ಗದಗನ ಶಿವಾನಂದ ಮಠದ ಪೀಠಾಧಿಪತಿಗಳ ಗುದ್ದಾಟಕ್ಕೆ ತಾತ್ಕಾಲಿಕ ತೆರೆ: ಇಬ್ಬರೂ ಸ್ವಾಮಿಜಿಗಳಿಂದ ಶ್ರೀಮಠದಲ್ಲಿ ಧ್ವಜಾರೋಹಣ
ಗದಗನ ಶಿವಾನಂದ ಮಠದ ಪೀಠಾಧಿಪತಿಗಳ ಗುದ್ದಾಟಕ್ಕೆ ಸದ್ಯಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಇದೀಗ ಇಬ್ಬರೂ ಸ್ವಾಮಿಜಿಗಳಿಂದ ಶ್ರೀಮಠದಲ್ಲಿ ಜಾತ್ರಾ ಪ್ರಯುಕ್ತ ಶ್ರೀಮಠದ ಗದ್ದುಗೆ ಮುಂಭಾಗದಲ್ಲಿ ಪ್ರಣವ ಧ್ವಜಾರೋಹಣ ಮಾಡಲಾಗಿದೆ. ಹಿರಿಯ ಶ್ರೀ ಅಭಿನವ ಶಿವಾನಂದ ಸ್ವಾಮಿಜಿ ಹಾಗೂ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮಿಜಿ ಸೇರಿಕೊಂಡು ಧ್ವಜಾರೋಹಣ ಮಾಡಿದ್ದಾರೆ.
ಗದಗ, ಮಾರ್ಚ್ 2: ಗದಗನ ಶಿವಾನಂದ ಮಠ (Sivananda Mutt) ದ ಪೀಠಾಧಿಪತಿಗಳ ಗುದ್ದಾಟಕ್ಕೆ ಸದ್ಯಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಇದೀಗ ಇಬ್ಬರೂ ಸ್ವಾಮಿಜಿಗಳಿಂದ ಶ್ರೀಮಠದಲ್ಲಿ ಜಾತ್ರಾ ಪ್ರಯುಕ್ತ ಶ್ರೀಮಠದ ಗದ್ದುಗೆ ಮುಂಭಾಗದಲ್ಲಿ ಪ್ರಣವ ಧ್ವಜಾರೋಹಣ ಮಾಡಲಾಗಿದೆ. ಹಿರಿಯ ಶ್ರೀ ಅಭಿನವ ಶಿವಾನಂದ ಸ್ವಾಮಿಜಿ ಹಾಗೂ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮಿಜಿ ಸೇರಿಕೊಂಡು ಧ್ವಜಾರೋಹಣ ಮಾಡಿದ್ದಾರೆ. ಕಿರಿಯ ಶ್ರೀಗಳನ್ನ ಹೊರಗಿಟ್ಟು ಹಿರಿಯ ಶ್ರೀಗಳು ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದು ಕಿರಿಯ ಶ್ರೀಗಳು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಕೋರ್ಟ್ ಆದೇಶದಂತೆ ಕಿರಿಯ ಶ್ರೀಗಳ ಜೊತೆಗೂಡಿಯೇ ಜಾತ್ರೆ ಮಾಡಬೇಕು ಅಂತ ಭಕ್ತರು ಆಗ್ರಹಿಸಿದ್ದರು. ಇದಕ್ಕೆ ಒಪ್ಪದೇ ಭಕ್ತರ ಜೊತೆ ಹಿರಿಯ ಶ್ರೀಗಳು ವಾಗ್ವಾದ ನಡೆಸಿದ್ದರು. ನಿನ್ನೆ ಗದಗ ಎಸ್ಪಿ ಬಿಎಸ್.ನೇಮಗೌಡ ನೇತೃತ್ವದಲ್ಲಿ ಶಾಂತಿ ಸಭೆ ಮೂಲಕ ಸಂಧಾನ ಮಾಡಲಾಗಿದೆ. ಇಬ್ಬರೂ ಸ್ವಾಮಿಜಿಗಳ ಭಕ್ತರೊಂದಿಗೆ ಶಾಂತಿ ಸಭೆ ಮಾಡಲಾಗಿದೆ. ಪರಿಣಾಮ ಜಾತ್ರಾ ಪ್ರಯುಕ್ತ ಧ್ವಜಾರೋಹಣದಲ್ಲಿ ಇಬ್ಬರೂ ಸ್ವಾಮಿಜಿಗಳು ಹಾಜರಾಗಿ ಧ್ವಜಾರೋಹಣ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನಲೆಗೆ ಬಂದ ಗದಗಿನ ಶಿವಾನಂದ ಮಠದ ಶ್ರೀಗಳ ಪೀಠ ಗುದ್ದಾಟ! ಮಠದ ಅಂಗಳದಲ್ಲಿ ಬಿಗುವಿನ ವಾತಾವರಣ
ಜಿಲ್ಲೆಯ ಪ್ರತಿಷ್ಠತ ಶಿವಾನಂದ ಮಠದ ಉಭಯ ಶ್ರೀಗಳ ಪೀಠ ಗಲಾಟೆ ಮತ್ತೆ ಜೋರಾಗಿದೆ. ಕಳೆದ ವರ್ಷದಿಂದ ಉಭಯ ಶ್ರೀಗಳ ನಡುವಿನ ಗುದ್ದಾಟ ಬಲು ಜೋರಾಗಿದೆ. ವರ್ಷಗಳು ಕಳೆದರೂ ಇನ್ನೂ ವೈಮನಸ್ಸು ದೂರವಾಗಿಲ್ಲ. ಈಗ ಮಾರ್ಚ್ 8 ರಂದು ಶಿವರಾತ್ರಿ ದಿನದಂದು ಶಿವಾನಂದ ಮಠದ ಜಾತ್ರಾಮಹೋತ್ಸವ ನಡೆಯಲಿದೆ. ಕಿರಿಯ ಶ್ರೀಗಳನ್ನು ಹೊರಗಿಟ್ಟು ಹಿರಿಯ ಶ್ರೀಗಳು ಜಾತ್ರಾಮಹೋತ್ಸವಹ ನಡೆಸಲು ಸಜ್ಜಾಗಿದ್ದಾರೆ. ಇದು ಕಿರಿಯ ಶ್ರೀಗಳು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳು ಮಠದ ಪರಂಪರೆಯಂತೆ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಉತ್ತರಾಧಿಕಾರಿ ಪೀಠದಿಂದ ತೆಗೆಯಲಾಗಿದೆ ಅಂತ ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು ಹೇಳಿದ್ದರು. ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಈ ಕಿರಿಯ ಶ್ರೀಗಳ ಹಕ್ಕುಗಳ ದಕ್ಕೆಯಾಗದಂತೆ ಮಠದ ಆಡಳಿತ ನಡೆಯಬೇಕು ಅಂತ ಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಹೀಗಾಗಿ ಜಾತ್ರಾಮಹೋತ್ಸವದ ಕಿರಿಯ ಶ್ರೀಗಳ ಜೊತೆಗೆ ಮಾಡಬೇಕು ಅಂತ ಶ್ರೀಗಳ ಪರ ಭಕ್ತು ಹಿರಿಯ ಶ್ರೀಗಳ ಮನವಿ ಮಾಡಿದ್ಧಾರೆ. ಆದರೆ ಹಿರಿಯ ಶ್ರೀಗಳು ಮಾತ್ರ ಭಕ್ತ ಮನವಿಗೆ ಬಗ್ಗುತ್ತಿಲ್ಲ.
ಇದನ್ನೂ ಓದಿ: ಭಾವೈಕ್ಯತೆ ದಿನಾಚರಣೆ ಬಗ್ಗೆ 2 ಮಠಗಳ ಮಧ್ಯೆ ಸಂಘರ್ಷ: ಸಿದ್ಧರಾಮ ಶ್ರೀಗಳು ಹೇಳಿದ್ದಿಷ್ಟು
ಇದು ಭಕ್ತರು ಹಾಗೂ ಕಿರಿಯ ಶ್ರೀಗಳನ್ನು ಕೆರಳುವಂತೆ ಮಾಡಿದೆ. ಇಂದು ಮಠದ ಆವರಣದಲ್ಲಿ ಕಿರಿಯ ಶ್ರೀಗಳ ಪರ ನೂರಾರು ಭಕ್ತರು ಜಮಾಯಿಸಿದ್ರು. ಕಿರಿಯ ಶ್ರೀ ಸದಾಶಿವಾನಂದ ಭಾರತಿ ನೇತೃತ್ವದಲ್ಲಿ ಸಭೆ ಮಾಡಿದ್ದಾರೆ. ಕೋರ್ಟ್ ಆದೇಶದಂತೆ ಕಿರಿಯ ಶ್ರೀಗಳ ಜೊತೆಗೂಡಿಯೇ ಜಾತ್ರಾಮಹೋತ್ಸವ ಮಾಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಬೇಕು. ಒಂದು ವೇಳೆ ಬಿಟ್ಟು ಜಾತ್ರಾಮಹೋತ್ಸವ ಮಾಡಲು ನಿರ್ಧಾರ ಮಾಡಿದರೆ ಭಕ್ತರು ಮುಂದಿನ ನಿರ್ಧಾರ ಮಾಡ್ತಾರೆ ಅಂತ ಕಿರಿಯ ಶ್ರೀಗಳು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.