ಏಪ್ರಿಲ್ ಫೂಲ್ ಬದಲಾಗಿ ಏಪ್ರಿಲ್ ಕೂಲ್ ಡೇ ಆಚರಣೆ! ವಿದ್ಯಾರ್ಥಿಗಳ ಕಾರ್ಯಕ್ಕೆ ಅವಳಿ ನಗರದಲ್ಲಿ ಮೆಚ್ಚುಗೆ

ರಾಜ್ಯದಲ್ಲಿ ಕೆಂಡದಂತ ಬಿಸಿಲು ಜನರ ತಲೆ ಸುಡುತ್ತಿದೆ. ಮನೆ ಬಿಟ್ಟು ಹೊರಗೆ ಕಾಲಿಟ್ಟರೆ ಸಾಕು ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಜನರು ನೀರು ಅಂತಿದ್ದಾರೆ. ಆದ್ರೆ, ಮೂಕ ಪ್ರಾಣಿ, ಪಕ್ಷಿಗಳ ಪಾಡು ದೇವರೇ ಗತಿ ಎಂಬಂತಾಗಿದೆ. ಹೀಗಾಗಿ ಗದಗದ ಮಾನವೀಯ ಮನಗಳು ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಮುಂದಾಗಿವೆ. ಕಾಲೇಜು ಆವರಣ, ಮನೆ ಅಂಗಳ, ಮಾಳಿಗೆ ಮೇಲೆ ಪಕ್ಷಿಗಳಿಗೆ ನೀರು, ಕಾಳು ಕಡಿ ಇಡುವ ಮೂಲಕ ಪ್ರಾಣಿ, ಪಕ್ಷಿ ಸಂಕುಲಕ್ಕೆ ನೇರವಾಗುವ ಮೂಲಕ ಮಾನವೀಯತೆ ತೋರಿದ್ದಾರೆ.

ಏಪ್ರಿಲ್ ಫೂಲ್ ಬದಲಾಗಿ ಏಪ್ರಿಲ್ ಕೂಲ್ ಡೇ ಆಚರಣೆ! ವಿದ್ಯಾರ್ಥಿಗಳ ಕಾರ್ಯಕ್ಕೆ ಅವಳಿ ನಗರದಲ್ಲಿ ಮೆಚ್ಚುಗೆ
ಗದಗ ವಿದ್ಯಾರ್ಥಿಗಳಿಂದ ಪಕ್ಷಿಗಳಿಗೆ ನೀರು
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 01, 2024 | 8:38 PM

ಗದಗ, ಏ.01: ಉರಿ ಬಿಸಿಲು ಮಾನವ ಕುಲವೇ ಬೆಚ್ಚಿಬಿಳುವಂತೆ ಮಾಡಿದೆ. ಬಿಸಿ ಗಾಳಿ, ಬೆಂಕಿ ಬಿಸಿಲಿಗೆ ಜನರು ಮನೆ ಬಿಟ್ಟು ಹೊರ ಬರುವುದಕ್ಕೂ ಹೆದರುತ್ತಿದ್ದಾರೆ. ಎಲ್ಲವೂ ಅನುಕೂಲ ಇದ್ದ ಮಾನವ ಕುಲವೇ ನೀರಿಗಾಗಿ ಪರದಾಡುವಂತಾಗಿದೆ. ಆದ್ರೆ, ಪ್ರಾಣಿ, ಪಕ್ಷಿಗಳ ಗತೀ ಏನು ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಅಡವಿಗೆ ಹೋದರೆ ಪ್ರಾಣಿ, ಪಕ್ಷಿಗಳಿಗೆ ಒಂದು ಕಾಳಿನಷ್ಟು ಆಹಾರ ಸಿಗುತ್ತಿಲ್ಲ. ಕೆರೆ, ಕಟ್ಟೆಗಳು ಒಣಗಿವೆ. ಹೀಗಾಗಿ ಈ ವಿದ್ಯಾರ್ಥಿಗಳು ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಹಾಕುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಅಷ್ಟೇ ಇದೊಂದು ಅಭಿಯಾನದಂತೆ ಆಚರಣೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದು, ಗದಗ(Gadag) ನಗರದ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ಯ ಹಾಗೂ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕೂಲ್ ಡೇ ಆಚರಣೆ ಮಾಡುವ ಮೂಲಕ ಮಾನವಕುಲಕ್ಕೆ ಸಂದೇಶ

ಇಂದು ಏಪ್ರಿಲ್ 1 ಎಲ್ಲರೂ ಏಪ್ರಿಲ್ ಫೂಲ್ ಮಾಡುವುದರಲ್ಲೇ ಕಾಲ ಹರಣ ಮಾಡುವುದು ಸಹಜ. ಆದ್ರೆ, ಈ ವಿದ್ಯಾರ್ಥಿಗಳು ಪ್ರಾಣಿ- ಪಕ್ಷಿಗಳಿಗೆ ಆಹಾರ, ನೀರು ಹಾಕುವ ಮೂಲಕ ಏಪ್ರಿಲ್ ಕೂಲ್ ಡೇ ಆಚರಣೆ ಮಾಡುವ ಮೂಲಕ ಮಾನವಕುಲಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಈ ಮೂಲಕ ನೀರು ನೀರು, ಅನ್ನ ಅನ್ನ ಅಂತ ವಿಲವಿಲ ಅನ್ನುವ ಪ್ರಾಣಿ, ಪಕ್ಷಿಗಳ ಸಂಕುಲ ಉಳಿಸಿ ಬೆಳೆಸುವ ಕೆಲಸಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ವಿದ್ಯಾರ್ಥಿಗಳು ಸ್ವಂತ ಖರ್ಚಿನಲ್ಲಿ ಮಣ್ಣಿನ ಮಡಿಕೆ, ವಿವಿಧ ನಮೂನೆಯ ಕಾಳುಗಳು ಖರೀದಿ ಮಾಡಿದ್ದಾರೆ. ವಿಶ್ವ ವಿದ್ಯಾಲಯದ ಆವರಣದಲ್ಲಿ ನೀರು, ಕಾಳುಗಳು ಹಾಕಿ ಇಡುವ ಮೂಲಕ ಪ್ರಾಣಿ, ಪಕ್ಷಿಗಳ ಹಸಿವು, ದಾಹ ನೀಗಿಸುವ ಮೂಲಕ ಮಾನವೀಯತೆ ತೋರಿದ್ದಾರೆ. ಪ್ರಾಣಿ, ಪಕ್ಷಿಗಳು ಆಹಾರ, ನೀರು ಹಾಕಲು ತುಂಬ ಖುಷಿಯಾಗುತ್ತೆ ಎನ್ನುತ್ತಾರೆ ವಿದ್ಯಾರ್ಥಿಗಳು. ಹೀಗಾಗಿ ನೀವು ಆಹಾರ, ನೀರು ಹಾಕಿ ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ನೆರವಾಗಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬೀದರ್​: ಬಿಸಿಲಿಗೆ ಬತ್ತಿದ ಕೆರೆಗಳು; ದಿನನಿತ್ಯ ಪ್ರಾಣಿ-ಪಕ್ಷಿಗಳಿಗೆ ನೀರಿಟ್ಟು ದಾಹ ನೀಗಿಸುತ್ತಿರೋ ಯುವಕರು

ಪ್ರಾಣಿ, ಪಕ್ಷಿಗಳಿಗೆ ಪ್ರತಿಯೊಬ್ಬರು ಆಹಾರ, ನೀರು ತಮ್ಮ ಮನೆಗಳ ಮೇಲ್ಛಾವಣೆ ಮೇಲೆ, ಅಂಗಳದಲ್ಲಿ ಇಡುವ ಮೂಲಕ ಏಪ್ರಿಲ್ ಫೂಲ್ ಡೇ ಬದಲಾಗಿ ಏಪ್ರಿಲ್ ಕೂಲ್ ಡೇ ಆಚರಣೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಮೂಲಕ ಕರೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಕರೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಬೆಂಕಿಯ ಬಿಸಿಲಿಗೆ ಪಕ್ಷಿಗಳು, ಪ್ರಾಣಿಗಳು ಬಸವಳಿದು ಹೋಗಿವೆ. ಆಹಾರ, ನೀರು ಕಂಡರೆ ಸಾಕು ಓಡೋಡಿ ಬಂದು ದಾಹ ತೀರಿಸಿಕೊಂಡು ಹೋಗುತ್ತಿವೆ. ವಿದ್ಯಾರ್ಥಿಗಳು ಕಾಲೇಜ್ ಆವರಣದಲ್ಲಿ ಮಾತ್ರ ಆಹಾರ, ನೀರು ಇಡುತ್ತಿಲ್ಲ. ತಮ್ಮ ತಮ್ಮ ಮನೆ ಅಂಗಳ, ಮಾಳಿಗೆ ಮೇಲೂ ಆಹಾರ, ನೀರು ಇಡುವ ಮೂಲಕ ಮಾನವೀಯತ ತೋರಿದ್ದಾರೆ.

ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಎರಡ್ಮೂರು ವರ್ಷಗಳಿಂದ ಸದ್ದಿಲ್ಲದೇ ಈ ಕಾರ್ಯ ಮಾಡುತ್ತಿದ್ದಾರೆ. ಆದ್ರೆ, ಈ ವರ್ಷ ಭೀಕರ ಬರದ ಹಿನ್ನಲೆಯಲ್ಲಿ ಪ್ರಾಣಿ, ಪಕ್ಷಿಗಳು ತೀವ್ರ ಸಂಕಟದಲ್ಲಿವೆ. ಜಮೀನುಗಳಲ್ಲಿ ಬೆಳೆ ಇಲ್ಲದ ಕಾರಣ ಒಂದು ಕಾಳು ಸಿಗುತ್ತಿಲ್ಲ. ಹೀಗಾಗಿ ಪ್ರಾಣಿ, ಪಕ್ಷಗಳು ಕೂಡ ಆಹಾರ ನೀರು ಇಲ್ಲದೇ ಗೋಳಾಡುವ ದೃಶ್ಯಗಳು ಮಕಲುಕುವಂತಿವೆ. ಈ ಹಿನ್ನಲೆ ಪ್ರಾಣಿ, ಪಕ್ಷಿಗಳ ಸಂಕುಲ ಉಳಿಸಲು ವಿದ್ಯಾರ್ಥಿಗಳು ಕೈಗೊಂಡ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯ ಆವರಣದಲ್ಲಿ ನಿತ್ಯ ಬೆಳಗ್ಗೆ, ಸಂಜೆಯಾದರೆ ಸಾಕು ವಿದ್ಯಾರ್ಥಿಗಳು ತಂಡ ತಂಡವಾಗಿ ಹೋಗಿ ಕಾಳು, ನೀರು ಹಾಕಿ ಪ್ರಾಣಿ ಪಕ್ಷಿಗಳಿಗೆ ಅನುಕೂಲ ಆಗುವ ಜಾಗದಲ್ಲಿ ಇಡುತ್ತಾರೆ. ಬಳಿಕ ಪ್ರಾಣಿ, ಪಕ್ಷಿಗಳು ಬಂದು ವಿದ್ಯಾರ್ಥಿಗಳು ಹಾಕಿ ಆಹಾರ ತಿಂದು, ನೀರು ಕುಡಿದು ಖುಷಿ ಖುಷಿಯಿಂದ ವಾಪಸ್ ಆಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ತುಂಬ ಖುಷಿ ಕೊಡುತ್ತಿದೆ. ಹೀಗಾಗಿ ಎಲ್ಲರೂ ಕಾಳು, ನೀರು ಹಾಕುವ ಮೂಲಕ ಪ್ರಾಣಿ ಸಂಕುಲ ಉಳಿಸಿ, ಬೆಳಿಸಿ ಎನ್ನುವ ಸಂದೇಶ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ