೇಧ: ಕಾಲಾವಧಿ ಮುಗಿದ ಆಹಾರ ಪದಾರ್ಥಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು.
  • ಸರಿಯಾದ ಲೇಬಲಿಂಗ್: ಆಹಾರ ಉತ್ಪನ್ನಗಳ ಲೇಬಲಿಂಗ್ ಸರಿಯಾಗಿದ್ದು, ಉತ್ಪಾದನೆ ಮತ್ತು ಬಳಕೆ ದಿನಾಂಕಗಳು ಸ್ಪಷ್ಟವಾಗಿರಬೇಕು.
  • ಸುರಕ್ಷಿತ ಕುಡಿಯುವ ನೀರು: ಆಹಾರ ತಯಾರಿಕೆಗೆ ಬಳಸುವ ನೀರು ಕಡ್ಡಾಯವಾಗಿ ಸುರಕ್ಷಿತ ಹಾಗೂ ಶುದ್ಧವಾಗಿರಬೇಕು.
  • ಕೀಟ ನಿಯಂತ್ರಣ : ಆಹಾರ ದಾಸ್ತಾನು ಹಾಗೂ ತಯಾರಿಕಾ ಸ್ಥಳಗಳಲ್ಲಿ ಕೀಟ ನಿಯಂತ್ರಣ ವ್ಯವಸ್ಥೆ ಕಡ್ಡಾಯವಾಗಿರಬೇಕು.
  • ಸಿಬ್ಬಂದಿ ವೈಯಕ್ತಿಕ ಸ್ವಚ್ಛತೆ: ಆಹಾರ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸುವುದು ಹಾಗೂ ಆರೋಗ್ಯದ ಪರಿಶೀಲನೆ ಮಾಡಿಸುವುದು ಕಡ್ಡಾಯ.
  • ತ್ಯಾಜ್ಯ ವಿಲೇವಾರಿ: ಆಹಾರ ತಯಾರಿಕಾ ಘಟಕಗಳಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮರ್ಪಕ ಮತ್ತು ವೈಜ್ಞಾನಿಕವಾಗಿರಬೇಕು.
  • ಸ್ವಚ್ಛ ಸಾಗಣೆ ವಾಹನಗಳು: ಆಹಾರ ಸಾಗಿಸುವ ವಾಹನಗಳು ಸ್ವಚ್ಛವಾಗಿದ್ದು, ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು.
  • ಮೈಕ್ರೋಬಯಾಲಜಿಕಲ್ ಗುಣಮಟ್ಟ: ಆಹಾರ ಉತ್ಪನ್ನಗಳ ಬ್ಯಾಕ್ಟೀರಿಯಾ/ಮೈಕ್ರೋಬಯಾಲಜಿಕಲ್ ಗುಣಮಟ್ಟದ ಪರೀಕ್ಷೆಗೆ ವಿಶೇಷ ಒತ್ತು ನೀಡಬೇಕು.
  • ದಾಖಲೆ ನಿರ್ವಹಣೆ: ಉದ್ಯಮಗಳು ಸ್ವಯಂ ಪರಿಶೀಲನೆ ನಡೆಸುತ್ತಿರಬೇಕು ಹಾಗೂ ಅಗತ್ಯ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು.
  • ಅಧಿಕಾರಿಗಳಿಗೆ ಸಹಕಾರ: ತಪಾಸಣೆಗೆ ಆಗಮಿಸುವ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳು ಹಾಗೂ ಪರಿಶೀಲನೆಗೆ ಸಹಕರಿಸಬೇಕು.
  • ವಿಶೇಷ ಸಂಸ್ಥೆಗಳಿಗೆ ಕಟ್ಟೆಚ್ಚರ: ಶಾಲೆ, ಹಾಸ್ಟೆಲ್, ಆಸ್ಪತ್ರೆ ಹಾಗೂ ಕ್ಯಾಂಟೀನ್‌ಗಳಲ್ಲಿ ಯಾವುದೇ ಕಲ್ಮಶವಿಲ್ಲದ ಆಹಾರ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು.
  • ಕಾನೂನು ಕ್ರಮದ ಎಚ್ಚರಿಕೆ: ನಿಯಮಗಳನ್ನು ಉಲ್ಲಂಘಿಸುವ ಅಥವಾ ನಿರ್ಲಕ್ಷ್ಯ ವಹಿಸುವ ಆಹಾರ ಉದ್ಯಮಗಳ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us