AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Davanagere: ರಿಯಲ್ ಎಸ್ಟೇಟ್ ದಂಧೆಗಾಗಿ ಸಮಾಜ ಸುಧಾರಕನ ಸಮಾಧಿ ನಾಶ

ವಿದೇಶದಲ್ಲಿ ವ್ಯಾಸಂಗ ಮಾಡಿ ಶೋಷಿತರ ಕಲ್ಯಾಣಕ್ಕೆ ಸಂಸ್ಥೆ ಸ್ಥಾಪನೆ ಮಾಡಿದ ಶಾಸಕ. ಜೊತೆಗೆ ಖ್ಯಾತ ನೇತ್ರ ತಜ್ಞ ಆಗಿದ್ದ ವ್ಯಕ್ತಿಯ ಸಮಾಧಿ ಮೇಲೆ ಜೆಸಿಬಿಯಿಂದ ದಾಳಿ ಮಾಡಿದ್ದಾರೆ. ತಂದೆಯ ಸಮಾಧಿ ಸ್ಥಿತಿ ನೋಡಿ ಪುತ್ರಿ ಲೇಖಕಿ ಜಾಹ್ನವಿ ಅಳುತ್ತಾ ಹೋರಾಟ ಶುರು ಮಾಡಿದ್ದಾರೆ.

Davanagere: ರಿಯಲ್ ಎಸ್ಟೇಟ್ ದಂಧೆಗಾಗಿ ಸಮಾಜ ಸುಧಾರಕನ ಸಮಾಧಿ ನಾಶ
ಬಿ.ಟಿ. ಜಾಹ್ನವಿ
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on: Nov 21, 2022 | 6:36 PM

Share

ದಾವಣಗೆರೆ: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಶೋಷಿತರ ಬಡವರ ಸೇವೆ ಮಾಡಿದ ಮಹಾಪುರುಷ ಡಾ.ಬಿ.ಎಂ. ತಿಪ್ಪೇಸ್ವಾಮಿ(dr.B.M thippeswamy) ಒಂದು ಕಾಲದಲ್ಲಿ ಖ್ಯಾತ ನೇತ್ರ ತಜ್ಞ. ಜೊತೆಗೆ ಮಾಜಿ ಶಾಸಕ. ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರು ಹಾಗೂ ಆದಿ‌ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು. 1990 ರಲ್ಲಿ ಸಾವನ್ನಪ್ಪಿದ್ದರು. ಈಗಿನ ವಿದ್ಯುತ್ ನಗರ ಆಗಿರುವ ಪ್ರದೇಶದಲ್ಲಿ ಇವರ ಸಮಾಧಿ ಇದೆ. ಇವರ ಪತ್ನಿ ಯಲ್ಲಮ್ಮ, ಪುತ್ರರಾದ ಮಲ್ಲಿಕಾರ್ಜುನ, ಡಾ.ಬಿ.ಟಿ.ಮೋಹನ್ ಹೀಗೆ ನಾಲ್ಕು ಜನರ ಸಮಾಧಿ ಇಲ್ಲಿದೆ. ಈ ಜಮೀನನ್ನು ಮಾಜಿ ಸಚಿವರಾದ ದಿವಂಗತ ಬಿ.ಬಸಲಿಂಗಪ್ಪ ಅವರು ಡಾ. ತಿಪ್ಪೇರುದ್ರಸ್ವಾಮಿ ಹಿರಿಯ ಪುತ್ರ  ಮಲ್ಲಿಕಾರ್ಜುನಗೆ ಬರೆದುಕೊಟ್ಟಿದ್ದರು. ಆದ್ರೆ, ಮಲ್ಲಿಕಾರ್ಜುನ ಸಹ ನಿಧನರಾಗಿದ್ದು, ಇದೀಗ  ಕೆಲವರು ಜಮೀನು‌ ನಾವು ಖರೀದಿಸಿದ್ದೇವೆ ಎಂದು ಹೇಳಿ ಜೆಸಿಬಿಯಿಂದ. ಸಮಾಧಿಯನ್ನು ದ್ವಂಸಗೊಳಿಸಿದ್ದಾರೆ.

ಇದಕ್ಕೆ ಡಾ.ತಿಪ್ಪೇರುದ್ರಸ್ವಾಮಿ ಅವರ ಪುತ್ರಿ ಲೇಖಕಿ ಬಿ.ಟಿ ಜಾಹ್ನವಿ ಅವರು ಅಳುತ್ತಾ ತಂದೆ ಸಮಾಧಿಗಾಗಿ ಹೋರಾಟ ಶುರು ಮಾಡಿದ್ದಾರೆ. ಮೂಲಗಳ ಪ್ರಕಾರ ಇದು ಎರಡು ಎಕರೆ ಇಪ್ಪತ್ತು ಗುಂಟೆ ಜಮೀನು. ಇದರಲ್ಲಿ ಒಂದಿಷ್ಟು ಜಮೀನು ಮಾರಾಟ ಮಾಡಲಾಗಿದೆ. ಜೊತೆಗೆ 1990 ರಿಂದ 2016 ವರೆಗೆ ಅಂದರೆ ಡಾ.ತಿಪ್ಪೇಸ್ವಾಮಿ ಅವರ ನಿಧನದಿಂದ ಅವರ ಪುತ್ರ ಮಲ್ಲಿಕಾರ್ಜುನ ತನಕ ಇವರ ಕುಟುಂಬ ಸದಸ್ಯರ ಎಲ್ಲ ಸಮಾಧಿಗಳು ಇಲ್ಲಿಯೇ ಇದೆ. ಅದಕ್ಕೊಂದು ಗೋಡೆ ಕಟ್ಟಿದ್ದರೂ ಸಹ ಜೆಸಿಬಿ ಯಿಂದ ರಿಯಲ್ ಎಸ್ಟೇಟ್ ದಂಧೆಗಾಗಿ ಸಮಾಜ ಸುಧಾರಕನ ಸಮಾಧಿ ನಾಶ ಮಾಡಿದ್ದಾರೆ.

ಇದನ್ನೂ ಓದಿ:ವೋಟರ್​ ಐಡಿ ಹಗರಣ: ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿಯೂ ಅಕ್ರಮ ಪತ್ತೆ; ಚಿಲುಮೆ ಮೇಲೆ ದೂರು ಕೊಟ್ಟ ಸಮನ್ವಯ ಟ್ರಸ್ಟ್​ಗೆ ನೊಟೀಸ್

ಇನ್ನು ದಾವಣಗೆರೆ ನಗರದಲ್ಲಿ ದಿನದಿಂದ ದಿನಕ್ಕೆ ರಿಯಲ್ ಎಸ್ಟೇಟ್ ದಂಧೆ ಜೀವ ಪಡೆದುಕೊಳ್ಳುತ್ತಿದೆ. ಇದಕ್ಕಾಗಿ ಕೊಲೆ ಸುಲಿಗೆ ಸಹ‌ ನಡೆಯುತ್ತಿದೆ. ಈ ಜಮೀನು ಖರೀದಿ ಮಾಡಿದವರು ಯಾರು? ಅವರು ಮತ್ಯಾರಿಗೆ ಕೊಟ್ಟರು. ಈ ಜಮೀನಿನ ಮೂಲ ದಾಖಲೆಗಳು ಡಾ.ತಿಪ್ಪೇಸ್ವಾಮಿ ಅವರ ಕುಟುಂಬದ ಬಳಿ‌ ಇರಬಹುದಾ. ಈ ಎಲ್ಲ ಪ್ರಶ್ನೆಗೆ ಉತ್ತರ ಹುಡುಕ ಬೇಕಾಗಿದೆ. ಸದ್ಯ ಸ್ಥಳಕ್ಕೆ ಕೆಟಿಜೆ ನಗರ‌ ಠಾಣೆಯ ಪೊಲೀಸರು ಭೇಟಿ ನೀಡಿ ಕಾಮಗಾರಿ ಸ್ಥಗಿತ ಗೊಳಿಸಿದ್ದಾರೆ. ಏನೇ ಆಗಲಿ ಡಾ.ತಿಪ್ಪೇಸ್ವಾಮಿಯಂತ‌ ಮಹಾನ್ ವ್ಯಕ್ತಿಯ ಸಮಾಧಿಗೆ ಈ ಸ್ಥಿತಿ ಆಗಿದ್ದು ಬೇಸರದ ಸಂಗತಿ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ