ಗದಗ: ಜಮೀನಿನಲ್ಲಿ ಬೆಳೆದಿದ್ದ 2.45 ಲಕ್ಷ ಮೌಲ್ಯದ ಗಾಂಜಾ ವಶ
Gadag News: ಗದಗ ತಾಲೂಕಿನ ಮದಗಾನೂರು, ಬೇಳಹೊಡ ಗ್ರಾಮದಲ್ಲಿ ಜಿಲ್ಲಾ ಅಬಕಾರಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಗಾಂಜಾ ವಶಪಡಿಸಲಾಗಿದೆ. ಹುಚ್ಚಪ್ಪ ತಳವಾರ, ಅಯ್ಯನಗೌಡ ಗೌಡಪ್ಪಗೌಡ, ತಿಪ್ಪನಗೌಡ ಸೆರೆಯಾಗಿದ್ದಾರೆ.
ಗದಗ: ಜಮೀನಿನಲ್ಲಿ ಬೆಳೆದಿದ್ದ 2.45 ಲಕ್ಷ ಮೌಲ್ಯದ 25 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಗದಗ ತಾಲೂಕಿನ ಮದಗಾನೂರು, ಬೇಳಹೊಡ ಗ್ರಾಮದಲ್ಲಿ ಜಿಲ್ಲಾ ಅಬಕಾರಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಗಾಂಜಾ ವಶಪಡಿಸಲಾಗಿದೆ. ಹುಚ್ಚಪ್ಪ ತಳವಾರ, ಅಯ್ಯನಗೌಡ ಗೌಡಪ್ಪಗೌಡ, ತಿಪ್ಪನಗೌಡ ಸೆರೆಯಾಗಿದ್ದಾರೆ. ಅಬಕಾರಿ ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಉಡುಪಿ: ಗಾಂಜಾ, ಬ್ರೌನ್ ಶುಗರ್ ಜಪ್ತಿ ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ 1 ಕೆಜಿ 800 ಗ್ರಾಂ, 1 ಗ್ರಾಂ ಬ್ರೌನ್ ಶುಗರ್ ಗಾಂಜಾ ಜಪ್ತಿ ಮಾಡಲಾಗಿದೆ. ಅಮಲು ಪದಾರ್ಥ ಸಾಗಾಟ ಆರೋಪದಲ್ಲಿ ಅಸ್ಬಾಭಾಗ್ನ ಮೊಹಮ್ಮದ್ ಜಾಫರ್ ಗುಡುಮಿಯಾ ಸೆರೆ ಆಗಿದ್ದಾರೆ. ಉತ್ತರಕನ್ನಡ ಜಿಲ್ಲೆ ಕಾರವಾರದ ಅಸ್ಬಾಭಾಗ್ನ ಜಾಫರ್ ಸೆರೆ ಆಗಿದ್ದಾರೆ. ಕುಂದಾಪುರ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾಗಲಕೋಟೆ: ಚಲಿಸುತ್ತಿದ್ದ ಬೈಕ್ನಿಂದ 2 ಲಕ್ಷ ಎಗರಿಸಿದ ದುಷ್ಕರ್ಮಿ ಚಲಿಸುತ್ತಿದ್ದ ಬೈಕ್ನಿಂದ 2 ಲಕ್ಷ ಹಣ ಎಗರಿಸಿದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಮಾರುಕಟ್ಟೆಯಲ್ಲಿ ನಡೆದಿದೆ. ಸಿಂಡಿಕೇಟ್ ಬ್ಯಾಂಕ್ನಲ್ಲಿ 2 ಲಕ್ಷ ಹಣ ಡ್ರಾಮಾಡಿದ್ದ ಸುರೇಶ್, ಬೈಕ್ನ ಸೈಡ್ ಬ್ಯಾಗ್ನಲ್ಲಿ ಹಣದ ಕಂತೆ ಇರಿಸಿ ತೆರಳಿದ್ದರು. ಬ್ಯಾಂಕ್ನಿಂದ ಬೈಕ್ ಸವಾರ ಸುರೇಶ್ನನ್ನು ಹಿಂಬಾಲಿಸಿದ್ದ ಕಳ್ಳ, ಮಾರುಕಟ್ಟೆಯಲ್ಲಿ ಬೈಕ್ ನಿಧಾನವಾಗುತ್ತಿದ್ದಂತೆ ಹಣ ಎಗರಿಸಿದ್ದಾನೆ. ಗೋಲಬಾವಿ ಗ್ರಾಮದ ಸುರೇಶ್ಗೆ ಸೇರಿದ 2 ಲಕ್ಷ ಹಣ ಕಳವಾಗಿದೆ. 2 ಲಕ್ಷ ಹಣದ ಕಂತೆ ಎಗರಿಸುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಚಲಿಸುತ್ತಿದ್ದ ಬೈಕ್ನಿಂದ 2 ಲಕ್ಷ ಹಣ ಎಗರಿಸಿದ ದೃಶ್ಯ ವೈರಲ್ ಆಗಿದೆ. ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಿಸ್ತೂಲ್ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರ ಬಂಧನ: 2 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶಕ್ಕೆ
ಇದನ್ನೂ ಓದಿ: Crime News: ಅಕ್ರಮವಾಗಿ 1 ಲಕ್ಷಕ್ಕೆ ಮಾರಲು ತಂದಿದ್ದ ಹಂದಿ ಚಿಪ್ಪು ಜಪ್ತಿ; ಇಬ್ಬರ ಬಂಧನ
Published On - 11:00 pm, Fri, 22 October 21